Covid-19 ನ ಸಂಭಾವ್ಯ ಮೂರನೇ ಅಲೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ, ತಜ್ಞರು ಹೇಳಿದ್ದೇನು?

Covid-19 3rd Wave Impact On Children - ಕೊರೊನಾ ವೈರಸ್ (Coronavirus) ನ ಸಂಭಾವ್ಯ ಮೂರನೇ ಅಲೆ (Coronavirus 3rd Wave) ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದರ ಕುರಿತು ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಈ ಕುರಿತು ತಜ್ಞರು ನಡೆಸಿರುವ ಅಧ್ಯಯನದ (Study) ಪ್ರಕಾರ, ಕೊರೊನಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದರ ಯಾವುದೇ ಖಚಿತ ಅಥವಾ ದೃಢವಾದ ಪುರಾವೆಗಳು ಇದುವರೆಗೆ ದೊರೆತಿಲ್ಲ. 

Written by - Nitin Tabib | Last Updated : Jun 13, 2021, 01:00 PM IST
  • ಕೊವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ಅಲ್ಪವೇ ಪರಿಣಾಮ ಬೀರಲಿದೆ.
  • ಅಂಕಿ-ಅಂಶಗಳ ಮೂಲಕ ಉತ್ತರ ನೀಡಿದ ತಜ್ಞರು.
  • ಸೋಂಕಿತ ಮಕ್ಕಳ ಪೈಕಿ ಕೇವಲ ಶೇ. 5 ಕ್ಕಿಂತ ಕಡಿಮೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅವಶ್ಯಕತೆ ಬೀಳಲಿದೆ.
Covid-19 ನ ಸಂಭಾವ್ಯ ಮೂರನೇ ಅಲೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ, ತಜ್ಞರು ಹೇಳಿದ್ದೇನು? title=
Covid-19 3rd Wave Impact On Children (File Photo)

ನವದೆಹಲಿ: Covid-19 3rd Wave Impact On Children - ಕೊರೊನಾ ವೈರಸ್ ನ ಎರಡನೇ ಅಲೆಯಿಂದ (Coronavirus Second Wave) ಇನ್ನೇನು ಸ್ವಲ್ಪರ ಮಟ್ಟಿಗೆ ನೆಮ್ಮದಿ ಸಿಗುತ್ತಿದೆ ಎಂಬ ವರದಿಗಳ ನಡುವೆಯೇ, ಕೆಲವೇ ತಿಂಗಳುಗಳಲ್ಲಿ ಮೂರನೇ ಅಲೆ (Coronavirus 3rd Wave) ವಕ್ಕರಿಸಲಿದ್ದು, ಇದು ಮಕ್ಕಳ ಪಾಲಿಗೆ ಮಾರಕ ಸಾಬೀತಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಇದು ಜನರಲ್ಲಿ ಭಾರಿ ಭಯ ಹುಟ್ಟಿಸುತ್ತಿದೆ. ಏಕೆಂದರೆ ಎರಡನೇ ಅಲೆ ಅಪಾರ ಸಂಖ್ಯೆಯಲ್ಲಿ ಜನರ ಪ್ರಾಣವನ್ನೇ ಹೀರಿದೆ ಹಾಗೂ ಅದು ಇಂದಿಗೂ ಕೂಡ ಸಂಪೂರ್ಣ ಮುಗಿಯುತ್ತಿಲ್ಲ. ಆದರೆ, ಮೂರನೇ ಅಲೆಯ ಕುರಿತು ಇದೀಗ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಸಂಭಾವ್ಯ ಮೂರನೆಯ ಕೊರೊನಾ ಅಲೆ ಮಕ್ಕಳ ಮೇಲೆ ಭಾರಿ ಪ್ರಭಾವ ಬೀರಲಿದೆ ಎಂಬುದರ ಯಾವುದೇ ದೃಢವಾದ ಪುರಾವೆಗಳು ದೊರೆತಿಲ್ಲ.

ಭಾರತೀಯ ಮಕ್ಕಳಲ್ಲಿಯೂ ಕೂಡ ಇತರ ಮಕ್ಕಳಂತೆಯೇ ಲಕ್ಷಣಗಳು
ವೈದ್ಯಕೀಯ ವಿಜ್ಞಾನ ರಂಗದ ಪ್ರತಿಷ್ಠಿತ ಮ್ಯಾಗಜೀನ್ ಲ್ಯಾನ್ಸೆಟ್ (The Lancet) ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, ಕೊವಿಡ್ 19 ಕಮಿಷನ್ ಇಂಡಿಯಾ ಟಾಸ್ಕ್ ಫೋರ್ಸ್ (Covid-19 Commission India Task Force) ಭಾರತೀಯ ಮಕ್ಕಳಲ್ಲಿ ಕೊವಿಡ್-19 ಕುರಿತು ಅಧ್ಯಯನವೊಂದನ್ನು ನಡೆಸಿದೆ ಎಂದಿದೆ. ಈ ಅಧ್ಯಯನದ ಪ್ರಕಾರ, ಇತರೆ ದೇಶಗಳಲ್ಲಿನ ಮಕ್ಕಳಲ್ಲಿ ಕಂಡುಬಂದಿರುವ ಲಕ್ಷಣಗಳೇ ಭಾರತೀಯ ಮಕ್ಕಳಲ್ಲಿಯೂ ಕೂಡ ಕಂಡುಬಂದಿವೆ. ಬಹುತೇಕ ಮಕ್ಕಳಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ, ಕೆಲ ಮಕ್ಕಳಲ್ಲಿ ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಕೊರೊನಾ ವೈರಸ್ (Coronavirus) ನಿಂದ ಸೊಂಕಿತಕ್ಕೊಳಗಾದ ಮಕ್ಕಳಲ್ಲಿ ಜ್ವರ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಲಕ್ಷಣಗಳು ದೊರೆತಿದ್ದವು. ಇದಲ್ಲದೆ ಮಕ್ಕಳಲ್ಲಿ ಡಯೋರಿಯಾ, ವಾಂತಿ ಹಾಗೂ ಹೊಟ್ಟೆ ನೋವು ಸಮಸ್ಯೆಗಳು ಕೂಡ ಕಂಡುಬಂದಿದ್ದವು.

