ನವದೆಹಲಿ: ಮಾರ್ಚ್ 28 ರಂದು ಕೇಂದ್ರ ಸರ್ಕಾರವು ಪಿಎಫ್ ಖಾತೆಯಿಂದ (ಅಡ್ವಾನ್ಸ್ ಪಿಎಫ್) ಮುಂಗಡ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಘೋಷಿಸಿತು. ಇದರ ನಂತರ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 946.49 ಕೋಟಿ ರೂ. ಪಾವತಿಸಿ, 15 ದಿನಗಳಲ್ಲಿ ಸುಮಾರು 3.31 ಲಕ್ಷ ಕ್ಲೈಂ ಇತ್ಯರ್ಥಪಡಿಸಿದೆ. ಇಪಿಎಫ್‌ಒ ಎಲ್ಲಾ ಉದ್ಯೋಗಿಗಳಿಗೆ ಮುಂಗಡ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ನೀಡುತ್ತಿದೆ. ಇದು ಒಂದು ಕಡೆ ಲಾಕ್​ಡೌನ್ (Lockdown)  ವೇಳೆ ಜನರ ಆರ್ಥಿಕ ಸಂಕಷ್ಟವನ್ನು ಪರಿಹರಿಸುತ್ತದೆ.  ಆದರೆ ಇನ್ನೊಂದೆಡೆ ಹಣವನ್ನು ಹಿಂತೆಗೆದುಕೊಳ್ಳುವ ಮೊದಲು, ಭವಿಷ್ಯದಲ್ಲಿ ಅದು ಎಷ್ಟು ಲಾಭ ಅಥವಾ ನಷ್ಟವನ್ನು ಹೊಂದಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.


COMMERCIAL BREAK
SCROLL TO CONTINUE READING

ಪ್ರಸ್ತುತ 2019-20ನೇ ಸಾಲಿಗೆ ಪಿಎಫ್‌ಗೆ ಶೇ 8.50 ರಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಖಾತೆದಾರನು 5 ವರ್ಷದೊಳಗಿನ ಖಾತೆಯಿಂದ ಪಿಎಫ್ ಹಣವನ್ನು ಹಿಂತೆಗೆದುಕೊಂಡಾಗ, ಅವನು ಶೇಕಡಾ 10 ರಷ್ಟು ಟಿಡಿಎಸ್ ಆಗಿ ಪಾವತಿಸಬೇಕಾಗುತ್ತದೆ. ಆದರೆ  ಕರೋನಾವೈರಸ್ (Coronavirus) ‌ ಹರಡುವ ಸಮಯದಲ್ಲಿ ಇಪಿಎಫ್ಒ ತನ್ನ ನಿಯಮಗಳನ್ನು ಸಡಿಲಗೊಳಿಸಿದೆ. ಇದರಿಂದಾಗಿ ಖಾತೆದಾರರು ಪ್ರಸ್ತುತ ತೆರಿಗೆ ಪಾವತಿಸಬೇಕಾಗಿಲ್ಲ. ಆದಾಗ್ಯೂ ಪಿಎಫ್‌ನಿಂದ ಮುಂಗಡ ತೆಗೆದುಕೊಳ್ಳುವುದು ಕೊನೆಯ ಆಯ್ಕೆಯಾಗಿದೆ. ಏಕೆಂದರೆ ಈ ಹಣವನ್ನು ನಂತರದ ಅಗತ್ಯಗಳಿಗಾಗಿ ಉಳಿಸಬಹುದು. ಇದಲ್ಲದೆ ನೀವು ಪಿಎಫ್ ಹಣವನ್ನು ವಿತ್ ಡ್ರಾ ಮಾಡಿದ ನಂತರ ದೊಡ್ಡ ನಷ್ಟವನ್ನು ಸಹ ಅನುಭವಿಸಬೇಕಾಗಬಹುದು.


ನಷ್ಟದ ಗಣಿತವನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ಈಗ ನೀವು ಪಿಎಫ್ (PF) ಖಾತೆಯಿಂದ 50 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ತೆಗೆದುಕೊಳ್ಳಲು ಯೋಜಿಸುತ್ತಿದ್ದೀರಿ ಎಂದು ಭಾವಿಸೋಣ. ಆದರೆ ನೀವು ಇಂದು ಈ ಮೊತ್ತವನ್ನು ಹಿಂಪಡೆಯದಿದ್ದರೆ, 10 ವರ್ಷಗಳ ನಂತರ ಈ ಮೊತ್ತವು ಪ್ರಸ್ತುತ ಬಡ್ಡಿದರದಿಂದ 1,13,049 ರೂಗಳಿಗೆ ಏರಿದರೆ, ಇದು 20  ವರ್ಷದಲ್ಲಿ 2,55,602 ಮತ್ತು 30 ವರ್ಷಗಳಲ್ಲಿ 5,77,913 ರೂಗಳಿಗೆ ಹೆಚ್ಚಾಗುತ್ತದೆ. ಇದರ ಅರ್ಥವೇನೆಂದರೆ ನಿಮ್ಮ ಪಿಎಫ್ ಖಾತೆಯಿಂದ ಈಗ ನೀವು 50 ಸಾವಿರ ರೂಪಾಯಿಗಳನ್ನು ಹಿಂತೆಗೆದುಕೊಂಡರೆ ದೊಡ್ಡ ನಷ್ಟವಾಗುತ್ತದೆ ಮತ್ತು ನೀವು ಹಿಂತೆಗೆದುಕೊಳ್ಳದಿದ್ದರೆ, ನಿವೃತ್ತಿಯ ಸಮಯದಲ್ಲಿ ನೀವು ಬಹಳ ದೊಡ್ಡ ಹಣವನ್ನು ಪಡೆಯಬಹುದು.


75 ರಷ್ಟು ಹಣವನ್ನು ಹಿಂಪಡೆಯಬಹುದು:
ಯಾವುದೇ ಗ್ರಾಹಕರು ತಮ್ಮ ಪಿಎಫ್ ಖಾತೆಯಿಂದ ಪೂರ್ಣ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ನೌಕರನು 75 ಪ್ರತಿಶತದಷ್ಟು ಮೊತ್ತವನ್ನು ಮುಂಗಡವಾಗಿ ಅಥವಾ 3 ತಿಂಗಳ ಮೂಲ ವೇತನದಿಂದ (ಮೂಲ + ಡಿಎ) ಹಿಂತೆಗೆದುಕೊಳ್ಳಬಹುದು ಅಥವಾ ಅದು ಇನ್ನೂ ಕಡಿಮೆ ಆಗಿರಬಹುದು. ಮುಂಗಡವಾಗಿ ಗ್ರಾಹಕರು ಹಿಂತೆಗೆದುಕೊಳ್ಳುತ್ತಿರುವ ಹಣವನ್ನು ಹಿಂದಿರುಗಿಸುವ ಅಗತ್ಯವಿಲ್ಲ ಅಥವಾ ಹಿಂದಿರುಗಿಸ ಬೇಕು ಎಂಬ ನಿಯಮವೂ ಇಲ್ಲ ಎಂಬುದು ಪರಿಹಾರದ ವಿಷಯ. 


ಈ ಲಾಭ-ನಷ್ಟಗಳನ್ನು ಲೆಕ್ಕ ಹಾಕಿ ನಿಮಗೆ ತೀರಾ ಅಗತ್ಯವಿದ್ದಲ್ಲಿ ಮಾತ್ರ ಪಿಎಫ್ ಮುಂಗಡ ಹಣವನ್ನು ಪಡೆಯಿರಿ ಇಲ್ಲವೇ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಒಳ್ಳೆಯದು ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.