ಬೆಂಗಳೂರು: ನಮ್ಮ ದೇಹ ಎಲ್ಲಾ ರೀತಿಯ ರೋಗಗಳ ಮುನ್ಸೂಚನೆ ಮೊದಲೇ ನೀಡುತ್ತದೆ.  ನಾವು ಸುಮ್ಮನೇ ಅದನ್ನು ಕಡೆಗಣಿಸಿ ಬಿಡುತ್ತೇವೆ. ನಿಮ್ಮ ದೇಹ ಕೆಲವೊಂದು ವಾರ್ನಿಂಗ್ ಸಿಗ್ನಲ್ (warning signals)ಕೊಡುತ್ತಿದೆಯೆಂದರೆ, ಯಾವುದೋ ರೋಗ ನಿಮ್ಮನ್ನು ಆವರಿಸುತ್ತಿದೆ ಎಂದೇ ಅರ್ಥ. ಅದನ್ನು ಕೂಡಲೇ ತಿಳಿದುಕೊಂಡು, ಡಾಕ್ಟರ್ ಸಲಹೆ ಪಡೆದುಕೊಂಡರೇ ತುಂಬಾ ಒಳ್ಳೆಯದು. ಅದಕ್ಕೂ ಮೊದಲು ಆರೋಗ್ಯ (Health)ಹದಗೆಡುತ್ತಿದೆ ಎಂದು ಹೇಳಿ ನಿಮ್ಮ ದೇಹ ಕಳಿಸುವ ಆ 8  ಸಿಗ್ನಲ್ ಯಾವುದು ತಿಳಿದುಕೊಳ್ಳಿ. 


COMMERCIAL BREAK
SCROLL TO CONTINUE READING

1. ಮೂತ್ರ : 
ವಾಶ್ರೂಮಿಗೆ ಹೋಗುವಾಗ ನಿಮ್ಮ ಮೂತ್ರದ (Urine) ಬಣ್ಣವನ್ನು ಸರಿಯಾಗಿ ನೋಡಿ. ಮೂತ್ರ ನಿಮ್ಮ ಆರೋಗ್ಯದ ರಿಪೋರ್ಟ್ ಹೇಳುತ್ತದೆ. ಸಾಮಾನ್ಯವಾಗಿ ಮೂತ್ರ ತಿಳಿ ಹಳದಿ ಬಣ್ಣದಲ್ಲಿದ್ದರೆ ಆಲ್ ಇಸ್ ವೆಲ್. ಮೂತ್ರದ ಬಣ್ಣ ಬದಲಾಗಿದ್ದು, ಜೊತೆಗೆ ಅದು ಕೆಟ್ಟ ವಾಸನೆ ಬರುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ (Health) ಏನೋ ಎಡವಟ್ಟಾಗಿದೆ ಎಂದೇ ಅರ್ಥ. 


ಇದನ್ನೂ ಓದಿ :  Health Insurance Policy ನವೀಕರಿಸಿದರೆ ಶೇ.100 ರಷ್ಟು ರಿಯಾಯಿತಿ


2. ಉಗುರು :
ನಿಮ್ಮ ಉಗುರು (Nail) ಕೂಡಾ ನೀವು ಫಿಟ್ ಅಥವಾ ಅನ್ ಫಿಟ್ ಇದ್ದೀರಾ ಎಂಬುದನ್ನು ಹೇಳುತ್ತದೆ. ಪಾದ ಅಥವಾ ಹಸ್ತದ ಉಗುರುಗಳಲ್ಲಿ ವಿಚಿತ್ರ ರೇಖೆಗಳಿದ್ದರೆ ಅಥವಾ ಅವುಗಳ ಬಣ್ಣ ಬದಲಾಗುತ್ತಿದ್ದರೆ, ಖಂಡಿತಾ ಎಲ್ಲೋ ಏನೋ ಯಡವಟ್ಟಾಗಿದೆ. ಉಗುರು ತಿಳಿಗೆಂಪು ಗುಲಾಬಿ ಬಣ್ಣದಲ್ಲಿದ್ದರೆ,  ನೀವು ಫಿಟ್ ಆಗಿದ್ದೀರಿ ಎಂದೇ ಅರ್ಥ. 


3. ಬಾಯಿಯ ದುರ್ಗಂಧ :
ವಸಡು ದುರ್ಬಲವಾದಾಗ, ಅಥವಾ ವಸಡಿನಲ್ಲಿ ಸಮಸ್ಯೆಗಳುಂಟಾದಾಗ ಬಾಯಿಯಲ್ಲಿ (Mouth) ದುರ್ಗಂಧ ಬರುತ್ತದೆ. ಗೊತ್ತಿರಲಿ ನಿಮ್ಮ ಬಾಯಿಯ ದುರ್ವಾಸನೆಗೂ ದೇಹದ ಇಮ್ಯುನಿಟಿಗೂ (Immunity) ಸಂಬಂಧ ಇದೆ. ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎನ್ನುವಾಗ ನಿಮ್ಮ ಬಾಯಿಯಲ್ಲಿ ದುರ್ವಾಸನೆ ಹೊರಡುತ್ತದೆ. 


