Low Cost Housing Tips: ವಿವಿಧ ವರದಿಗಳ ಪ್ರಕಾರ ಹೆಚ್ಚಿನ ಜನರು ನಿವೇಶನ ಖರೀದಿಸಿ ಮನೆ ನಿರ್ಮಿಸಲು ಬಯಸುತ್ತಾರೆ. ವಸತಿ ನಿವೇಶನಗಳ ಬೇಡಿಕೆ ಇಂದಿನ ಕಾಲದಲ್ಲಿ ಹೆಚ್ಚಾಗಿದೆ ಎಂದು ಮ್ಯಾಜಿಕ್ಬ್ರಿಕ್ಸ್ ಡಾಟ್ ಕಾಂ. ಆಸ್ತಿ ಹುಡುಕಾಟ ತಾಣ ಹೇಳುತ್ತದೆ.  ಸಾಲ (Home Loan) ಪಡೆದು ಅಥವಾ ಸಾಲ ಪಡೆಯದೇ ನಿವೇಶನ ಖರೀದಿಸುವುದು ಸುಲಭ ಎಂಬುದು ನಿಜವಾದರೂ ಕೂಡ ಆ ಜಾಗದಲ್ಲಿ ಮನೆ ನಿರ್ಮಾಣ ಮಾತ್ರ ಸುಲಭದ ಮಾತಲ್ಲ. ಮನೆ ನಿರ್ಮಾಣದ ವೇಳೆ ಆಗುವ ವೆಚ್ಚಕ್ಕೆ ಕಡಿವಾಣ ಹಾಕುವುದೇ ಇಲ್ಲಿನ ದೊಡ್ಡ ಸವಾಲು. ಈ ಕುರಿತು ಮಾತನಾಡುವ ಎನ್ರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ ನ ನಿರ್ದೇಶಕ ಹಾಗೂ ಸಂಶೋಧನಾ ಮುಖ್ಯಸ್ಥ ಪ್ರಶಾಂತ್ ಠಾಕೂರ್, ಸೂಕ್ತ ಯೋಜನೆ ರೂಪಿಸಿ ಮನೆಯನ್ನು ನಿರ್ಮಿಸಿದರೆ ಇದರಲ್ಲಿ ನಾವು ಅಧಿಕ ಉಳಿತಾಯ ಮಾಡಬಹುದು ಎನ್ನುತ್ತಾರೆ.


COMMERCIAL BREAK
SCROLL TO CONTINUE READING

ಆರ್ಕಿಟೆಕ್ಟ್ ಹಾಫೀಸ್ ಕಾಂಟ್ರಾಕ್ಟರ್ ಕೂಡ ಇದೆ ಮಾತನ್ನು ಒತ್ತಿ ಹೇಳುತ್ತಾರೆ. ಸಣ್ಣ ಪುಟ್ಟ  ಸಂಗತಿಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿದರೆ ನಿರ್ಮಾಣದ ವೆಚ್ಚ ಸುಮಾರು ಶೇಕಡಾ 12-15 ರಷ್ಟು ತಗ್ಗಿಸಬಹುದು ಅಥವಾ ಕಾರ್ಪೋರೆಟ್ ಏರಿಯಾವನ್ನು ಶೇ. 15 ರಷ್ಟು ಹೆಚ್ಚಿಸಬಹುದು.


