ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರು ಗುರುವಾರವೇ ವಿಶ್ವಾಸಮತ ಯಾಚನೆ ಮಾಡಬೇಕಿತ್ತು. ಆದರೆ ಚರ್ಚೆಗೆ ಅವಕಾಶ ಕೇಳಿದ್ದ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಶುಕ್ರವಾರದವರೆಗೂ ಚರ್ಚೆಯನ್ನು ಮುಂದುವರಿಸಿದ್ದರು. ಇದರ ನಡುವೆ ರಾಜ್ಯಪಾಲರು ಮಧ್ಯಪ್ರವೇಸಿ ಮೈತ್ರಿ ಸರ್ಕಾರದ ಬಹುಮತ ಸಾಬೀತುಪಡಿಸಲು ಎರಡು ಬಾರಿ ಡೆಡ್​ಲೈನ್ ನೀಡಿದ್ದರು. ಆದರೆ, ಅದಕ್ಕೆ ಕ್ಯಾರೇ ಎನ್ನದ ಮೈತ್ರಿ ನಾಯಕರು ಬಿಜೆಪಿಯ ವಿರೋಧದ ನಡುವೆಯೂ ಚರ್ಚೆಯನ್ನು ಮುಂದುವರೆಸಿದ್ದರು. ಏನೇ ಆಗಲಿ ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲೇಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು. ಸೋಮವಾರ ಬೆಳಗ್ಗೆಯಿಂದಲೂ ಚರ್ಚೆಯಲ್ಲಿ ತೊಡಗಿಸಿಕೊಂಡ ಆಡಳಿತ ಪಕ್ಷಗಳ ಶಾಸಕರು ತಮಗೆ ಮಾತನಾಡಲು ಅವಕಾಶ ನೀಡಬೇಕೆಂದು ಹಠ ಹಿಡಿದರು. ಇದರ ನಡುವೆ ನಿನ್ನೆ ಸಂಜೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರನ್ನು ಭೇಟಿಯಾದ ಜೆಡಿಎಸ್​- ಕಾಂಗ್ರೆಸ್​ ನಾಯಕರು ಇನ್ನೊಂದೇ ಒಂದು ದಿನ ಸಮಯಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಮೈತ್ರಿ ನಾಯಕರ ಮನವಿಯನ್ನು ಸುತಾರಾಂ ನಿರಾಕರಿಸಿದ ಸ್ಪೀಕರ್ ನಾನು ಈಗಾಗಲೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಇದು ನನ್ನ ಮತ್ತು ನನ್ನ ಸ್ಥಾನದ ಗೌರವದ ಪ್ರಶ್ನೆ. ಎಷ್ಟೊತ್ತಾದರೂ ನಾನು ಕಾಯಲು ಸಿದ್ಧ. ಆದ್ರೆ ಇಂದೇ ವಿಶ್ವಾಸ ಮತಯಾಚನೆ ನಡೆಯಲಿ ಎಂದು ಬಿಗಿ ಪಟ್ಟು ಹಿಡಿದಿದ್ದರು.


COMMERCIAL BREAK
SCROLL TO CONTINUE READING

ಕೊನೆಗೂ ಸೋಮವಾರ ರಾತ್ರಿ 11:57ರವರೆಗೆ ಸುದೀರ್ಘವಾಗಿ ಚರ್ಚೆ ನಡೆಸಿದರೂ ಕೂಡ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೇ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಯಿತು.


ಸೋಮವಾರ ಸದನದಲ್ಲಿ ಏನೆಲ್ಲಾ ಚರ್ಚೆ ಆಯ್ತು; ಅದರ ಪೂರ್ಣ ಮಾಹಿತಿ ಇಲ್ಲಿದೆ:


ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ, ವಿಧಾನ ಸೌಧ ಮತ್ತು ರಾಜ್ ಭವನ ರಸ್ತೆಯಲ್ಲಿ ಸಾಕಷ್ಟು ಭದ್ರತೆಯನ್ನು ನಿಯೋಜಿಸಲಾಗಿದೆ.  ವಿಧಾನಸೌಧದ ಸುತ್ತಮುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.


- ಬೆಳಿಗ್ಗೆ 10 ಗಂಟೆಗೆ ರಮಾಡ ರೆಸಾರ್ಟ್​ನಿಂದ ವಿಧಾನಸೌಧದತ್ತ ಹೊರಟ ಬಿಜೆಪಿ ಶಾಸಕರು. 2 ಬಸ್, 1 ಟಿಟಿಯಲ್ಲಿ ಬಿಜೆಪಿ ಶಾಸಕರ ಪ್ರಯಾಣ.


