Bharat Bandh: ರೈತರನ್ನು ಬೆಂಬಲಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ಸರ್ಕಾರವು ಸಿಎಸಿಪಿಗೆ ಸ್ವಾಯತ್ತತೆ ನೀಡದಿರುವುದು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸದಿರುವ ಬಗ್ಗೆ ಆಂದೋಲನ ನಡೆಸುವ ಬಗ್ಗೆಯೂ ಎಚ್ಚರಿಸಿದರು

Last Updated : Dec 8, 2020, 03:12 PM IST
  • ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಲೆಗನ್ ಸಿದ್ಧಿ ಗ್ರಾಮದಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ
  • ರೈತರು ಬೀದಿಗಿಳಿದು ತಮ್ಮ ಸಮಸ್ಯೆಯನ್ನು ಬಗೆಹರಿಸಲು ಇದು ಸರಿಯಾದ ಸಮಯ- ಅಣ್ಣಾ ಹಜಾರೆ
  • ಸರ್ಕಾರವು ಭರವಸೆಗಳನ್ನು ಮಾತ್ರ ನೀಡುತ್ತದೆ, ಎಂದಿಗೂ ಬೇಡಿಕೆಗಳನ್ನು ಈಡೇರಿಸುವುದಿಲ್ಲ
Bharat Bandh: ರೈತರನ್ನು ಬೆಂಬಲಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ  title=
File Image

ಪುಣೆ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಒಂದು ದಿನದ ಉಪವಾಸ ಸತ್ಯಾಗ್ರಹ (Hunger strike) ಕೈಗೊಂಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಲೆಗನ್ ಸಿದ್ಧಿ ಗ್ರಾಮದಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೈತರು ಬೀದಿಗಿಳಿದು ತಮ್ಮ ಸಮಸ್ಯೆಯನ್ನು ಬಗೆಹರಿಸಲು ಇದು ಸರಿಯಾದ ಸಮಯ ಎಂದು ಅವರು ಹೇಳಿದರು.

ಪ್ರತಿಭಟನಾ ನಿರತ ರೈತ ಸಂಘಟನೆಗಳು ಇಂದು 'ಭಾರತ್ ಬಂದ್' (Bharat Bandh) ಆಚರಿಸುವಂತೆ ಮನವಿ ಮಾಡಿವೆ. ಸರ್ಕಾರದ ಮೇಲೆ ಒತ್ತಡ ಹೇರುವಂತೆ ದೇಶದಲ್ಲಿ ಆಂದೋಲನ ನಡೆಯಬೇಕು ಮತ್ತು ರೈತರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಅಣ್ಣಾ ಹಜಾರೆ (Anna Hazare) ಕರೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿ ಇಡೀ ದೇಶದಲ್ಲಿ ಮುಂದುವರಿಯಬೇಕು:
ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ, ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿ ಇಡೀ ದೇಶದಲ್ಲಿ ಮುಂದುವರಿಯಬೇಕು" ಎಂದು ಹಜಾರೆ ರೆಕಾರ್ಡ್ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರಲು, ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಬೇಕಾಗಿದೆ ಮತ್ತು ಇದಕ್ಕಾಗಿ ರೈತರು  (Farmers) ಬೀದಿಗಿಳಿಯಬೇಕಾಗುತ್ತದೆ. ಆದರೆ ಯಾವುದೇ ಹಿಂಸಾಚಾರ ಮಾಡಬೇಡಿ ಎಂದು ಅಣ್ಣಾ ಹಜಾರೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ 'ಸೆಡ್ಡು ಹೊಡೆದ' ಕೇರಳ ಸರ್ಕಾರ!

ನಾನು (ಅಣ್ಣಾ ಹಜಾರೆ) ಈ ಸಮಸ್ಯೆಯನ್ನು ಈ ಮೊದಲು ಬೆಂಬಲಿಸಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ (ಸಿಎಸಿಪಿ) ಸ್ವಾಯತ್ತತೆ ನೀಡುವ ಅಗತ್ಯತೆ ಮತ್ತು ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಅಗತ್ಯವನ್ನು ಹಜಾರೆ ಒತ್ತಿ ಹೇಳಿದರು. 

ಇಂದು ಭಾರತ ಬಂದ್, ರೈತರ ಹೋರಾಟಕ್ಕೆ ಭಾರೀ ಬೆಂಬಲ

ಸರ್ಕಾರವು ಸಿಎಸಿಪಿಗೆ ಸ್ವಾಯತ್ತತೆ ನೀಡದಿರುವುದು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸದಿರುವ ಬಗ್ಗೆ ಆಂದೋಲನ ನಡೆಸುವ ಬಗ್ಗೆಯೂ ಎಚ್ಚರಿಸಿದರು. "ಸರ್ಕಾರವು ಭರವಸೆಗಳನ್ನು ಮಾತ್ರ ನೀಡುತ್ತದೆ, ಎಂದಿಗೂ ಬೇಡಿಕೆಗಳನ್ನು ಈಡೇರಿಸುವುದಿಲ್ಲ" ಎಂದು ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Trending News