Delhi Unlock : ದೆಹಲಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ
Delhi Unlock : ರಾಷ್ಟ್ರ ರಾಜಧಾನಿಯ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು, ನಾಳೆಯಿಂದ ಅಂದರೆ ಜೂನ್ 14ರಿಂದ ಆರ್ಥಿಕ ಚಟುವಟಿಕೆಗಳಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅನುಮತಿ ನೀಡಿದ್ದಾರೆ.
ನವದೆಹಲಿ : ರಾಷ್ಟ್ರ ರಾಜಧಾನಿಯ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು, ನಾಳೆಯಿಂದ ಅಂದರೆ ಜೂನ್ 14ರಿಂದ ಆರ್ಥಿಕ ಚಟುವಟಿಕೆಗಳಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Aravind Kejriwal) ಅನುಮತಿ ನೀಡಿದ್ದಾರೆ. ಹೊಸ ಮಾರ್ಗಸೂಚಿಗಳ (New guidelines) ಪ್ರಕಾರ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರಮದಲ್ಲಿ ದೆಹಲಿಯ ವಾರದ ಮಾರುಕಟ್ಟೆಯನ್ನು (Weekly market) ಕೂಡಾ ತೆರೆಯಲು ಅನುಮತಿ ನೀಡಲಾಗಿದೆ.
ಅನ್ ಲಾಕ್ 3 ರ ವಿವರಗಳು :
ಅನ್ ಲಾಕ್ 3ರ (Unlock 3)ಅನ್ವಯ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕರೋನಾ ಮಾರ್ಗಸೂಚಿಗಳನ್ನು (COVID Guidelines) ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ 50 % ಆಸನ ಸಾಮರ್ಥ್ಯದೊಂದಿಗೆ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿಸಲಾಗಿದೆ. ಮದುವೆಗಳಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಮದುವೆ ಸಮಾರಂಭವನ್ನು ಮನೆಯಲ್ಲಿ ಅಥವಾ ನ್ಯಾಯಾಲಯದಲ್ಲಿ ಮಾತ್ರ ನಡೆಸಬಹುದು. ದೆಹಲಿಯ ಮೆಟ್ರೋ (Delhi metro) ರೈಲುಗಳು ಮತ್ತು ಬಸ್ಸುಗಳು 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಧಾರ್ಮಿಕ ಸ್ಥಳಗಳನ್ನು ತೆರೆಯಲಾಗುವುದು ಆದರೆ ಭಕ್ತರು ಅವಕಾಶ ಕಲ್ಪಿಸಲಾಗಿಲ್ಲ.
ಇದನ್ನೂ ಓದಿ : Covid-19 ನ ಸಂಭಾವ್ಯ ಮೂರನೇ ಅಲೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ, ತಜ್ಞರು ಹೇಳಿದ್ದೇನು?
ಈ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ:
ಹೊಸ ಪ್ರಕಟಣೆಯಡಿಯಲ್ಲಿ ದೆಹಲಿಯ ಎಲ್ಲಾ ಶಾಲೆಗಳು(School) , ಕಾಲೇಜುಗಳು, ಕೋಚಿಂಗ್ ಕೇಂದ್ರಗಳು ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳು ಮೊದಲಿನಂತೆ ಮುಚ್ಚಲ್ಪಡುತ್ತವೆ. ಅಂತೆಯೇ, ಈಜುಕೊಳಗಳು (swimming pool) ಮತ್ತು ಕ್ರೀಡಾ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ. ಸದ್ಯಕ್ಕೆ, ಎಂಟರ್ ಟೈನ್ ಮೆಂಟ್ ಪಾರ್ಕ್ ಗಳು ಮತ್ತು ಅಸೆಂಬ್ಲಿ ಹಾಲ್‌ಗಳ ಮೇಲಿನ ನಿಷೇಧವೂ ಮುಂದುವರೆಯಲಿದೆ. ಅದೇ ಸಮಯದಲ್ಲಿ, ಜಿಮ್ (GYM) ಮತ್ತು ಸ್ಪಾ (Spa) ಸಹ ಸದ್ಯಕ್ಕೆ ಒಪನ್ ಮಾಡುವಂತಿಲ್ಲ.
ಇದನ್ನೂ ಓದಿ : Cheating Case: SII CEO ಅದರ್ ಪೂನಾವಾಲಾ, WHO ಹಾಗೂ ಇತರರ ವಿರುದ್ಧ ವಂಚನೆಯ ಪ್ರಕರಣ ದಾಖಲು!, ಇಲ್ಲಿದೆ ಡೀಟೇಲ್ಸ್
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.