ಇಂತಹುದರಲ್ಲಿ ನೀವೆಷ್ಟು ಉಳಿತಾಯ ಮಾಡಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ನಿರ್ಮಾಣ ಕಾರ್ಯಕ್ಕೆ ನೀವು ಆಯ್ದುಕೊಂಡ ಜಾಗವನ್ನು ಆಧರಿಸಿ ಇರಲಿದೆ. ಹಾಗೆ ನೋಡಿದರೆ ನಿರ್ಮಾಣದ ವೆಚ್ಚ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಾಗಿರುತ್ತದೆ. ಆದರೆ ಸರ್ವೇಸಾಮಾನ್ಯವಾಗಿ ಒಂದು ಸ್ಕ್ವೆಯರ್ ಫೀಟ್ ಗೆ ಸುಮಾರು 1500 ತಗಲುತ್ತದೆ. ದುಬಾರಿ  ಪೀಠೋಪಕರಣಗಳನ್ನು ಬಳಸಿ ಒಂದು ವೇಳೆ ನೀವು ಮನೆ ನಿರ್ಮಿಸಿದರೆ ಈ ವೆಚ್ಚ ಸುಮಾರು 2000 ರೂ.ಗಳಷ್ಟು ಆಗುತ್ತದೆ. ಹಾಗಾದರೆ ಬನ್ನಿ ನಿರ್ಮಾಣ ವೆಚ್ಚವನ್ನು ತಗ್ಗಿಸಲು ಯಾವ ಟಿಪ್ಸ್ ಗಳನ್ನು ಅನುಸರಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.


ಸರಿಯಾದ ನಿವೇಶನ
ರಸ್ತೆಗೆ ಸಮತಟ್ಟಾಗಿರುವ ನಿವೇಶನ ಖರೀದಿಸಲು ಪ್ರಯತ್ನಿಸಿ. ಈ ಕುರಿತು ಹೇಳುವ ಠಾಕೂರ್, ನಿವೇಶನ ಒಂದು ವೇಳೆ ತಗ್ಗು-ದಿನ್ನೆ ಅಥವಾ ಬಂಡೆಗಲ್ಲು ಗಳಿಂದ ಕೂಡಿದ್ದರೆ ಇಲ್ಲಿ ನಿಮ್ಮ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಜಾಗವನ್ನು ಸಮತಟ್ಟಾಗಿಸಲು ನಿಮಗೆ ನೀವು ಅಧಿಕ ವೆಚ್ಚ ಮಾಡಬೇಕಾಗಬಹುದು ಎನ್ನುತ್ತಾರೆ.


ಒಳ್ಳೆಯ ಗುತ್ತಿಗೆದಾರ ಅಥವಾ ಆರ್ಕಿಟೆಕ್ಟ್ ಆಯ್ಕೆ ಮಾಡಿ
ಒಳ್ಳೆಯ ಗುತ್ತಿಗೆದಾರರ ಸೇವೆ ಪಡೆಯಲು ತುಂಬಾ ವೆಚ್ಚವಾಗುತ್ತದೆ ಎಂಬುದು ನಿಜ ಎಂದಾದರೂ ಕೂಡ ಅವರು ಮನೆ ನಿರ್ಮಾಣ ಕಾರ್ಯದಲ್ಲಿ ವೆಚ್ಚ ಕಡಿತಗೊಳಿಸಲು ನಿಮಗೆ ಸಹಕಾರಿಯಾಗುತ್ತಾರೆ ಎಂಬುದು ಅಷ್ಟೇ ನಿಜ. ಇವರು ನಿಮ್ಮ ಮನೆ ನಿರ್ಮಾಣದ ಶೇ.10ರಷ್ಟು ವೆಚ್ಚವನ್ನು ಶುಲ್ಕದ ರೂಪದಲ್ಲಿ ನಿಮ್ಮಿಂದ ಪಡೆಯಬಹುದು. ಒಂದು ವೇಳೆ ನಿಮ್ಮ ಬಳಿ ಸಮಯವಿದ್ದು, ಖುದ್ದಾಗಿ ಮನೆ ನಿರ್ಮಾಣದ ಜವಾಬ್ದಾರಿಯನ್ನು ನೀವೇ ಹೊರಲು ಬಯಸುತ್ತಿದ್ದರೆ, ಅದನ್ನು ಕೂಡ ನೀವು ಮಾಡಬಹುದು.  ಆದರೆ, ಶೇ.10 ರಷ್ಟು ನೀವು ಉಳಿಸಲು ಸಾಧ್ಯವಿಲ್ಲ. ಏಕೆಂದರೆ ಸಬ್ ಕಾಂಟ್ರಾಕ್ಟರ್ ಸಹಾಯವನ್ನು ನೀವು ಪಡೆಯಬೇಕಾಗುತ್ತದೆ. ಅಷ್ಟಕ್ಕೂ ಮೀರಿ ನೀವೇ ಆ ಜವಾಬ್ದಾರಿಯನ್ನು ಹೊರಲು ಬಯಸುತ್ತಿದ್ದರೆ, ಮನೆಯ ಡಿಸೈನ್ ತುಂಬಾ ಸಿಂಪಲ್ಲಾಗಿಡಿ. 