- ಬೆಂಗಳೂರಿನ ದೊಮ್ಮಲೂರು ನಿವಾಸದಿಂದ ವಿಧಾನಸೌದಕ್ಕೆ ಹೋರಟ ಸ್ಪೀಕರ್ ರಮೇಶ್ ಕುಮಾರ್, ಎಲ್ಲಾ ಅತೃಪ್ತರಿಗೆ ನೋಟಿಸ್​ ನೀಡಿದ್ದೇನೆ. ರಾಜೀನಾಮೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅತೃಪ್ತರಿಗೆ ನೋಟಿಸ್​ ನೀಡಲಾಗಿದ್ದು, ಜುಲೈ 23 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ಬಂಡಾಯ ಶಾಸಕರಿಗೆ ಸಮನ್ಸ್ ನೀಡಿರುವ ತಿಳಿಸಿದರು.


ಪಕ್ಷೇತರರ ಅರ್ಜಿ ವಿಚಾರಣೆ ಇಂದು ಅಸಾಧ್ಯ: ಸುಪ್ರೀಂಕೋರ್ಟ್


ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ್  ಭೇಟಿ;ವಿಶ್ವಾಸಮತ ಸಾಬೀತಿನ ಬಗ್ಗೆ ಮಹತ್ವದ ಚರ್ಚೆ, ಸದನದಲ್ಲಿ ನಡೆಯುವ ಕಲಾಪಗಳ ಬಗ್ಗೆ ಚರ್ಚೆ ನಡೆಸಿದ ಕೈ ನಾಯಕರು.


- ಸ್ಪೀಕರ್ ಕಚೇರಿಗೆ ಬಿಜೆಪಿ ನಿಯೋಗ ಭೇಟಿ.


ಸಿಎಂ ಮನವಿಗೆ ಸ್ಪೀಕರ್ ಬೇಸರ..!
ಸದನ ಆರಂಭವಾಗುವ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಜೊತೆ ಸಿಎಂ ಕುಮಾರಸ್ವಾಮಿ, ಸಚಿವ ಕೃಷ್ಣಬೈರೇಗೌಡ ಸಮಾಲೋಚನೆ. ವಿಶ್ವಾಸಮತ ಯಾಚನೆಗೆ ಇನ್ನೆರಡು ದಿನ ಸಮಯಾವಕಾಶ ಕೊಡಿ ಎಂದು ಸ್ಪೀಕರ್ ಬಳಿ ಮನವಿ ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ. ಸಿಎಂ ಮನವಿಗೆ ಯಾವುದೇ ಭರವಸೆ ನೀಡದ ಸ್ಪೀಕರ್ ರಮೇಶ್ ಕುಮಾರ್.


- ವಿಶ್ವಾಸ ಮತಯಾಚನೆ ವಿಳಂಬ ಮಾಡಲು ಸಾಧ್ಯವಿಲ್ಲ.
- ಸದನದಲ್ಲೇ ನಾನು ಸೋಮವಾರ ಮುಗಿಸುವುದಾಗಿ ಹೇಳಿದ್ದೇನೆ.
- ಸಿಎಂ ನಿಯೋಗದ ಮನವಿಗೆ ಸ್ಪೀಕರ್ ಅಸಮಾಧಾನ.


ಸದನದಲ್ಲಿ ಕುಳಿತು ಮುರುಗೇಶ್ ನಿರಾಣಿ ಲೆಕ್ಕ:


- ಶಾಸಕರು ಎಷ್ಟು ಬಾರಿ ಆಯ್ಕೆಯಾಗಿದ್ದಾರೆ ಎಂಬ ಲೆಕ್ಕ.
- ಜಾತಿ ಹಾಗೂ ಸೀನಿಯಾರಿಟಿ ಆಧಾರದ ಮೇಲೆ ಶಾಸಕರ ಪಟ್ಟಿ ತಯಾರಿಸುತ್ತಿರುವ ನಿರಾಣಿ
- ಅತೃಪ್ತ ಶಾಸಕ ಹೆಚ್. ವಿಶ್ವನಾಥ್ ಸೇರಿದಂತೆ ಹಲವು ಶಾಸಕರ ಹೆಸರನ್ನು ಪಟ್ಟಿ ಮಾಡುತ್ತಿರುವ ನಿರಾಣಿ.


