Fire Accident in Bangalore : ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಸಿಲಿಕಾನ್ ಸಿಟಿಯ ಮಂತ್ರಿ ಮಾಲ್ ಹಿಂಭಾಗ ನಡೆದಿದೆ. ಅಲ್ಲದೇ ಇತ್ತ ಯಲಹಂಕದ ಸಾಫ್ಟ್‌ವೇರ್ ಕಂಪನಿಯೊಂದರ ಟಾಪ್ ಫ್ಲೋರ್ ನಲ್ಲಿ ಬೆಂಕಿ ಧಗಧಗಿಸಿದೆ.
ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆ ಟ್ರಾಫಿಕ್ ಹಿನ್ನೆಲೆ 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಗಿತ್ತು. ಟ್ರಾಫಿಕ್ ವೇಳೆ ಅಂಬ್ಯುಲೇನ್ಸ್ ಗೂ ದಾರಿ ಬಿಡದೇ ಮಾನವೀಯತೆ ಮರೆತ್ತಿರುವುದು ಕಂಡುಬಂದಿದೆ.
ಆರ್ಟ್ ಆಫ್ ಲಿವಿಂಗ್‌ನ ಉಪಕ್ರಮವಾದ ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC), ಭಾವ್ - ದಿ ಎಕ್ಸ್‌ಪ್ರೆಶನ್ಸ್ ಸಮ್ಮಿಟ್ 2023 ಎಂಬ ಶೀರ್ಷಿಕೆಯ ನಾಲ್ಕು ದಿನಗಳ ಪ್ರದರ್ಶನ ಮತ್ತು ಲಲಿತಕಲೆಗಳ ಕ್ಯುರೇಟೆಡ್, ಅವಂತ್-ಗಾರ್ಡ್ ನಾಲ್ಕು ದಿನಗಳ ಉತ್ಸವಕ್ಕೆ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಸಾಕ್ಷಿಯಾಯಿತು.
ಮೃತ ಶ್ರೀನಾಥ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ ಎಂದು ತಿಳಿದು ಬಂದಿದೆ. ತಮ್ಮ ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
Man Killed Street dog : ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ಬೀದಿನಾಯಿ ಮೇಲೆ ಚಾಲಕನೊಬ್ಬ ಕಾರು ಹತ್ತಿಸಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಮೂಕಪ್ರಾಣಿ ಮೇಲೆ ಕಾರು ಹತ್ತಿಸಿರುವ ಚಾಲಕನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮೀಯವಾಗಿದ್ದ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗ ವೈರಲ್ ಮಾಡಿದ್ದ ಆರೋಪಿಯನ್ನು ಈಶಾನ್ಯ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಮರ್ ಪರಿಮಣಿಕನ ಬಂಧಿತ ಆರೋಪಿ. ಪಶ್ಚಿಮ ಬಂಗಾಳ ಮೂಲದವನಾದ ಆರೋಪಿ ಸಮರ್ ಪರಿಮಣಿಕನನ್ನು ಬೆಂಗಳೂರಿನ ಹಲಸೂರಿನ ಬಾಡಿಗೆ ಮನೆಯಲ್ಲಿ ಬಂಧಿಸಲಾಗಿದೆ.
Crime News: ಕೊಲೆ ಮಾಡಿ ಬೈಕ್ ನಲ್ಲೇ ಹೆಣ ಸಾಗಿಸಿದ್ದ ಖತರ್ನಾಕ್ ಆರೋಪಿಗಳನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ದಂಪತಿ ರೀನಾ, ಬಿಜೋಯ್ ಹಾಗೂ ಸ್ನೇಹಿತ ಗಂಗೇಶ್ ಬಂಧಿತ ಆರೋಪಿಗಳಾಗಿದ್ದು, ಕಳೆದ 3ನೇ ತಾರೀಖು ನಿಬಾಶೀಸ್ ಪಾಲ್ ನ ಕೊಲೆ ಮಾಡಿ ಆರೋಪಿಗಳು ಶವ ಬಿಸಾಕಿ ಹೋಗಿದ್ದರು.
ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.
ಬೆಂಗಳೂರು ಸಿಸಿಬಿ ಮತ್ತು ಸೌಥ್ ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಸ್ಟಾರ್ ಇದ್ದಕ್ಕಿದ್ದಂತೆ ಸಿದ್ದಾಪುರ ಪೊಲೀಸರಿಗೆ ಕರೆ ಮಾಡಿ ಸಾರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ ಎಂದು ಗೋಗರೆದಿದ್ದ.
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ, ಪೊಲೀಸ್ ಇಲಾಖೆಯಿಂದ ಫುಲ್ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲು ಸಿದ್ಧತೆ ನಡೆಸಿದೆ. ಸ್ವಯಂ ಪ್ರೇರಣೆಯಿಂದ ಪೊಲೀಸ್ ಇಲಾಖೆ ನಗರದ ಪ್ರತಿಷ್ಠಿತ ಹೊಟೇಲ್ ಗಳ ಪರಿಶೀಲನೆಗೆ ಇಳಿದಿದೆ. ಈ ವೇಳೆ ಹೊಟೇಲ್ ಗಳ ಅಸಲಿ ಸತ್ಯ ಬಯಲಾಗಿದೆ.
Bangalore Crime News : ಸ್ಥಳೀಯ ದಂಧೆಕೋರರು ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದ ಕೋಣನಕುಂಟೆ ಠಾಣಾ ಪೊಲೀಸರ ತಂಡ ಒಡಿಶಾದ ಕಾಡು ದಾರಿಯಲ್ಲೇ ಆರೋಪಿಗಳನ್ನ ಬಂಧಿಸಿದೆ. ಜಗದೀಶ್ ಜಟ್ಟಿ ಹಾಗೂ ಮುರುಳಿ ಬೆಹ್ರಾ ಬಂಧಿತ ಆರೋಪಿಗಳು.
Drunk Driving Cases : ನಗರದಲ್ಲಿ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಸದ್ಯ ಪೊಲೀಸರು ಇದಕ್ಕೆ ಕಾರಣವನ್ನು ಸಹ ಹುಡುಕಿದ್ದಾರೆ. ಎಣ್ಣೆ ಏಟಲ್ಲಿ ವಾಹನ ಚಲಾಯಿಸುವುದು ಅಪಘಾತಗಳಿಗೆ ಕಾರಣ ಎಂಬ ಅಂಶ ಬಯಲಾಗಿದೆ.
ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ವೈರಸ್ ಮತ್ತೆ ಉಲ್ಬಣಗೊಂಡಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರವು ಸಹ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಸಿದರು.
BBMP : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ಮನೆ, ಕಾಂಪೌಂಡ್ ನಿರ್ಮಿಸಿದ್ದ ಭೂ ಗಳ್ಳರಿಗೆ ಪಾಲಿಕೆ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ರಾಜಕಾಲುವೆ ಮೇಲಿದ್ದ ಕಟ್ಟಡವನ್ನ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ನೊಂದವರು ಯಾರೇ ಆಗಲಿ, ನೀವು ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳುವ ಮೊದಲು 112ಗೆ ಕರೆ ಮಾಡಿ ಮಾಹಿತಿ ಅಥವಾ ದೂರು ಸಲ್ಲಿಸಿ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜವರಾಯ ಯಾರ ಪಾಲಿಗೆ ಯಾವ ರೀತಿ ವಕ್ಕರಿಸುತ್ತಾನೋ ಗೊತ್ತಿಲ್ಲ. ಜವರಾಯನ ಅಟ್ಟಹಾಸಕ್ಕೆ 15 ದಿನದ ಹಸುಗೂಸು ಅನಾಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರ ಜೀವನಹಳ್ಳಿಯಲ್ಲಿ ನಡೆದಿದ್ದು, ಬಾವಿಯ ಜಾಲರ ಸರಿ ನೀರಿಗೆ ಬಿದ್ದು ದುರಂತ ನಡೆದಿದೆ.