ಸ್ಟ್ಯಾಂಡರ್ಡ್ ಡಿಸೈನ್ ನೊಂದಿಗೆ ಮುಂದುವರೆಯಿರಿ
ನಿಮ್ಮ ಮನಸ್ಸಿನಲ್ಲಿ ಸುಂದರ ಮನೆಯೊಂದರ ಪರಿಕಲ್ಪನೆ ಇರಬಹುದು. ಆದರೆ, ಅಂತಹ ಮನೆ ನಿರ್ಮಾಣಕ್ಕೆ ವೆಚ್ಚ ಕೂಡ ಜಾಸ್ತಿಯಾಗಿರುತ್ತದೆ. ಇಂತಹುದರಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಗ್ರಿಡ್ ಸ್ಟ್ರಕ್ಚರ್ ಜೊತೆಗೆ ಮುಂದುವರೆಯುವುದು ಉತ್ತಮ. ಇದು ತುಂಬಾ ಗಟ್ಟಿಯಾಗಿರುತ್ತದೆ ಹಾಗೂ ಹೆಚ್ಚಿನ ಭಾರವನ್ನು ಇದು ಹೊರಬಲ್ಲದು. ಕಣ್ಣಿಗೆ ಮುದ ನೀಡುವ ಸ್ಟ್ರಕ್ಚರ್ ಕಣ್ಣಿಗೆ ಮುದ ಮಾತ್ರ ನೀಡುತ್ತವೆ. ಆದರೆ, ಇವು ಅಷ್ಟೊಂದು ಗಟ್ಟಿಯಾಗಿ ಇರುವುದಿಲ್ಲ.


ಇದನ್ನು ಓದಿ- ಇನ್ಮುಂದೆ ಗೃಹ ಸಾಲಕ್ಕೂ ಸಿಗಲಿದೆ Discount, ಈ ಕಂಪನಿ ಜೊತೆ SBI ಒಡಂಬಡಿಕೆ


ಸ್ಥಳೀಯ ಖರೀದಿಗೆ ಹೆಚ್ಚಿನ ಆದ್ಯತೆ ನೀಡಿ 
ಮನೆ ನಿರ್ಮಾಣ ಕಾರ್ಯದಲ್ಲಿ ವೆಚ್ಚವನ್ನು ತಗ್ಗಿಸುವ ಅತ್ಯಂತ ಸುಲಭ ವಿಧಾನ ಎಂದರೆ. ಸ್ಥಳೀಯ ಮಟ್ಟದಲ್ಲೇ ಆದಷ್ಟು ಹೆಚ್ಚು ಖರೀದಿಯನ್ನು ಮಾಡಿ. ಸಿಮೆಂಟ್ ಆಗಲಿ, ಇಟ್ಟಿಗೆಗಳಾಗಲಿ, ಬಾಗಿಲು, ಕಿಟಕಿ ಇತ್ಯಾದಿಗಳ ಖರೀದಿ ಸ್ಥಳೀಯ ಮಟ್ಟದಲ್ಲಿ ಮಾಡಿ. ಬಲ್ಕ್ ನಲ್ಲಿ ಖರೀದಿ ಮಾಡುವುದರಿಂದ ನೀವು ಇನ್ನಷ್ಟು ಖರ್ಚು ತಗ್ಗಿಸಬಹುದು.


