Navratri Fasting: ನವರಾತ್ರಿ ಉಪವಾಸದ ಮಾಡ್ತೀರಾ, ಹಾಗಾದ್ರೆ ಈ ಹಣ್ಣು ತರಕಾರಿಗಳನ್ನ ಸೇವಿಸಿ

ಉಪವಾಸದ ದಿನಗಳಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. 

Last Updated : Apr 13, 2021, 05:49 PM IST
  • ನವರಾತ್ರಿಯಲ್ಲಿ ಜನರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ.
  • ನವರಾತ್ರಿಯಲ್ಲಿ ಒಂಬತ್ತು ದಿನ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ.
  • ಉಪವಾಸದ ದಿನಗಳಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.
Navratri Fasting: ನವರಾತ್ರಿ ಉಪವಾಸದ ಮಾಡ್ತೀರಾ, ಹಾಗಾದ್ರೆ ಈ ಹಣ್ಣು ತರಕಾರಿಗಳನ್ನ ಸೇವಿಸಿ title=

ನವರಾತ್ರಿ ಪ್ರಾರಂಭವಾಗಿದೆ, ಈ ದಿನಗಳಲ್ಲಿ ಅನೇಕ ಜನರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಈ ದಿನಗಳಲ್ಲಿ ಮಾತೇ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನೀವು ಸಹ ಉಪವಾಸ ಮಾಡುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಆಹಾರದ ಜೊತೆಗೆ ಆರೋಗ್ಯವನ್ನವು  ನೀವು ನೋಡಿಕೊಳ್ಳಬೇಕು. ಉಪವಾಸದ ದಿನಗಳಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಆದ್ದರಿಂದ, ಈ ದಿನಗಳಲ್ಲಿ, ನಿಮ್ಮ ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು.

ಅದಲ್ಲದೆ ಬೇಸಿಗೆ ಕಾಲವೂ ಕೂಡ ಪ್ರಾರಂಭವಾಗಿದೆ. ಹಾಗಾಗಿ ದೇಹವನ್ನು ತಂಪಾಗಿರಿಸುವುದು ಬಹಳ ಮುಖ್ಯ. ಒಂಬತ್ತು ದಿನಗಳವರೆಗೆ ಉಪವಾಸ(Navratri Fasting) ಮಾಡುವುದು ಸುಲಭವಲ್ಲ. ಉಪವಾಸದ ಸಮಯದಲ್ಲಿ ದೇಹಕ್ಕೆ ನೀರಿನ ಕೊರತೆ ಉಂಟಾಗುತ್ತದೆ. ಈ ಕೊರೆತೆಯನ್ನಸ್ ನೀಗಿಸಲು ನಾವು ನಿಮಗೆ ಕೆಲವು ಹಣ್ಣು ಮತ್ತೆ ತರಕಾರಿಗಳನ್ನು ಸೂಚಿಸುತ್ತೇವೆ. ಅವು ಈ ಕೆಳಗಿನಂತಿವೆ.

ಇದನ್ನೂ ಓದಿ- ಇದು ಆಯುರ್ವೇದ ಸಂಜೀವಿನಿ, ತಿಳಿಯಿರಿ ನೆಲ್ಲಿಯ ಈ ಆರು ಆರೋಗ್ಯ ಮಹಿಮೆ..!

ವಾಟರ್ ಚೆಸ್ಟ್ನಟ್: ಇದರಲ್ಲಿ ವಿಟಮಿನ್ ಬಿ ಮತ್ತು ಸಿ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ನಂತಹ ಅನೇಕ ಅಂಶಗಳು ವಾಟರ್ ಚೆಸ್ಟ್ನಟ್(Water chestnut) ಯಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ. ಇದು ದೇಹದ ನೀರಿನ ಕೊರತೆಯನ್ನು ನಿಭಾಯಿಸುತ್ತದೆ. ಇದಲ್ಲದೆ, ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ಕೂಡ ನೀಡುತ್ತದೆ. ಅಲ್ಲದೆ ಮಧುಮೇಹದಂತಹ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

ಇದನ್ನೂ ಓದಿ- Raisins and Honey: ನರ ದೌರ್ಬಲ್ಯಕ್ಕೆ ಉತ್ತಮ ಆಹಾರ ಒಣದ್ರಾಕ್ಷಿ ಮತ್ತು ಜೇನುತುಪ್ಪ..!