ಸದನಕ್ಕೆ ತಡವಾಗಿ ಆಗಮಿಸಿದ ಸ್ಪೀಕರ್:


ನಾನು 10:30ಕ್ಕೆ ಕಚೇರಿಗೆ ಆಗಮಿಸಿದೆ. ಕೆಲ ಪತ್ರಗಳ ಪರಿಶೀಲನೆ ಇಂದಾಗಿ ತಡವಾಗಿದೆ. ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರಿದ ಸ್ಪೀಕರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ರಿಯಾಲೋಪಕ್ಕೆ ನಾನು ರೂಲಿಂಗ್ ನೀಡಬೇಕಿದೆ.


ಶಾಸಕಾಂಗ ಪಕ್ಷದ ನಾಯಕರ ವಿಪ್ ನೀಡುವ ಜವಾಬ್ದಾರಿ ಮೊಟಕುಗೊಳಿಸುವುದಿಲ್ಲ: ಸ್ಪೀಕರ್ ರೂಲಿಂಗ್


- ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಿ- ಸ್ಪೀಕರ್ ಗೆ ಬಿಜೆಪಿ ಶಾಸಕ ಮಾಧುಸ್ವಾಮಿ ಒತ್ತಾಯ


- ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಶುಕ್ರವಾರವೇ ಸ್ಪಷ್ಟಪಡಿಸಿದ್ದೇನೆ- ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸ್ಪಷ್ಟನೆ


ಆಪರೇಷನ್ ಕಮಲ ಆಡಿಯೋ ಬಗ್ಗೆ ಸದನದಲ್ಲಿ ಕೃಷ್ಣಭೈರೇಗೌಡ ಪ್ರಸ್ತಾಪ:


- ಬಿ.ಸಿ. ಪಾಟೀಲ್ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಅವರಿಗೆ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಅವರು ಬೇಸರಗೊಂಡಿದ್ದರು. 
- ಅತೃಪ್ತ ಶಾಸಕರ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳ್ತಾರೆ.
- ಅತೃಪ್ತ ಶಾಸಕರು ಏಕೆ ರಾಜೀನಾಮೆ ನೀಡಿದ್ದಾರೆ ಎಂಬ ಬಗ್ಗೆ ಚರ್ಚಿಸಬೇಕು.
- ಅತೃಪ್ತ ಶಾಸಕರಲ್ಲಿ ಒಬ್ಬರಾದ ರಮೇಶ್ ಜಾರಕಿಹೊಳಿ ಮೊದಲಿನಿಂದಲೂ ಬಿಜೆಪಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ.
- ರಮೇಶ್ ಜಾರಕಿಹೊಳಿ ಬಿಜೆಪಿ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.


ಬಿ.ಸಿ. ಪಾಟೀಲ್ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು:
- ಬಿ.ಸಿ. ಪಾಟೀಲ್ ಅವರ ಆಡಿಯೋ ಲೀಕ್ ಆಗಿತ್ತು
- ಅದರಲ್ಲಿ ಹಣದ ವಹಿವಾಟಿನ ಬಗ್ಗೆ ಚರ್ಚಿಸಲಾಗಿತ್ತು.
- 25 ಕೋಟಿ ರೂ. ಕೊಡುವುದಾಗಿ ಬಿ.ಸಿ. ಪಾಟೀಲ್ ಅವರಿಗೆ ಆಮಿಷ ಒಡ್ಡಿರುವ ಆಡಿಯೋ ದಾಖಲೆಗಳಿವೆ- ಸದನದಲ್ಲಿ ಕೃಷ್ಣಬೈರೇಗೌಡ ಆರೋಪ


ರಾಜೀನಾಮೆ ನೀಡಿರುವ ಶಾಸಕರಿಗೆ ಮಂತ್ರಿಗಿರಿ ಆಮಿಷ, ಉಪಚುನಾವನೆಯೂ ನಡೆಯುವುದಿಲ್ಲ ಎಂಬ ಭರವಸೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಬಿಜೆಪಿಯ ರಾಷ್ಟ್ರೀಯ ಪಕ್ಷದ ನಾಯಕರೆ ಭರವಸೆ ನೀಡ್ತಾರೆ: ಸದನದಲ್ಲಿ ಕೃಷ್ಣಬೈರೇಗೌಡ ಆರೋಪ

