ಎರಡು ತಲೆ ದಿಂಬುಗಳನ್ನು ಇಟ್ಟುಕೊಂಡು ಮಲಗುತ್ತೀರಾ..? ಎಚ್ಚರಿಕೆ.. ಈ ವಿಚಾರ ಮೊದಲು ತಿಳಿದುಕೊಳ್ಳಿ.. 

Health tips: ಅನೇಕ ಜನರು ಮಲಗುವಾಗ ದಿಂಬನ್ನು ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ದಿಂಬನ್ನು ಬಳಸುವಲ್ಲಿ ಕೆಲವು ಮುನ್ನೆಚ್ಚರಿಕೆಗಳು ಕಡ್ಡಾಯ. ನೀವು ಒಂದಕ್ಕಿಂತ ಹೆಚ್ಚಿನ ದಿಂಬುಗಳನ್ನು ಇಟ್ಟುಕೊಂಡು ಮಲಗುತ್ತಿದ್ದೀರಾ..? ಹಾಗಿದ್ರೆ ಈ ಕುರಿತು ನೀವು ತಿಳಿದುಕೊಳ್ಳಲೇಬೇಕು..

Written by - Krishna N K | Last Updated : Oct 11, 2024, 10:48 PM IST
    • ಅನೇಕ ಜನರು ಮಲಗುವಾಗ ದಿಂಬನ್ನು ಬಳಸುತ್ತಾರೆ
    • ಕೆಲವರು ಎರಡೆರಡು ದಿಂಬುಗಳನ್ನು ಇಟ್ಟುಕೊಳ್ಳುತ್ತಾರೆ
    • ಒಂದಕ್ಕಿಂತ ಹೆಚ್ಚಿನ ದಿಂಬುಗಳನ್ನು ಇಟ್ಟುಕೊಂಡು ಮಲಗುತ್ತಿದ್ದೀರಾ..?
ಎರಡು ತಲೆ ದಿಂಬುಗಳನ್ನು ಇಟ್ಟುಕೊಂಡು ಮಲಗುತ್ತೀರಾ..? ಎಚ್ಚರಿಕೆ.. ಈ ವಿಚಾರ ಮೊದಲು ತಿಳಿದುಕೊಳ್ಳಿ..  title=

Sleeping tips : ತುಂಬಾ ಎತ್ತರದ ದಿಂಬನ್ನು ಬಳಸುವುದರಿಂದ ಕತ್ತಿನ ಮೂಳೆಗಳಲ್ಲಿ ಊತ ಮತ್ತು ನೋವು ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.. ಅಲ್ಲದೆ, ಈ ಸಮಸ್ಯೆಯು ಸರ್ವಿಕಲ್ ಸ್ಪಾಂಡಿಲೈಟಿಸ್‌ಗೆ ಕಾರಣವಾಗಬಹುದು ಎನ್ನಲಾಗಿದೆ.. ದಿಂಬು ತುಂಬಾ ಎತ್ತರದಲ್ಲಿದ್ದರೆ, ಕುತ್ತಿಗೆ ಮತ್ತು ಭುಜಗಳ ನಡುವೆ ಸರಿಯಾದ ಸಮತೋಲನ ಇರಲ್ಲ ಅಂತ ತಜ್ಞರು ಹೇಳುತ್ತಾರೆ..

ಇದರ ಪರಿಣಾಮವೆಂದರೆ ಭುಜದ ನೋವು. ತಲೆಯ ಕೆಳಗೆ ಎರಡು ದಿಂಬು ಇಟ್ಟುಕೊಂಡು ಮಲಗುವುದರಿಂದ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದು ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕುತ್ತಿಗೆಯಲ್ಲಿ ಸೆಳೆತ ಮತ್ತು ನೋವು, ದಿನವಿಡೀ ಆಯಾಸ ಸೇರಿದಂತೆ ಮೈ-ಕೈ ನೋವಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: 

ನಿದ್ದೆ ಮಾಡುವಾಗ ದಿಂಬಿನ ಎತ್ತರ ಹೆಚ್ಚು ಅಥವಾ ಕಡಿಮೆ ಇರಬಾರದು. ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ನೇರವಾಗಿ ಇರಿಸಲು 6 ಇಂಚು ಎತ್ತರದ ದಿಂಬು ಬಳಸುವುದು ಉತ್ತಮ. ಹಾಸಿಗೆಯ ಮೇಲೆ ಮಲಗುವಾಗ ದಿಂಬನ್ನು ಬಳಸಬೇಡಿ. ಏಕೆಂದರೆ ಇದು ಕುತ್ತಿಗೆಯ ಮೇಲೆ ಹೆಚ್ಚು ಒತ್ತಡವನ್ನು ಬೀರುತ್ತದೆ.

ಮೆತ್ತನೆಯ ದಿಂಬು.. ಕುತ್ತಿಗೆಗೆ ಹೊಂದಿಕೊಳ್ಳುವಂತೆ ಮೃದುವಾಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.. ಫೋಮ್ ದಿಂಬುಗಳನ್ನು ಬಳಸುವುದು ಉತ್ತಮ. ಅಲ್ಲದೆ, ಪ್ರತಿ 8 ರಿಂದ 12 ತಿಂಗಳಿಗೊಮ್ಮೆ ದಿಂಬನ್ನು ಬದಲಾಯಿಸುವುದು ಅವಶ್ಯಕ. ಏಕೆಂದರೆ ಹಳೆಯ ದಿಂಬು ಅದರ ಆಕಾರವನ್ನು ಬದಲಾಯಿಸುತ್ತದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೂಡ ಸಂಗ್ರಹಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News