ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು!

ನಮ್ಮ ಹುಬ್ಬಳ್ಳಿ ಧಾರವಾಡ ಅಂದ್ರ ಬಾಳ್ ದೊಡ್ಡ ಸಿಟಿ. ಬೆಂಗಳೂರು ಬಿಟ್ರ ಇದ ನೆಕ್ಸ್ಟ್ ಸಿಟಿ ಅಂತಾ ಎಲ್ಲಾರಿಗೂ ಗೊತ್ತ್,  ಹೀಂಗಾಗಿ ಈ ನಗರದಾಗ ಮೊಬೈಲ್ ಕಳ್ಳರ ಹಾವಳಿ ಬಾಳ ಆಗಿತ್ತು, ಬಸ್ಸಿನ್ಯಾಗ, ಮಾರ್ಕೇಟ್ ನ್ಯಾಗ, ಬಸ್ ಸ್ಟಾಪ್ ನ್ಯಾಗ ಮಂದಿ ಮೊಬೈಲ್ ಕಳ್ಳತನ ಮಾಡಿ ಸಿಕ್ಕಷ್ಟು ರೊಕ್ಕಕ್ಕ ಮಾರಿ ಅದ ರೊಕ್ಕದಾಗ ಮಜಾ ಮಾಡಿದ್ರ, ಇತ್ತಾಗ್ ಮೊಬೈಲ್ ಕಳ್ಕೊಂಡವರ ಅಯ್ಯೋ ಯಪ್ಪಾ ನನ್ನ ಫೋನ್ ಹೊತ್ರೋ ಮಾರಾಯ ಅಂತಾ ಬೇಜಾರ್ ಮಾಡ್ಕೊಂತಿದ್ರು, ಹೋಗಿ ಪೊಲೀಸ್ ಸ್ಟೇಶನ್ ಗೆ ಕಂಪ್ಲೇಟ್ ಕೋಡಾಕ್ ಕೂಡಾ ಹಿಂದ ಮುಂದ ನೋಡ್ತಿದ್ರು.

Written by - Yashaswini V | Last Updated : May 3, 2023, 09:12 AM IST
  • ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋಗಿದೆ ಎಂದು ಚಿಂತಿಸಬೇಡಿ
  • ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲು ಹುಬ್ಬಳ್ಳಿ ಧಾರವಾಡ ಪೊಲೀಸರು ಇ ಸ್ಪಂದನ ಪೋರ್ಟಲ್ ಅನ್ನು ಪರಿಚಯಿಸಿದ್ದಾರೆ
  • ಜಸ್ಟ್ ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಮೊಬೈಲ್ ಅನ್ನು ಮರಳಿ ಪಡೆಯಿರಿ
ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು! title=

ಹುಬ್ಬಳ್ಳಿ: ಮೊಬೈಲ್/ಸ್ಮಾರ್ಟ್ಫೋನ್ ಕೇವಲ ನಾವು ಬಳಸುವ ಆಧುನಿಕ ತಂತ್ರಜ್ಞಾನದ ಒಂದು ಭಾಗವಲ್ಲ. ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ನಮಗೆ ಅಗತ್ಯವಾದ ಅತ್ಯಂತ ಅವಶ್ಯಕತೆಯಲ್ಲಿನ ಒಂದು ಸಾಧನ ಅದಕ್ಕಿಂತಲೂ ನಮ್ಮ ವೈಯಕ್ತಿಕ ಬದುಕಿನ ಮಹತ್ವದ ಮಾಹಿತಿ ಸಂಗ್ರಹದ ಸಾಧನ. ಆದ್ದರಿಂದ ಮೊಬೈಲ್ ಎಷ್ಟು ಅವಶ್ಯಕತೆ ಮತ್ತು ಅದರ ಮಹತ್ವ ಏನು ಅಂತಾ ನಮಗೆಲ್ಲರಿಗೂ ಗೊತ್ತೇ ಇದೆ. ಅಂತಹ ಮೊಬೈಲ್ ಅನ್ನು ಕಳೆದುಕೊಂಡಾಗ ಮನಸ್ಥಿತಿ ಹೇಗಿರುತ್ತೆ..! ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು ಅದರ ನೋವು! ಆದರೆ, ಈಗ ಮೊಬೈಲ್ ಕಳೆದು ಹೋಯಿತಲ್ಲಾ ಅಂತ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಇಂತಹ ಸಮಸ್ಯೆಗೆ ಪರಿಹಾರ ನೀಡಲು ನಮ್ಮ ಹುಬ್ಬಳ್ಳಿ ಧಾರವಾಡ ಪೊಲೀಸರು ಒಂದು ಹೊಸ ಪ್ಲ್ಯಾನ್ ಮಾಡಿದ್ದಾರೆ.

