Raisins and Honey: ನರ ದೌರ್ಬಲ್ಯಕ್ಕೆ ಉತ್ತಮ ಆಹಾರ ಒಣದ್ರಾಕ್ಷಿ ಮತ್ತು ಜೇನುತುಪ್ಪ..!

ಒಣದ್ರಾಕ್ಷಿ ಮೂಳೆಗಳನ್ನು ಬಲಪಡಿಸಲು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಸಹಾಯ 

Last Updated : Apr 13, 2021, 02:28 PM IST
  • ಒಣದ್ರಾಕ್ಷಿ ನೋಡಲು ತುಂಬಾ ಚಿಕ್ಕದಾಗಿ ಕಾಣುತ್ತದೆ ಆದ್ರೆ ಅದರಲ್ಲಿ ಫೈಬರ್, ವಿಟಮಿನ್ ಮತ್ತು ಖನಿಜ ಅಂಶ
  • ಒಣದ್ರಾಕ್ಷಿ ಮೂಳೆಗಳನ್ನು ಬಲಪಡಿಸಲು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಸಹಾಯ
  • ನರ ದೌರ್ಬಲ್ಯ ಸಮಸ್ಯೆಯನ್ನ ನಿವಾರಿಸಲು ಇದು ತುಂಬಾ ಸಹಾಯ ಮಾಡುತ್ತದೆ
Raisins and Honey: ನರ ದೌರ್ಬಲ್ಯಕ್ಕೆ ಉತ್ತಮ ಆಹಾರ ಒಣದ್ರಾಕ್ಷಿ ಮತ್ತು ಜೇನುತುಪ್ಪ..! title=

ಒಣದ್ರಾಕ್ಷಿ ನೋಡಲು ತುಂಬಾ ಚಿಕ್ಕದಾಗಿ ಕಾಣುತ್ತದೆ ಆದ್ರೆ ಅದರಲ್ಲಿ ಫೈಬರ್, ವಿಟಮಿನ್ ಮತ್ತು ಖನಿಜ ಅಂಶಗಳಿಂದ ಕೂಡಿದ್ದು, ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದಲ್ಲದೆ, ಒಣದ್ರಾಕ್ಷಿ ಮೂಳೆಗಳನ್ನು ಬಲಪಡಿಸಲು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಸಹ ಸಹಾಯ ಮಾಡುತ್ತದೆ. ಜೇನುತುಪ್ಪದ ಪ್ರಯೋಜನಗಳ ಬಗ್ಗೆ ಮಾತನಾಡುವದಾದರೆ, ನರ ದೌರ್ಬಲ್ಯ ಸಮಸ್ಯೆಯನ್ನ ನಿವಾರಿಸಲು ಇದು ತುಂಬಾ ಸಹಾಯ ಮಾಡುತ್ತದೆ. ಅಲ್ಲದೆ ಜೇನುತುಪ್ಪವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ(Raisins Benefits) ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯ ಟೀ-ಕಾಫಿ ಕುಡಿಯುವ ಬದಲು ನೀವು ಒಣದ್ರಾಕ್ಷಿ ಮತ್ತು ಜೇನುತುಪ್ಪವನ್ನು ಸೇವಿಸಿದರೆ, ಈ ಮನೆಮದ್ದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?

1. ನರ ದೌರ್ಬಲ್ಯ ಸಮಸ್ಯೆಯನ್ನು ದೂರ ಮಾಡಲು ಒಣದ್ರಾಕ್ಷಿ ಮತ್ತು ಜೇನುತುಪ್ಪ (Honey benefits) ತಿನ್ನುವುದು ಭಾಳ ಮುಖ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಮತ್ತು ಜೇನುತುಪ್ಪವನ್ನು ತಿನ್ನುವುದು ದೇಹವನ್ನು ಸದೃಢವಾಗಿರಿಸುತ್ತದೆ. ಅಲ್ಲದೆ ದಿನ ಪೂರ್ತಿ ನಿಮ್ಮ ದೇಹವನ್ನು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ

