ದೇಶದ ಅನೇಕ ನಗರಗಳಲ್ಲಿ ಕರೋನಾದ ಹೊಸ `ತರಂಗ`, ಈ ಸೇವೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆ
ದೇಶದಲ್ಲಿ ಕೊರೊನಾವೈರಸ್ ವೇಗ ನಿಧಾನವಾಗಿದ್ದರೂ, ರಾಜಧಾನಿ ದೆಹಲಿಯಲ್ಲಿ ಈ ವೇಗವು ನಿಯಂತ್ರಿಸಲಾಗದಂತಾಗಿದೆ. ಶುಕ್ರವಾರ ದೆಹಲಿಯ ಅಂಕಿ ಅಂಶಗಳ ಭರಾಟೆ ಮತ್ತೆ ಕಂಡುಬಂದಿತು. ದೆಹಲಿಯಲ್ಲಿ ಶುಕ್ರವಾರ 6 ಸಾವಿರದ 608 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ದೆಹಲಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಈಗ 5 ಲಕ್ಷ 17 ಸಾವಿರ 238ಕ್ಕೆ ಏರಿದೆ.
ನವದೆಹಲಿ: ಕೊರೊನಾವೈರಸ್‌ನ ಮುಂದಿನ ತರಂಗವನ್ನು ನಿಯಂತ್ರಿಸುವ ಪ್ರಯತ್ನಗಳು ದೇಶದ ಇತರ ರಾಜ್ಯಗಳಲ್ಲಿ ತೀವ್ರಗೊಂಡಿವೆ. ಅಹಮದಾಬಾದ್ ನಂತರ ಸೂರತ್, ವಡೋದರಾ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿಯ ಕರ್ಫ್ಯೂ ವಿಧಿಸಲಾಗುವುದು. ದೆಹಲಿ-ಮುಂಬೈ ವಿಮಾನ ಮತ್ತು ರೈಲು ಸೇವೆಯನ್ನು ನಿಲ್ಲಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ. ಮುಂಬಯಿಯ ಬಿಎಂಸಿ (BMC) ಡಿಸೆಂಬರ್ 31ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.
ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹರಿಯಾಣದ ಎಲ್ಲಾ ಶಾಲೆಗಳು (Schools) ಮತ್ತು ಕಾಲೇಜುಗಳನ್ನು ನವೆಂಬರ್ 30ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ. ಶಿಕ್ಷಕರಿಗೆ ಶಾಲೆಗೆ ಹೋಗುವುದನ್ನು ಸಹ ನಿಷೇಧಿಸಲಾಗುವುದು ಎನ್ನಲಾಗಿದೆ.
ಭಾರತದಲ್ಲಿ ಕರೋನಾವೈರಸ್ (Coronavirus) ಸೋಂಕಿನ ಸಂಖ್ಯೆ 9 ಮಿಲಿಯನ್ ದಾಟಿದೆ. ಭಾರತದಲ್ಲಿ ಗುರುವಾರ 45 ಸಾವಿರ 882 ಕರೋನಾ ಪ್ರಕರಣಗಳು ವರದಿಯಾಗಿವೆ. ಅದರ ನಂತರ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 90 ಲಕ್ಷ 4 ಸಾವಿರ 365ಕ್ಕೆ ಏರಿಕೆಯಾಗಿದೆ.
ಸರ್ಕಾರದಿಂದ Aarogya Setu 'ಬ್ಯಾಕೆಂಡ್ ಕೋಡ್' ಬಿಡುಗಡೆ
ದೇಶದಲ್ಲಿ ಕರೋನಾವೈರಸ್‌ಗೆ ಬಲಿಯಾದವರ ಸಂಖ್ಯೆ 1 ಲಕ್ಷ 32 ಸಾವಿರ 162ಕ್ಕೆ ಏರಿದೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷ 43 ಸಾವಿರ 794ಕ್ಕೆ ಏರಿದೆ. ದೇಶದಲ್ಲಿ ಇದುವರೆಗೆ 84 ಲಕ್ಷ 28 ಸಾವಿರ 409 ಜನರನ್ನು ಕರೋನಾದಿಂದ ಗುಣಪಡಿಸಲಾಗಿದೆ.
ಐಸಿಎಂಆರ್ (ICMR) ಪ್ರಕಾರ ಭಾರತದಲ್ಲಿ ಈವರೆಗೆ 12,95,91,786 ಪರೀಕ್ಷೆಗಳು ನಡೆದಿವೆ. ಗುರುವಾರ ಒಂದೇ ದಿನದಲ್ಲಿ 10,83,397 ಕರೋನಾ ಪರೀಕ್ಷೆಗಳನ್ನು ಮಾಡಲಾಗಿದೆ. ಅದೇ ಸಮಯದಲ್ಲಿ ಕರೋನಾ ಬಗ್ಗೆ ದೆಹಲಿಯ ಚಿತ್ರವು ತುಂಬಾ ವಿಭಿನ್ನವಾಗಿದೆ. ದೇಶದಲ್ಲಿ ಕೊರೊನಾವೈರಸ್ ವೇಗ ನಿಧಾನವಾಗಿದ್ದರೂ ರಾಜಧಾನಿ ದೆಹಲಿಯಲ್ಲಿ ಈ ವೇಗವು ನಿಯಂತ್ರಿಸಲಾಗದಂತಾಗಿದೆ. ಶುಕ್ರವಾರ, ದೆಹಲಿಯ ಅಂಕಿ ಅಂಶಗಳ ಭರಾಟೆ ಮತ್ತೆ ಕಂಡುಬಂದಿದೆ.
MBBS, ಬಿಡಿಎಸ್‌ನಲ್ಲಿ ಕರೋನಾ ವಾರಿಯರ್ಸ್ ಮಕ್ಕಳಿಗೆ ಸಿಗಲಿದೆ ಮೀಸಲಾತಿ
ದೆಹಲಿ (Delhi) ಯಲ್ಲಿ ಶುಕ್ರವಾರ 6 ಸಾವಿರದ 608 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಕರೋನಾ ಸೋಂಕಿತರ ಸಂಖ್ಯೆ ಈಗ 5 ಲಕ್ಷ 17 ಸಾವಿರ 238ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಕರೋನಾದಿಂದ 118 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಕರೋನಾದಿಂದ ಇದುವರೆಗೆ 8 ಸಾವಿರದ 159 ಜನರು ಸಾವನ್ನಪ್ಪಿದ್ದಾರೆ.
ಆದರೆ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನಾದ ಚಿಕಿತ್ಸೆಯ ನಂತರ 8,775 ಜನರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 4 ಲಕ್ಷ 68 ಸಾವಿರ 143 ಕ್ಕೆ ತಲುಪಿದೆ. ದೆಹಲಿಯಲ್ಲಿ ಈಗ 40 ಸಾವಿರ 936 ಸಕ್ರಿಯ ಕರೋನಾ ಪ್ರಕರಣಗಳಿವೆ.