ನಮ್ಮ ಹುಬ್ಬಳ್ಳಿ ಧಾರವಾಡ ಅಂದ್ರ ಬಾಳ್ ದೊಡ್ಡ ಸಿಟಿ. ಬೆಂಗಳೂರು ಬಿಟ್ರ ಇದ ನೆಕ್ಸ್ಟ್ ಸಿಟಿ ಅಂತಾ ಎಲ್ಲಾರಿಗೂ ಗೊತ್ತ್,  ಹೀಂಗಾಗಿ ಈ ನಗರದಾಗ ಮೊಬೈಲ್ ಕಳ್ಳರ ಹಾವಳಿ ಬಾಳ ಆಗಿತ್ತು, ಬಸ್ಸಿನ್ಯಾಗ, ಮಾರ್ಕೇಟ್ ನ್ಯಾಗ, ಬಸ್ ಸ್ಟಾಪ್ ನ್ಯಾಗ ಮಂದಿ ಮೊಬೈಲ್ ಕಳ್ಳತನ ಮಾಡಿ ಸಿಕ್ಕಷ್ಟು ರೊಕ್ಕಕ್ಕ ಮಾರಿ ಅದ ರೊಕ್ಕದಾಗ ಮಜಾ ಮಾಡಿದ್ರ, ಇತ್ತಾಗ್ ಮೊಬೈಲ್ ಕಳ್ಕೊಂಡವರ ಅಯ್ಯೋ ಯಪ್ಪಾ ನನ್ನ ಫೋನ್ ಹೊತ್ರೋ ಮಾರಾಯ ಅಂತಾ ಬೇಜಾರ್ ಮಾಡ್ಕೊಂತಿದ್ರು, ಹೋಗಿ ಪೊಲೀಸ್ ಸ್ಟೇಶನ್ ಗೆ ಕಂಪ್ಲೇಟ್ ಕೋಡಾಕ್ ಕೂಡಾ ಹಿಂದ ಮುಂದ ನೋಡ್ತಿದ್ರು.

ಇದನ್ನೂ ಓದಿ- Automatic Car ಖರೀದಿಸುವ ಮುನ್ನ ಅದರ ಅನುಕೂಲ, ಅನಾನುಕೂಲಗಳ ಬಗ್ಗೆ ತಪ್ಪದೇ ತಿಳಿಯಿರಿ