ಸೋರೆಕಾಯಿ: ಸೋರೆಕಾಯಿಯಲ್ಲಿನ ನೀರಿನ ಪ್ರಮಾಣ ತುಂಬಾ ಹೆಚ್ಚಾಗಿದೆ. ಸೋರೆಕಾಯಿಯಿಂದ ಮಲಬದ್ಧತೆ ಸಮಸ್ಯೆಯನ್ನು ಕೂಡ ದೂರ ಮಾಡಬಹುದು. ನವರಾತ್ರಿ(Navaratri)ಯಲ್ಲಿ ನೀವು ಸೋರೆಕಾಯಿ ಪಲ್ಯ ಅಥವಾ ಜ್ಯೋಸ್ ರೀತಿ ಮಾಡಿ ಕೂಡ ಸೇವಿಸಬಹುದು. ಬೇಸಿಗೆಯಲ್ಲಿ ಸೋರೆಕಾಯಿ ತಿನ್ನುವುದರಿಂದ  ದೇಹವನ್ನು ತಂಪಾಗಿರಿಸಬಹುದು.

ಇದನ್ನೂ ಓದಿ- Cucumber Peel Benefits: ಸೌತೆಕಾಯಿ ಸಿಪ್ಪೆಯನ್ನು ಎಸೆಯುವ ಮುನ್ನ ಇದನ್ನೊಮ್ಮೆ ಓದಿ

ಹಸಿ ಬಾಳೆಹಣ್ಣು:  ಹಸಿ ಬಾಳೆಹಣ್ಣಿನಲ್ಲಿ ನಾರಿನಂಶವಿದೆ. ಇದು ದೇಹ ತೂಕ ಕಡಿಮೆ(Weight loss) ಮಾಡಲು ಸಹ ಸಹಾಯ ಮಾಡುತ್ತದೆ. ನವರಾತ್ರಿಯಲ್ಲಿ ನೀವು ಕಚ್ಚಾ ಬಾಳೆಹಣ್ಣಿನ ಚಿಪ್ಸ್ ಅಥವಾ ಹಾಗೆ ಕೂಡ ತಿನ್ನಬಹುದು.

ಇದನ್ನೂ ಓದಿ- ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?

ಸಿಹಿ ಗೆಣಸು: ಸಿಹಿ ಗೆಣಸು ತಿನ್ನುವುದರಿಂದ ದೇಹದ ನೀರಿನ ಕೊರತೆ(Dehidresion)ಯ ಸಮಸ್ಯೆಯನ್ನು ನಿವಾರಿಸಬಹುದು. ಇದು ಪೊಟ್ಯಾಸಿಯಮ್, ಸೋಡಿಯಂ ಮತ್ತು ಕ್ಯಾಲ್ಸಿಯಂನಂತಹ ಅಂಶಗಳನ್ನು ಒಳಗೊಂಡಿದೆ. ಇದು ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ಇಮ್ಯುನಿಟಿ ಬೂಸ್ಟರ್ ಎಂದು ಕೂಡ  ಕರೆಯುತ್ತಾರೆ.

ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ

ಹಣ್ಣುಗಳು: ಬೇಸಿಗೆಯಲ್ಲಿ ಅಷ್ಟು ಸಾಧ್ಯವೂ ಅಷ್ಟು ಹಣ್ಣುಗಳನ್ನ(Fruits) ತಿನ್ನಬೇಕು. ಹಣ್ಣಿನ ಖಾದ್ಯ ಮಾಡಿ ಸೇವಿಸಿ. ಇಲ್ಲವೇ ಜ್ಯೋಸ್ ಮಾಡಿ ಕುಡಿಯಿರಿ. ಇದರಿಂದ ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ತಾಜಾ ಹಣ್ಣುಗಳನ್ನ ಸೇವಿಸುವುದರಿಂದ ನಿಮ್ಮ ದೇಹವು ಆರೋಗ್ಯಯುತವಾಗಿರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News