ಇದನ್ನು ಓದಿ-Home loan : ಹೀಗೆ ಮಾಡಿದರೆ ಗೃಹ ಸಾಲದ ಇಎಂಐ ಕಡಿಮೆಯಾಗಬಹುದು


ಆಧುನಿಕ ತಂತ್ರಜ್ಞಾನದ ಬಳಕೆ 
ಇಂಡಸ್ಟ್ರಿಯಲ್ ಕನ್ಸ್ಟ್ರಕ್ಷನ್ ನಲ್ಲಿನ ಜನಪ್ರೀಯ ಪ್ರೀ-ಇಂಜಿನೀಯರ್ಡ್ ಬಿಲ್ಡಿಂಗ್ (PEB) ಕಾನ್ಸೆಪ್ಟ್ ಅನ್ನು ಇತ್ತೀಚಿಗೆ ವಸತಿ ನಿವೇಶನಗಳಲ್ಲಿಯೂ ಕೂಡ ತನ್ನ ಜಾಗ ನಿರ್ಮಿಸುತ್ತಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, PEB ಗಳು ಮೊದಲೇ ನಿರ್ಧಾರಿದ ಸರಳ ಮತ್ತು ಸುಲಭ ಅಇರನ್ ಹಾಗೂ ಸ್ಟೀಲ್ ಸಂರಚನೆಗಳಾಗಿರುತ್ತವೆ. ಇವು ಕೇವಲ ನಿಮ್ಮ ವೆಚ್ಚವನ್ನು ಮಾತ್ರ ತಗ್ಗಿಸದೇ, ನಿರ್ಮಾಣದ ವೇಗವನ್ನು ಕೂಡ ಹೆಚ್ಚಿಸುತ್ತವೇ.


ಇದನ್ನು ಓದಿ- PMAY: ಹೋಂ ಲೋನ್ ಮೇಲೆ ಸರ್ಕಾರ ನೀಡುತ್ತಿದೆ 2.67 ಲಕ್ಷ ರೂ.ಗಳ ಲಾಭ


ಮನೆಯ ಆಯಸ್ಸಿಗೆ ಸಂಬಂಧಿಸಿದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಈ ಕುರಿತು ಮಾತನಾಡುವ ಹಾಫೀಜ್ ಕಂಟ್ರಾಕ್ಟರ್, ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಅಂದರೆ, ಗುಣಮಟ್ಟದ ಜೊತೆಗೆ ರಾಜಿಮಾಡಿಕೊಳ್ಳುವುದು ಎಂದಲ್ಲ ಎನ್ನುತ್ತಾರೆ. ಮನೆ ನಿರ್ಮಿಸುವಾಗ ಕೇವಲ ಆರಂಭಿಕ ವೆಚ್ಚಗಳ ಕುರಿತು ಮಾತ್ರ ಯೋಚಿಸದೆ, ಜೀವನ ಪೂರ್ತಿ ಅದಕ್ಕಾಗುವ ವೆಚ್ಚವನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಇದು 30 ರಿಂದ 50 ವರ್ಷಗಳದ್ದಾಗಿರುತ್ತದೆ. ಈ ಕುರಿತು ಮಾತನಾಡುವ IMK ಆರ್ಕಿಟೆಕ್ಟ್ ಅಂಡ್ ಅರ್ಬನ್ ನ ರಾಹುಲ್ ಕಾದರಿ, ಆರ್ಕಿಟೆಕ್ಟ್ ಸಹಾಯದಿಂದ ದೀರ್ಘಕಾಲದವರೆಗೆ ಬಾಳಿಕೆ ಬರುವ ಮತ್ತು ಅಗ್ಗದ ದರದಲ್ಲಿ ಸಿಗುವ ಕಚ್ಚಾಸಾಮಗ್ರಿಗಳನ್ನು ಖರೀದಿಸಿ ಎನ್ನುತ್ತಾರೆ.  ಇದು ಭವಿಷ್ಯದಲ್ಲಿನ ರಿಪೇರಿ ಹಾಗೂ ರಿಪ್ಲೇಸ್ಮೆಂಟ್ ವೆಚ್ಚವನ್ನು ತಗ್ಗಿಸುತ್ತದೆ. 


ಇದನ್ನು ಓದಿ- ದೇಶದಲಿಯೇ ಅತ್ಯಂತ ಅಗ್ಗದ ಬಡ್ಡಿದರದಲ್ಲಿ Home Loan ನೀಡಲಿದೆ ಈ ಕಂಪನಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.