ನವದೆಹಲಿ: ಇದು ಬಿರು ಬೇಸಿಗೆ (Summer). ಈ ಹೊತ್ತಿನಲ್ಲಿ ದೇಹಕ್ಕೆ ಹೆಚ್ಚಿಗೆ ವಿಟಮಿನ್, ಕ್ಯಾಲ್ಸಿಯಂ ಹಾಗೂ ಗ್ಲುಕೋಸ್ ಅಗತ್ಯವಿರುತ್ತದೆ.  ಹಾಗಾಗಿ ಬೇಸಿಗೆಯ ಆಹಾರ (Summer food)ಕ್ರಮ ಬಹಳ ಮುಖ್ಯ. ಈ ಹೊತ್ತಿನಲ್ಲಿ ಒಂದು ಕಪ್ ದ್ರಾಕ್ಷಿ (Grapes) ತಿನ್ನುವುದು ಉತ್ತಮ ಎಂದು ತಜ್ಞರು ಸಲಹೆ ಮಾಡುತ್ತಾರೆ. ಒಂದು ಕಪ್ ದ್ರಾಕ್ಷಿಯಿಂದ ಏನೇನು ಲಾಭ  ಇದೆ ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

1.  ಇಮ್ಯೂನಿಟಿ ಬೂಸ್ಟರ್ :
ದ್ರಾಕ್ಷಿ ಉತ್ತಮ ಇಮ್ಯೂನಿಟಿ ಬೂಸ್ಟರ್ (Immunity Booster).ಇದನ್ನು ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ (Immunity)ಹೆಚ್ಚಾಗುತ್ತದೆ. ಅಂತಹ ಸತ್ವ ದ್ರಾಕ್ಷಿಯಲ್ಲಿ ಅಡಗಿದೆ. ಹಾಗಾಗಿ ದ್ರಾಕ್ಷಿ ಸೇವನೆ ಅತ್ಯಂತ ಮುಖ್ಯ.


ಇದನ್ನೂ ಓದಿ : Navratri Fasting: ನವರಾತ್ರಿ ಉಪವಾಸದ ಮಾಡ್ತೀರಾ, ಹಾಗಾದ್ರೆ ಈ ಹಣ್ಣು ತರಕಾರಿಗಳನ್ನ ಸೇವಿಸಿ


2. ಬಿಪಿ ನಿಯಂತ್ರಿಸುತ್ತದೆ :
ಶರೀರದಲ್ಲಿ ಪೊಟ್ಯಾಶಿಯಂ ಸತ್ವದ ಕೊರತೆ ಉಂಟಾದಾಗ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಸಿಗುತ್ತದೆ. ಹಾಗಾಗಿ, ಬಿಪಿ (BP)ಇರುವವರು ವಾರಕ್ಕೆ ಕನಿಷ್ಠ ಮೂರು ಸಲ ದ್ರಾಕ್ಷಿ ತಿಂದರೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. 


3. ದೇಹದಲ್ಲಿ ರಕ್ತ ಪ್ರಮಾಣ ಹೆಚ್ಚಿಸುತ್ತದೆ:
ಏಕೆಂದರೆ ದ್ರಾಕ್ಷಿಯಲ್ಲಿ (Grapes), ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಕ್ಲೋರಾಯ್ಡ್, ಪೊಟ್ಯಾಸಿಯಮ್ ಸಲ್ಫೇಟ್, ಮೆಗ್ನೀಸಿಯಮ್ ಮತ್ತು ಅಲ್ಯೂಮಿನ್ ಮುಂತಾದ ಪ್ರಮುಖ ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ.  ಇಂಥಹ ಸತ್ವಗಳಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. 


4. ದಾಹ ಕಡಿಮೆ ಮಾಡುತ್ತದೆ :
ದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ (Water) ಅಂಶ ಕೂಡಾ ಇರುತ್ತದೆ.  ಇದರೊಂದಿಗೆ ಅಗತ್ಯ ವಿಟಮಿನ್ ಗಳು ಕೂಡಾ ಸಮೃದ್ದವಾಗಿರುತ್ತದೆ. ಹಾಗಾಗಿ, ತಕ್ಷಣದ ದಾಹ ನಿವಾರಣೆಯಲ್ಲೂ ದ್ರಾಕ್ಷಿ ಉತ್ತಮ ಕಾರ್ಯ ನಿರ್ವಹಿಸುತ್ತದೆ. 


ಇದನ್ನೂ ಓದಿ : ಇದು ಆಯುರ್ವೇದ ಸಂಜೀವಿನಿ, ತಿಳಿಯಿರಿ ನೆಲ್ಲಿಯ ಈ ಆರು ಆರೋಗ್ಯ ಮಹಿಮೆ..!


5. ಹೃದ್ರೋಗಕ್ಕೆ ರಕ್ಷಾ ಕವಚ:
ದ್ರಾಕ್ಷಿಯಲ್ಲಿರುವ ಜೀವ ಸತ್ವಗಳು ದೇಹದಲ್ಲಿ ರಕ್ತ ಸಂಚಾರವನ್ನು (Blood Circular) ಸರಾಗಗೊಳಿಸುತ್ತದೆ. ಬಿಪಿ ನಿಯಂತ್ರಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.  ಇವು  ಹ್ರದ್ರೋಗಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ. 


6. ಸ್ತನ ಕ್ಯಾನ್ಸರ್ ತಡೆಯಬಲ್ಲದು:
ಇತ್ತೀಚಿಗೆ ನಡೆದ ಒಂದು ವೈದ್ಯಕೀಯ ಸಂಶೋಧನೆಯ ಪ್ರಕಾರ ದ್ರಾಕ್ಷಿಯಲ್ಲಿ ಸ್ತನ ಕ್ಯಾನ್ಸರ್ ತಡೆಯಬಲ್ಲ ಗುಣ ವಿಶೇಷ  ಇದೆ. ಇದು ಸ್ತನ ಕ್ಯಾನ್ಸರ ನ್ನು (Cancer) ಬಹುತೇಕ ಮಟ್ಟಿಗೆ ತಡೆಯಬಲ್ಲದು ಎಂದು ಸಂಶೋಧನೆ  ಹೇಳಿದೆ.


7. ಗ್ಯಾಸ್ ಮತ್ತು ಆಸಿಡಿಟಿಗೆ ರಾಮಬಾಣ:
ಬೇಸಿಗೆಯಲ್ಲಿ (Summer) ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಗ್ಯಾಸ್ ಮತ್ತು ಅಸಿಡಿಟಿ ವಿರುದ್ದ ದ್ರಾಕ್ಷಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಶರೀರದ ತೂಕ ಹೆಚ್ಚಿಸುವಲ್ಲಿ ಆಸಕ್ತಿ ಉಳ್ಳವರಿಗೆ ದ್ರಾಕ್ಷಿ ವರದಾನವಾಗಿದೆ. 


ಇದನ್ನೂ ಓದಿ : Raisins and Honey: ನರ ದೌರ್ಬಲ್ಯಕ್ಕೆ ಉತ್ತಮ ಆಹಾರ ಒಣದ್ರಾಕ್ಷಿ ಮತ್ತು ಜೇನುತುಪ್ಪ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.