4. ಪಾದದಲ್ಲಿ ಬಾವು :
ಪರಿಣಿತರ ಪ್ರಕಾರ ಥೈರಾಯಿಡ್ (thyroid), ಕಿಡ್ನಿ ಅಥವಾ ಹೃದ್ರೋಗ (heart disease) ಆವರಿಸುವಾಗ ಸಾಮಾನ್ಯವಾಗಿ ಪಾದ ದಪ್ಪ ಆಗಲು ಶುರುವಾಗುತ್ತದೆ. ಕಾಲು ದಪ್ಪ ಆಗುವುದು ಮಾರಕ ರೋಗವೊಂದರ ಲಕ್ಷಣ. ಕಾಲು ದಪ್ಪ ಆಗಲು ದೈಹಿಕ ಸಮಸ್ಯೆಗಳೇ ಕಾರಣವೇನಲ್ಲ. 


ಇದನ್ನೂ ಓದಿ : Glowing skin : ಹೊಳೆಯುವ ತ್ವಚೆಗಾಗಿ ಸೋಯಾಬಿನ್ ಫೇಸ್ ಪ್ಯಾಕ್ …


5. ತುಟಿ ಒಣಗುವುದು: 
ಚಳಿಗಾಲದಲ್ಲಿ (winter) ತುಟಿ ಒಣಗುವುದು ಸಹಜ. ಆದರೆ, ಕೆಲವರಿಗೆ ವರ್ಷವಿಡಿ ತುಟಿ ಒಣಗುತ್ತಿರುತ್ತದೆ. ವರ್ಷಪೂರ್ತಿ ತುಟಿಗೆ ಲಿಪ್ ಬಾಮ್ (lip balm)ಹಚ್ಚುತ್ತಲೇ ಇರುತ್ತಾರೆ. ಶರೀರದಲ್ಲಿ ಸಾಕಷ್ಟು ವಿಟಮಿನ್ ಕೊರತೆ ಉಂಟಾದಾಗ ತುಟಿ ಒಣಗುತ್ತದೆ. 


6. ನಿದ್ರೆ :
ನಿಮಗೆ ನಿದ್ರೆ ಸರಿಯಾಗಿ ಹತ್ತುತಿಲ್ಲವೆಂದರೆ ನಿಮ್ಮಲ್ಲಿ ಸ್ಲೀಪಿಂಗ್ ಡಿಸಾರ್ಡರ್ (Sleeping disorder) ಉಂಟಾಗಿದೆ ಎಂದೇ ಅರ್ಥ. ಮನುಷ್ಯನ ಆರೋಗ್ಯಕ್ಕೂ ನಿದ್ರೆಗೂ ನೇರ ಸಂಬಂಧ ಇದೆ. ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದರೆ ನೀವು ದೈಹಿಕವಾಗಿ ಅನ್ ಫಿಟ್   ಇದ್ದೀರಿ ಎಂದೇ ಅರ್ಥ.


7 ದೇಹದ ತಾಪಮಾನ :
ಕೆಲವರ  ಕಾಲು ಮತ್ತು ಕೈಗಳ ತಾಪಮಾನ ಕೆಲವೊಮ್ಮೆ ತುಂಬಾ ಕಡಿಮೆ ಇರುತ್ತದೆ. ಕೆಲವೊಮ್ಮೆ ಹವಾಮಾನಕ್ಕೆ ಅನುಗುಣವಾಗಿ ನಮ್ಮ ದೇಹದ ತಾಪಮಾನ ಬದಲಾಗುತ್ತಿರುತ್ತದೆ. ಹವಾಮಾನ ಅಲ್ಲದೇ ಬೇರೆ ಕಾರಣಕ್ಕೆ ದೇಹದ ತಾಪಮಾನ ಕುಸಿಯುತ್ತಿದೆ ಎಂದರೆ ದೇಹದಲ್ಲಿ ರಕ್ತಪರಿಚಲನೆಯಲ್ಲಿ ಸಮಸ್ಯೆ ಇದೆ ಎಂದೇ ಅರ್ಥ. 


ಇದನ್ನೂ ಓದಿ : Constipation : ಮಲಬದ್ದತೆ ನಿವಾರಿಸಲು ಆಯುರ್ವೇದ ಹೇಳಿದೆ ಈ ಆರು ಸೂತ್ರ.!


8. ದೇಹದಲ್ಲಿ ಕೊಬ್ಬಿನ ಸಮತೋಲನ :
ಆರೋಗ್ಯವಂತ ಶರೀರಕ್ಕೆ ದೇಹದ ಕೊಬ್ಬನ್ನು (Fat) ಸಮತೋಲನದಲ್ಲಿಡುವುದು ತುಂಬಾ ಅಗತ್ಯ. ನಿಮ್ಮ ದೇಹದಲ್ಲಿ ಕೊಬ್ಬು ಬೆಳೆಯುತ್ತಿದೆಯೆಂದರೆ, ನಿಮ್ಮಲ್ಲಿನ ತೆಳುವಾದ ಟಿಶ್ಯುಗಳು ದಪ್ಪವಾಗುತ್ತಿದೆ ಎಂದೇ ಅರ್ಥ. ದೈಹಿಕ ಚಚಟುವಟಿಕೆಯಲ್ಲಿ ತೊಡಗದೇ ದೂರ ಉಳಿಯುವುದರಿಂದ ಹೀಗೆ ಆಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.