2. ಜೇನುತುಪ್ಪ ಮತ್ತು ಒಣದ್ರಾಕ್ಷಿ ಎರಡೂ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿವೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಿಪಿ(Blood Pressure control) ರೋಗಿಗಳಾದವರು ಪ್ರತಿದಿನ ಒಣದ್ರಾಕ್ಷಿ ಮತ್ತು ಜೇನುತುಪ್ಪವನ್ನು ಸೇವಿಸಬೇಕು. ಇದರಿಂದ ಅದನ್ನ ನಿಯಂತ್ರಣದಲ್ಲಿ ಇಡಬಹುದು.

ಇದನ್ನೂ ಓದಿ- Coronavirus Vaccine ಪಡೆಯುವ ಮೊದಲು ಮತ್ತು ನಂತ್ರ ಏನು ತಿನ್ನಬೇಕು, ಏನು ತಿನ್ನಬಾರದು? ಇಲ್ಲಿದೆ ತಜ್ಞರ ಸಲಹೆ!

3. ರಕ್ತಹೀನತೆ(Anemia)  ಸಮಸ್ಯೆಯಿಂದ ಬಳಲುವವರು ಒಣದ್ರಾಕ್ಷಿ ಮತ್ತು ಜೇನುತುಪ್ಪವನ್ನು ಒಟ್ಟಿಗೆ ತಿನ್ನಿವುದು ಉತ್ತಮ ಪ್ರಯೋಜನಕಾರಿಯಾಗಿದೆ. ಏಕೆಂದರೆ ಒಣದ್ರಾಕ್ಷಿ ದೇಹದಲ್ಲಿ ರಕ್ತವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- Onion Benefits: ಪ್ರತಿದಿನ ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗುವುದರಿಂದ ಆಗುವ ಪ್ರಯೋಜನ ತಿಳಿದರೆ ಅಚ್ಚರಿಗೊಳ್ಳುತ್ತೀರಿ

4. ದೇಹದಲ್ಲಿ ಸ್ನಾಯು((Muscles)) ಮತ್ತು ಜೀವಕೋಶಗಳನ್ನು ಗಟ್ಟಿಯಾಗಿಸಲು ನಮಗೆ ಪೌಷ್ಟಿಕ ಆಹಾರವೂ ಬೇಕು. ಅದಕ್ಕಾಗಿ ನೀವು ಪ್ರತಿದಿನ ಜೇನುತುಪ್ಪ ಮತ್ತು ಒಣದ್ರಾಕ್ಷಿ ತಿನ್ನಲು ಪ್ರಾರಂಭಿಸಿ.

ಇದನ್ನೂ ಓದಿ- Myrobalan Benefits: ಮನೆಯಲಿ ಬಳಸುವ ಮಸಾಲೆ ಪದಾರ್ಥಗಳಲ್ಲಿದೆ ಅದ್ಭುತ ಆರೋಗ್ಯ ಶಕ್ತಿ..!

5. ಒಣದ್ರಾಕ್ಷಿ ಮತ್ತು ಜೇನುತುಪ್ಪವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಸ್ಟೇಟ್ ಕ್ಯಾನ್ಸರ್(Prevents cancer) ಅಪಾಯವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ- ಮಕ್ಕಳನ್ನು Corona ಸೋಂಕಿನಿಂದ ರಕ್ಷಿಸುವ ಐದು Super Food

6. ಜೇನುತುಪ್ಪ ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ಸೇವಿಸುವುದರಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್(Testosterone hormone) ಹೆಚ್ಚಾಗುತ್ತದೆ. ಈ ಹಾರ್ಮೋನ್ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.

ಇದನ್ನೂ ಓದಿ- ಬೇಸಿಗೆಯಲ್ಲಿ ಲೆಮನ್ ಟೀ ಯಾಕೆ ಕುಡಿಯಬೇಕು..? ಇಲ್ಲಿದೆ 4 ಕಾರಣ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News