'ಸಾರಿಗೆ ನೌಕರ'ರ ಸಮಸ್ಯೆ ಆಲಿಸಲು 'ಸಮಿತಿ' ರಚಿಸಿದ ರಾಜ್ಯ ಸರ್ಕಾರ!

ಸಮಿತಿಯಲ್ಲಿ ಕೆ ಎಸ್ ಆರ್ ಟಿ ಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಎಂಟಿಸಿ., ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಎಂಡಿ ಹಾಗೂ ಕೆ ಎಸ್ ಆರ್ ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರನ್ನು ಸಮಿತಿ

Last Updated : Dec 15, 2020, 08:54 PM IST
  • ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮೂರ್ನಾಲ್ಕು ದಿನ ಬಸ್ ಸಂಚಾರ ಬಂದ್ ಆಗಿತ್ತು. ಸಾರಿಗೆ ನೌಕರರು ಮುಷ್ಕರ ಕೈ ಬಿಡಲು ಸರ್ಕಾರ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು
  • ಇದೀಗ ಸಾರಿಗೆ ನೌಕರರ ಸಮಸ್ಯೆ ಆಲಿಸಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚನೆ
  • ಸಮಿತಿಯಲ್ಲಿ ಕೆ ಎಸ್ ಆರ್ ಟಿ ಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಎಂಟಿಸಿ., ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಎಂಡಿ ಹಾಗೂ ಕೆ ಎಸ್ ಆರ್ ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರನ್ನು ಸಮಿತಿ
'ಸಾರಿಗೆ ನೌಕರ'ರ ಸಮಸ್ಯೆ ಆಲಿಸಲು 'ಸಮಿತಿ' ರಚಿಸಿದ ರಾಜ್ಯ ಸರ್ಕಾರ! title=

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮೂರ್ನಾಲ್ಕು ದಿನ ಬಸ್ ಸಂಚಾರ ಬಂದ್ ಆಗಿತ್ತು. ಸಾರಿಗೆ ನೌಕರರು ಮುಷ್ಕರ ಕೈ ಬಿಡಲು ಸರ್ಕಾರ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಇದೀಗ ಸಾರಿಗೆ ನೌಕರರ ಸಮಸ್ಯೆ ಆಲಿಸಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ.

ಹೌದು, ಈ ಸಮಿತಿಯಲ್ಲಿ ಕೆ ಎಸ್ ಆರ್ ಟಿ ಸಿ ಎಂಡಿ ಶಿವಯೋಗಿ ಕಳಸದ್(Shivayogi Kalasad) ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಎಂಟಿಸಿ., ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಎಂಡಿ ಹಾಗೂ ಕೆ ಎಸ್ ಆರ್ ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರನ್ನು ಸಮಿತಿ ಒಳಗೊಂಡಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚುವುದು ಹೇಗೆ ಗೊತ್ತೇ?

ಈ ಸಮಿತಿ ಸಾರಿಗೆ ನೌಕರರ ಸಮಸ್ಯೆ ಆಲಿಸಲಿದ್ದು, ನೌಕರರಿಗೆ ಅರೋಗ್ಯ ಭಾಗ್ಯ ವಿಮಾ ಯೋಜನೆ ಹಾಗೂ ಅಂತರ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು , ಘಟಕ ವ್ಯಾಪ್ತಿಗಳಲ್ಲಿ ಕಿರುಕುಳ ತಪ್ಪಿಸಲು , ಉತ್ತಮ ಆಡಳಿತ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಈ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ.

ನವೋದಯ ವಿದ್ಯಾಲಯ ಪ್ರವೇಶ ಅವಧಿ ವಿಸ್ತರಣೆ

 

Trending News