ಇದನ್ನೂ ಓದಿ-Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ ಅಮೇರಿಕವನ್ನೂ ಕೂಡ ಹಿಂದಿಕ್ಕಿದ ಭಾರತ

2600 ಮಕ್ಕಳ ದತ್ತಾಂಶ ಸಂಗ್ರಹ
ದೇಶಾದ್ಯಂತ ಕೊವಿಡ್ -19 (Covid-19) ಸೋಂಕಿನ ಮೊದಲ ಮತ್ತು ಎರಡನೇ ಅಲೆಯಲ್ಲಿ ಎಷ್ಟು ಮಕ್ಕಳು ಈ ಸೋಂಕಿಗೆ ಗುರಿಯಾದರು ಹಾಗೂ ಅವರಲ್ಲಿ ಎಷ್ಟು ಜನರು ಆಸ್ಪತ್ರೆಗೆ ದಾಖಲಾದರು ಎಂಬುದರ ಮಾಹಿತಿ ರಾಷ್ಟ್ರೀಯ ಮಟ್ಟದಲ್ಲಿ ಸಂಗ್ರಹಿಸಲಾಗಿಲ್ಲ. ಹೀಗಾಗಿ ಅಧ್ಯಯನಕ್ಕಾಗಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ದೆಹಲಿ-NCR ಪ್ರಾಂತ್ಯದ ಒಟ್ಟು 10 ಆಸ್ಪತ್ರೆಗಳಲ್ಲಿ ಈ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 2600 ಮಕ್ಕಳಲ್ಲಿ ಕೊರೊನಾ ವೈರಸ್ ನಿಂದಾಗುವ ಮೃತ್ಯುದರವನ್ನು (Covid-19 Death Rate In Children) ಪರಿಗಣಿಸಲಾಗಿ, ಅದು ಶೇ.2.4ರಷ್ಟಿದೆ ಎಂದು ತಿಳಿದು ಬಂದಿದೆ. ಈ ಮಕ್ಕಳಲ್ಲಿ ಶೇ.40 ರಷ್ಟು ಮಕ್ಕಳು ಯಾವುದಾದರೊಂದು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. 

ಇದನ್ನೂ ಓದಿ-SII CEO ಅದರ್ ಪೂನಾವಾಲಾ,WHO ಹಾಗೂ ಇತರರ ವಿರುದ್ಧ ವಂಚನೆಯ ಪ್ರಕರಣ ದಾಖಲು!, ಇಲ್ಲಿದೆ ಡೀಟೇಲ್ಸ್

ಶೇ.9 ರಷ್ಟು ಮಕ್ಕಳಲ್ಲಿ ದೊರೆತ ಗಂಭೀರ ಲಕ್ಷಣಗಳು
ಲ್ಯಾನ್ಸೆಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕೊರೊನಾ ವೈರಸ್ ನ ಎರಡೂ ಅಲೆಗಳಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು ಶೇ.9 ರಷ್ಟು ಮಕ್ಕಳಲ್ಲಿ ಸೋನಿನ ಗಂಭೀರ ಲಕ್ಷಣಗಳು ದೊರೆತಿವೆ. ಈ ಅಧ್ಯಯನದಲ್ಲಿ AIIMSನಲ್ಲಿ ಚಿಕ್ಕಮಕ್ಕಳ ಆರೋಗ್ಯ ತಜ್ಞರಾಗಿರುವ ಡಾ. ಶೆಫಾಲಿ ಗುಲಾಟಿ, ಡಾ. ಸುಶೀಲ್ ಕೆ. ಕಾಬರಾ ಹಾಗೂ ಡಾ. ರಾಕೇಶ ಲೋಧಾ ಭಾಗವಹಿಸಿದ್ದರು. ಈ ಕುರಿತು ಹೇಳಿಕೆ ನೀಡಿರುವ ಡಾ. ಕಾಬರಾ, 'ಮಾಹಾಮಾರಿಯ ಸಂಭಾವ್ಯ ಮೂರನೇ ಅಲೆಯಲ್ಲಿ ಸೊಂಕಿತಕ್ಕೆ ಒಳಗಾಗುವ ಶೇ.5 ಕ್ಕಿಂತ ಕಡಿಮೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅವಶ್ಯಕತೆ ಬೀಳಲಿದೆ ಮೃತ್ಯು ದರ ಕೂಡ ಶೇ.2ರವರೆಗೆ ಮಾತ್ರ ಇರುವ ಸಾದ್ಯತೆ ಇದೆ' ಎಂದಿದ್ದಾರೆ.

ಇದನ್ನೂ ಓದಿ-'ಇನ್ಮುಂದೆ ತಂಬಾಕು, ಸಿಗರೇಟ್ ಮಾರಾಟ ಮಾಡಲೂ ಕೂಡ ಲೈಸನ್ಸ್ ಪಡೆಯಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News