ಬೆಂಗಳೂರು ಒಂದರಲ್ಲೇ ಬ್ರಿಟನ್‌ನಿಂದ ಬಂದವರು 31 ಜನ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯವಾರು ಆರೋಗ್ಯ ಇಲಾಖೆ ಅಧಿಕಾರಿಗಳು ಬ್ರಿಟನ್‌ನಿಂದ ಭಾರತಕ್ಕೆ ಬಂದಿರುವ ಪ್ರಯಾಣಿಕರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು: ಹೊಸ ಸ್ವರೂಪದ ಕೊರೊನಾವೈರಸ್ ಹರಡುವಿಕೆ ತೀವ್ರ ಆತಂಕ ಮೂಡಿಸಿದ್ದು ಅದು ಕಾಣಿಸಿಕೊಂಡ ಬ್ರಿಟನ್‌ನಿಂದ ಕಳೆದೊಂದು ತಿಂಗಳಲ್ಲಿ ಭಾರತಕ್ಕೆ ಬಂದವೆಲ್ಲರನ್ನೂ ಗುರುತು ಮಾಡಿ ಕೋವಿಡ್ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ತೀವ್ರ ಜನಸಂದಣಿ ಇರುವ ಬೆಂಗಳೂರಿನಲ್ಲಿ ಹೆಚ್ಚು ಜನ ಇರುವುದು ಪತ್ತೆಯಾಗಿದೆ.
ಈಗಾಗಲೇ ಬ್ರಿಟನ್‌ನಿಂದ ಅಥವಾ ಬ್ರಿಟನ್ ಮೂಲಕ ಕಳೆದೊಂದು ತಿಂಗಳಲ್ಲಿ ಭಾರತಕ್ಕೆ ಬಂದಿರುವ ಪ್ರಯಾಣಿಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಪೈಕಿ ಬೆಂಗಳೂರು (Bangalore) ಒಂದರಲ್ಲೇ 31 ಜನ ಪ್ರಯಾಣಿಕರನ್ನು ಇದ್ದಾರೆಂದು ತಿಳಿದುಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ವಲಯವಾರು ಆರೋಗ್ಯ ಇಲಾಖೆ ಅಧಿಕಾರಿಗಳು ಬ್ರಿಟನ್‌ನಿಂದ ಭಾರತಕ್ಕೆ ಬಂದಿರುವ ಪ್ರಯಾಣಿಕರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ 31 ಜನ ಪ್ರಯಾಣಿಕರ ಪೈಕಿ ಪಶ್ಚಿಮ ವಲಯ ಒಂದರಲ್ಲೇ 25 ಜನ ಬ್ರಿಟನ್ ನಿಂದ ಬಂದಿದ್ದಾರೆ ಎಂದು ಗೊತ್ತಾಗಿದೆ. ಇದರಲ್ಲಿ ಪಿಜಿ ಹಳ್ಳಿ ವಾರ್ಡ್ ಒಂದರಲ್ಲೇ 8 ಪ್ರಯಾಣಿಕರು ಇದ್ದಾರೆ.
ಇದನ್ನೂ ಓದಿ: ಬ್ರಿಟನ್‌ನಿಂದ ಭಾರತಕ್ಕೆ ಬಂದವರೆಲ್ಲರನ್ನೂ ಪತ್ತೆ ಹಚ್ಚಿ RT-PCR ಟೆಸ್ಟ್ ಮಾಡಿಸಲು ಸೂಚನೆ
ಎಲ್ಲರನ್ನೂ ಪರೀಕ್ಷೆಗೊಳಿಪಡಿಸಲು ಮುಂದಾಗಿದ್ದು, ನಿನ್ನೆಯೇ 22 ಜನರ ಸ್ಯಾಂಪಲ್ ಪಡೆಯಲಾಗಿದೆ. ಇನ್ನುಳಿದ ಮೂವರು ಪ್ರಯಾಣ ಮುಗಿಸಿ ಬಂದ ಬಳಿಕ ಸ್ವತಃ ಪರೀಕ್ಷೆ ಮಾಡಿಸಿಕೊಂಡಿದ್ದು ಅವರ ರಿಪೋರ್ಟ್ ನೆಗೆಟಿವ್ ಬಂದಿದೆ.
ಇದಲ್ಲದೆ ರಾಜರಾಜೇಶ್ವರಿ ನಗರ ವಲಯದಲ್ಲಿ ಒಂದೇ ಕುಟುಂಬದ 6 ಜನ ಬ್ರಿಟನ್ (Britain)ನಿಂದ ಬಂದಿದ್ದಾರೆ ಎಂದು ತಿಳಿದುಬಂದಿದೆ. ಆ ಆರು ಮಂದಿಯ ಪೈಕಿ ಮೂವರು ಈಗಾಗಲೇ ಸ್ವಾಬ್ ಸ್ಯಾಂಪಲ್ ನೀಡಿದ್ದಾರೆ. ಇನ್ನುಳಿದ ಮೂವರ ಸ್ವಾಬ್ ಸ್ಯಾಂಪಲ್ ಅನ್ನು ಇಂದು ಪಡೆಯಲಾಗುತ್ತದೆ ಎಂಬುದಾಗಿ ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: 'ಸೂಪರ್ ಫಾಸ್ಟ್ ಕೊರೋನಾ ತಡೆಗೆ ಪ್ರಧಾನಿ ಮೋದಿ ಪ್ಲಾನ್'
ಇವರ ಕುಟುಂಬ ತುಮಕೂರು ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸಿದ್ದು ಈ ಕುಟುಂಬದ ವ್ಯಕ್ತಿಯೊಬ್ಬರಿಗೆ ಲಿವರ್ ಗೆ ಸಂಬಂಧಿಸಿದ ಖಾಯಿಲೆ ಇದೆ. ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಇರುವುದರಿಂದ ಕ್ವಾರಂಟೈನ್ ನಲ್ಲೇ ಇದ್ದರೂ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಆ ಕುಟುಂಬದವರಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತರಿಗೂ ಕೊರೊನಾ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಯುಕ್ತ ಮಂಜುನಾಥ ಪ್ರಸಾದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: New Strain of COVID-19 in UK:ಬ್ರಿಟನ್ ನಲ್ಲಿ ಸಿಕ್ಕ ಕೊರೊನಾ ವೈರಸ್ ನ ಹೊಸ ಸ್ವರೂಪದ ಕುರಿತು ಕೇಂದ್ರದ ಮಹತ್ವದ ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.