ಆದ್ರ ನಮ್ಮ ಹುಬ್ಬಳ್ಳಿ ಧಾರವಾಡ ಪೊಲೀಸ್ರು ಇಂತಹ ಮೊಬೈಲ್ ಕಳ್ಳತನಕ್ಕ ಕಡಿವಾಣ ಹಾಕಬೇಕು ಅಂತ ಫ್ಲ್ಯಾನ್ ಮಾಡಿ 'ಇ- ಸ್ಪಂದನಾ ಪೋರ್ಟಲ್ ' ಅಂತಾ ಮಾಡ್ಯಾರ್. ನೀವು ಒಂದ್ವೇಳೆ ನಿಮ್ಮ ಮೊಬೈಲ್ ಕಳ್ಕೊಂಡಿದ್ರ ಆ ಪೋರ್ಟಲ್ ಗೆ ಹೋಗಿ ನಿಮ್ಮ ಫೋನ್ ಯಾವ ಕಂಪನಿದು, ಯಾವ ಸಿಮ್ ಇತ್ತು, ಎಲ್ಲಿ ಕಳಿತು, ಅಂತಾ ಅದರೊಳಗ ಡೀಟೇಲ್ಸ್ ತುಂಬಿದ್ರ ಸಾಕ್ ನೀವ ಕಳ್ಕೊಂಡ ಮೊಬೈಲ್ ಗೆ ಯಾರಾದ್ರೂ ಸಿಮ್ ಹಾಕಿದ್ರೆ ಸಾಕ್ ಪಟ್ಟನ ನೀವ್ ಕಳ್ಕೊಂಡ ಮೊಬೈಲ್ ನಿಮ್ಮ ಕೈಗೆ ಸಿಕ್ಕ ಹಂಗ. ಹೀಂಗಾಗಿ ಇದ ಏಪ್ರಿಲ್ ತಿಂಗಳದಾಗ ಹು-ಧಾ ದಾಗ ಕಳ್ಳತನ ಆದ ಲಕ್ಷಾಂತರ ಮೌಲ್ಯದ 112 ಮೊಬೈಲ್ ಹುಡುಕಿಕೊಡು ಕೆಲ್ಸಾ ಹು-ಧಾ ಪೊಲೀಸರ ಮಾಡಿ ಮೊಬೈಲ್ ಕಳ್ಕೊಂಡವರ ಮುಖದಾಗ ನಗು ಬರಿಸಿದ್ದಾರೆ. ಇದಕ್ಕ ಕಾರಣರಾದ  ಸಿಬ್ಬಂದಿಗೆ ಕಮೀಷನರ್ ರಮನ್ ಗುಪ್ತಾ ಬಹುಮಾನ ಕೊಟ್ಟಾರ್. 

ಹೀಂಗಾಗಿ ಹುಬ್ಬಳ್ಳಿ ಧಾರವಾಡ ಪೊಲೀಸರ ಚುಲೋ ಕೆಲ್ಸಾ ಮಾಡಾಕುಂತಾರ ಅದಕ್ಕ ಕಳದ ಹೋಗಿದ್ದ ನನ್ನ ಮೊಬೈಲ್ ಹುಡುಕಿಕೊಟ್ಟಿದ್ದ ಸಾಕ್ಷಿ ನೋಡ್ರಿ ನನಗ ನನ್ನ ಮೊಬೈಲ್ ಮತ್ತ ಸಿಗತೇತಿ ಇಲ್ಲೊ ಅಂತಾ ಮಾಡಿದ್ದೆ, ಆದ್ರ ನನ್ನ ಮೊಬೈಲ್ ನನಗ ಈಗ ಸಿಕ್ಕೇತಿ. ನನಗ ಬಾಳ ಖುಷಿ ಆಗೇತಿ ಅಂತಾರ್ ನೋಡ್ರಿ ಮೊಬೈಲ್ ಕಳಕೊಂಡವ್ರು. 

ಇದನ್ನೂ ಓದಿ- ಗ್ರಾಹಕರನ್ನು ನಿರಾಸೆಗೆ ದೂಡಿದ ಈ ಎಲೆಕ್ಟ್ರಿಕ್ ಕಾರು ! ಈ 10 ಅಂಶಗಳೇ ಕಾರಣ

ಇಷ್ಟ ದಿನಾ ಕಳ್ಕೊಂಡು ಮೊಬೈಲ್ ಹಂಗ್ ತಿರುಪತಿ ಹುಂಡಿಗೆ ಹಾಕಿದ ರೊಕ್ಕಾ ಎರಡು ಗೋವಿಂದಾ ಗೋವಿಂದಾ ಅಂತಿದ್ದವರ ಇದನ್ನೆಲ್ಲಾ ಬಿಟ್ಟ ಪೊಲೀಸರ ಹೇಳಿದ ಇ-ಸ್ಪಂದನಾ ಪೋರ್ಟಲ್ ಹೋಗಿ ಡೀಟೇಲ್ಸ್ ಹಾಕಿ ಕಳ್ಕೊಂಡ ಮೊಬೈಲ್ ಮತ್ತ ನಿಮ್ ಕೈಗೆ ಸಿಗುಹಾಂಗ್ ಮಾಡ್ಕೋರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News