ಮನೆ ಮನೆಗೆ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಈ ನಗರಿ

ರಾಜಸ್ಥಾನದ ಬಿಕಾನೆರ್ ಮನೆ ಮನೆಗೆ ತೆರಳಿ ಕೋವಿಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Last Updated : Jun 12, 2021, 08:44 PM IST
  • ರಾಜಸ್ಥಾನದ ಬಿಕಾನೆರ್ ಮನೆ ಮನೆಗೆ ತೆರಳಿ ಕೋವಿಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಸೋಮವಾರದಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮವು ವಿಶೇಷವಾಗಿ 45 + ವಯಸ್ಸಿನ ಜನರಿಗೆ ಇರುತ್ತದೆ.ಎರಡು ಆಂಬುಲೆನ್ಸ್‌ಗಳು ಮತ್ತು ಮೂರು ಮೊಬೈಲ್ ತಂಡಗಳು ಲಸಿಕೆಗಳನ್ನು ಮನೆ ಬಾಗಿಲಿಗೆ ಕೊಂಡೊಯ್ಯಲು ಸಿದ್ಧವಾಗಿವೆ.
ಮನೆ ಮನೆಗೆ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಈ ನಗರಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಸ್ಥಾನದ ಬಿಕಾನೆರ್ ಮನೆ ಮನೆಗೆ ತೆರಳಿ ಕೋವಿಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: Corona Vaccine ಹಾಕಿಸಿಕೊಂಡ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿಯ ಸಂಚಾರ!

ಸೋಮವಾರದಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮವು ವಿಶೇಷವಾಗಿ 45 + ವಯಸ್ಸಿನ ಜನರಿಗೆ ಇರುತ್ತದೆ.ಎರಡು ಆಂಬುಲೆನ್ಸ್‌ಗಳು ಮತ್ತು ಮೂರು ಮೊಬೈಲ್ ತಂಡಗಳು ಲಸಿಕೆಗಳನ್ನು ಮನೆ ಬಾಗಿಲಿಗೆ ಕೊಂಡೊಯ್ಯಲು ಸಿದ್ಧವಾಗಿವೆ ಮತ್ತು ಜನರು ತಮ್ಮ ಹೆಸರು ಮತ್ತು ವಿಳಾಸದೊಂದಿಗೆ ಲಸಿಕೆ ಹಾಕಿಸಿಕೊಳ್ಳಲು ನೊಂದಾಯಿಸಬೇಕಾಗಿದೆ.ಇದಕ್ಕಾಗಿ ಜಿಲ್ಲಾಡಳಿತವು ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದೆ.ಕನಿಷ್ಠ 10 ಜನರು ನೋಂದಾಯಿಸಿಕೊಂಡ ನಂತರ, ಲಸಿಕೆ ವ್ಯಾನ್ ಅವರ ಮನೆಗೆ ತೆರಳುತ್ತದೆ. ಲಸಿಕೆ ನೀಡಿದ ನಂತರ ಲಸಿಕೆ ವ್ಯಾನ್ ಒಂದು ವಿಳಾಸದಿಂದ ಇನ್ನೊಂದಕ್ಕೆ ಹೋಗುತ್ತದೆ.

ಇದನ್ನೂ ಓದಿ: ಕಪ್ಪು ಶೀಲಿಂದ್ರ ಔಷಧಿ ಮೇಲೆ ಯಾವುದೇ ತೆರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ

ರಾಜ್ಯ ರಾಜಧಾನಿ ಜೈಪುರದಿಂದ ಸುಮಾರು 340 ಕಿ.ಮೀ ದೂರದಲ್ಲಿರುವ ಬಿಕಾನೆರ್ ನಗರವು 16 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಂದಿದೆ ಮತ್ತು ಈ ಕೇಂದ್ರಗಳ ವೈದ್ಯರಿಗೆ ತಮ್ಮ ಪ್ರದೇಶದಲ್ಲಿ ಯಾರು ಲಸಿಕೆಗಳನ್ನು ಪಡೆಯುತ್ತಿದ್ದಾರೆ ಎಂಬ ಬಗ್ಗೆ ತಿಳಿಸಲಾಗುವುದು, ಇದರಿಂದ ಯಾವುದೇ ದುಷ್ಪರಿಣಾಮಗಳ ಬಗ್ಗೆ ಅವರೂ ಸಹ ಮೇಲ್ವಿಚಾರಣೆ ಮಾಡಬಹುದು.

'2011 ರ ಜನಗಣತಿಯ ಪ್ರಕಾರ ನಗರವು 7 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು ಈವರೆಗೆ ಅದರ ಜನಸಂಖ್ಯೆಯ ಸುಮಾರು 60-65ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಬಿಕಾನೆರ್ ಜಿಲ್ಲಾಧಿಕಾರಿ ನಮಿತ್ ಮೆಹ್ತಾ ಹೇಳಿದ್ದಾರೆ.'ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ತಜ್ಞರು ಊಹಿಸಿದ್ದರಿಂದಾಗಿ 45 ವರ್ಷಗಳಿಗೂ ಮೇಲ್ಪಟ್ಟವರಿಗೆ ಶೇಕಡಾ 75 ರಷ್ಟು ಲಸಿಕೆ (Corona Vaccine) ಹಾಕುವ ಗುರಿಯನ್ನು ಹೊಂದಿದ್ದೇವೆ.ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಹೋಗಲು ಈ ವಯಸ್ಸಿನವರಿಗೆ ಹಲವಾರು ನಿರ್ಬಂಧಗಳಿವೆ, ವಿಶೇಷವಾಗಿ ವೃದ್ಧರು ಮತ್ತು ಮಹಿಳೆಯರಿಗೆ. ಆದ್ದರಿಂದ. ಜನರಿಗೆ ತಮ್ಮ ಮನೆಗಳಲ್ಲಿ ಲಸಿಕೆ ಹಾಕುವ ಈ ಉಪಕ್ರಮವು ಅನುಕೂಲವಾಗಲಿದೆ ಎಂದು ಮೆಹ್ತಾ ಹೇಳಿದರು.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಗೆ ಸಿಕ್ಕಿದ್ದು 1.29 ಕೋಟಿ ಲಸಿಕೆ, ಬಳಸಿದ್ದು 22 ಲಕ್ಷ ಮಾತ್ರ ..!

ಬಿಕಾನೆರ್‌ನಲ್ಲಿ ಇದುವರೆಗೆ 3,69,000 ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯು ಇಂದು 28 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೆ 40,118 ಪ್ರಕರಣಗಳು ಮತ್ತು 527 ಸಾವುಗಳು ವರದಿಯಾಗಿವೆ. ಇದು ಪ್ರಸ್ತುತ 453 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.

ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲಿ 368 ಪ್ರಕರಣಗಳು ಮತ್ತು 16 ಸಾವುಗಳು ವರದಿಯಾಗಿವೆ ಮತ್ತು ಪ್ರಸ್ತುತ 8,400 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News