ಬೆಂಗಳೂರು: ಹೊಸ ಬಗೆಯ ಕೊರೊನಾವೈರಸ್ ಹರಡುವಿಕೆ ತೀವ್ರ ಆತಂಕ ಮೂಡಿಸಿದ್ದು ಅದು ಕಾಣಿಸಿಕೊಂಡ ಬ್ರಿಟನ್‌ನಿಂದ ಕಳೆದೊಂದು ತಿಂಗಳಲ್ಲಿ ಭಾರತಕ್ಕೆ ಬಂದವೆಲ್ಲರನ್ನೂ ಗುರುತು ಮಾಡಿ, ಕೋವಿಡ್ ತಪಾಸಣೆ ನಡೆಸುವ ಜವಾಬ್ದಾರಿಯನ್ನು ಜಿಲ್ಲಾಡಳಿತಗಳಿಗೆ ನೀಡಲಾಗಿದೆ.
ಬ್ರಿಟನ್‌ನಲ್ಲಿ ಕಂಡುಬಂದಿರುವ ಕೊರೊನಾವೈರಸ್‌ನ ನೂತನ ಪ್ರಭೇದವು ಭಾರತದಲ್ಲಿ ಹರಡುವುದನ್ನು ತಡೆಯಲು ಮಂಗಳವಾರ ಕೇಂದ್ರ ಸರ್ಕಾರವು ಹೊಸದಾಗಿ ರೂಪಿಸಿರುವ ಕಾರ್ಯಾಚರಣಾ ವಿಧಾನಗಳು (SOP) ಈ ರೀತಿ ಇವೆ.
* ನವೆಂಬರ್ 25ರಿಂದ ಡಿಸೆಂಬರ್ 23ರವರವರೆಗೆ ಬ್ರಿಟನ್‌ನಿಂದ ಹಾಗೂ ಬ್ರಿಟನ್‌ನ (Britain) ಮೂಲಕ ಭಾರತಕ್ಕೆ ಬಂದಿರುವ ವಿಮಾನಗಳಲ್ಲಿ ಇದ್ದ ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ (RT-PCR) ಪರೀಕ್ಷೆಗೆ ಒಳಪಡಿಸಬೇಕು.
ಇದನ್ನೂ ಓದಿ: ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅನುಮಾನ
* ನವೆಂಬರ್ 25ರಿಂದ ಡಿಸೆಂಬರ್ 23ರವರವರೆಗೆ ಬಂದಿರುವ ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜತೆ ಹಂಚಿಕೊಳ್ಳಬೇಕು.
* ನವೆಂಬರ್ 25ರಿಂದ ಡಿಸೆಂಬರ್ 23ರವರವರೆಗೆ ಭಾರತಕ್ಕೆ ಬಂದ ಪ್ರಯಾಣಿಕರ ಮೇಲೆ ನಿಗಾ ಇರಿಸುವ ಜವಾಬ್ದಾರಿ ಜಿಲ್ಲಾಡಳಿತಗಳದ್ದು. ಪ್ರಯಾಣಿಕರ ಮೇಲೆ 28 ದಿನಗಳವರೆಗೆ ನಿಗಾ ಇರಿಸಬೇಕು.
* ನವೆಂಬರ್ 25ರಿಂದ ಡಿಸೆಂಬರ್ 23ರವರವರೆಗೆ ದೇಶಕ್ಕೆ ಬಂದಿರುವ ಪ್ರಯಾಣಿಕರು ತಮ್ಮ ವಿವರಗಳನ್ನು ತಾವೇ ಘೋಷಿಸಿಕೊಳ್ಳಬೇಕು. ಈ ಪ್ರಯಾಣಿಕರು ತಮ್ಮ ಹಿಂದಿನ 14 ದಿನಗಳ ಪ್ರಯಾಣದ ವಿವರಗಳನ್ನು ನೀಡುವುದು ಕಡ್ಡಾಯ.
ಇದನ್ನೂ ಓದಿ: 'ಸೂಪರ್ ಫಾಸ್ಟ್ ಕೊರೋನಾ ತಡೆಗೆ ಪ್ರಧಾನಿ ಮೋದಿ ಪ್ಲಾನ್'
* ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರವನ್ನು ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್ (Home Quarantine)ಗೆ ಒಳಪಡಿಸಬೇಕು.
* ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ (RT-PCR Test) ಕೋವಿಡ್ ಇರುವುದು ಪತ್ತೆಯಾದರೆ, ಅವರನ್ನು ವಿಶೇಷ ಆರ್‌ಟಿ-ಪಿಸಿಆರ್ (ಸ್ಪೈಕ್ ಜೆನೆ ಆರ್‌ಟಿ-ಪಿಸಿಆರ್) ಪರೀಕ್ಷೆಗೆ ಒಳಪಡಿಸಬೇಕು.
* ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಪ್ರಭೇದದ ಕೊರೊನಾ ವೈರಸ್ ಇರುವುದು ಪತ್ತೆಯಾದರೆ, ಅಂತಹವರನ್ನು ವಿಶೇಷ ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಬೇಕು.
* ಈ ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿ ಕೂತಿದ್ದ ಸೀಟಿನ ಹಿಂದಿನ ಮೂರು ಸಾಲುಗಳು ಮತ್ತು ಮುಂದಿನ ಮೂರು ಸಾಲುಗಳಲ್ಲಿ ಕೂತಿದ್ದ ಪ್ರಯಾಣಿಕರನ್ನು ಹೋಙ ಕ್ವಾರಂಟೈನ್ ಮಾಡಬೇಕು.
ಇದನ್ನೂ ಓದಿ: 'ಯಾವುದೇ ಬೋರ್ಡ್ ಪರೀಕ್ಷೆಗಳನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸುವುದಿಲ್ಲ'
* ಇವರ ಪೈಕಿ ಯಾರಿಗಾದರೂ ಕೋವಿಡ್-19 ಪಾಸಿಟಿವ್ ಇದ್ದಲ್ಲಿ, ಅವರನ್ನು ಸಾಂಸ್ಥಿಕ ಕ್ವಾರಂಟೈನ್ (Institutional Quarantine)ಗೆ ಒಳಪಡಿಸಬೇಕು.
* ಈ ಕೊರೊನಾವೈರಸ್ (Coronavirus) ಪತ್ತೆಯಾದವರನ್ನು 14 ದಿನಗಳ ನಂತರ ಮತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. 14 ದಿನಗಳ ನಂತರವೂ ಪಾಸಿಟಿವ್ ಇದ್ದಲ್ಲಿ, ಚಿಕಿತ್ಸೆ ಮುಂದುವರಿಸಬೇಕು. 24 ಗಂಟೆಗಳ ನಡುವೆ ಎರಡು ಬಾರಿ ನೆಗೆಟಿವ್ ಬರುವವರೆಗೂ ಅವರನ್ನು ಐಸೋಲೇಷನ್‌ನಲ್ಲಿ ಇಡಬೇಕು.
* ಡಿಸೆಂಬರ್ 22ರಂದು ಬಂದಿರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಡಿಸೆಂಬರ್ 23ರಂದು ಬರುವ ಪ್ರಯಾಣಿಕರಿಗೂ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಬೇಕು.
* ವಿಮಾನಕ್ಕೆ ಚೆಕ್ ಇನ್ ಆಗುವ ಮೊದಲೇ ಈ ಎಲ್ಲಾ ಪ್ರಕ್ರಿಯೆಗಳ ಮಾಹಿತಿಯನ್ನು ಪ್ರಯಾಣಿಕರಿಗೆ ತಿಳಿಸುವುದು ಕಡ್ಡಾಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.