ಕೃಷ್ಣಬೈರೇಗೌಡ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್;
ದಾಖಲೆ ಇಲ್ಲದೆ ಈ ರೀತಿಯ ಆರೋಪ ಸರಿಯಿಲ್ಲ. ಬೇಜವಾಬ್ದಾರಿ ಆರೋಪಕ್ಕೆ ಅರ್ಥವಿಲ್ಲ. ಸದನದಲ್ಲಿ ಗೈರಾದವರ ಬಗ್ಗೆ ಆರೋಪ ತಪ್ಪು.ಮಾಧ್ಯಮಗಳ ವರದಿ ಆಧರಿಸಿ `ಆಪರೇಷನ್ ಕಮಲ'ದ ಆರೋಪ ಮಾಡಿದ ಕೃಷ್ಣ ಬೈರೇಗೌಡ 


- ಅತೃಪ್ತ ಶಾಸಕರ ಕುಟುಂಬದ ಸದಸ್ಯರೊಂದಿಗೆ ಬಿಜೆಪಿ ನಾಯಕರ ಸಂಭಾಷಣೆ.
- ಶಾಸಕರ ಹೆಸರನ್ನು ಪ್ರಸ್ತಾಪಿಸದೇ ಅವರ ಕುಟುಂಬದವರೆ ಮೇಲಿರುವ ಕೇಸ್ ಬಗ್ಗೆ ಪ್ರಸ್ತಾಪ.
- ಬರೀ ಶಾಸಕ ಸ್ಥಾನಕ್ಕೆ 15 ಕೋಟಿ ರೂ.
- ಕ್ಯಾಬಿನೆಟ್ ಬೇಕೆಂದರೆ ಮಂತ್ರಿ ಜತೆಗೆ 5 ಕೋಟಿ ರೂ. ಕೊಡುವುದಾಗಿ ಬಿಜೆಪಿ ಶಾಸಕರೊಬ್ಬರಿಂದ ಆಮಿಷ.
- ಶಾಸಕರು ವ್ಯವಹಾರ ಮಾಡುವುದು ನೈತಿಕತೆನಾ? ಕಾಂಗ್ರೆಸ್ ಸಚಿವ ಕೃಷ್ಣಭೈರೇಗೌಡ ಕಲಾಪದಲ್ಲಿ ಪ್ರಶ್ನೆ...
- ಒಬ್ಬ ಶಾಸಕನಿಂದ 400 ಕೋಟಿ ರೂ. ವ್ಯವಹಾರ- ಕೃಷ್ಣಬೈರೇಗೌಡ ಆರೋಪ


ಕೃಷ್ಣಬೈರೇಗೌಡ ಆರೋಪಕ್ಕೆ ಮಾಧುಸ್ವಾಮಿ ಆಕ್ಷೇಪ.


- ನೀವು ಕಲಾಪದಲ್ಲಿ ಮಾಡುವ ಆರೋಪಕ್ಕೆ ದಾಖಲೆ ಕೊಡಬೇಕಾಗುತ್ತದೆ- ಕೃಷ್ಣಭೈರೇಗೌಡ ಆರೋಪಕ್ಕೆ ಮಾಧುಸ್ವಾಮಿ
- ಈ ಎಲ್ಲಾ ವಿಷಯಗಳು ನ್ಯಾಯಾಲಯ, ಎಸ್ಐಟಿ ಮುಂದೆ ಇವೆ- ಮಾಧುಸ್ವಾಮಿ ಆಕ್ಷೇಪ.


ನಾನು ತನಿಖಾ ಸಂಸ್ಥೆ ಬಗ್ಗೆ ಮಾತನಾಡುವುದಿಲ್ಲ. ಆದರೆ ಈ ರೀತಿಯ ಗಂಭೀರ ವಿಚಾರಗಳು ಇಲ್ಲಿ ಬಿಟ್ಟು ಬೇರೆ ಎಲ್ಲಿಯೂ ಚರ್ಚೆಯಾಗಲು ಸಾಧ್ಯವಿಲ್ಲ- ಸ್ಪೀಕರ್ ರಮೇಶ್ ಕುಮಾರ್.


- ಯಾರ ಬಳಿ ಆಡಳಿತ ಇತ್ತೋ, ಇಂಟೆಲಿಜೆನ್ಸ್ ಇತ್ತೋ ಅವರು ಸುಮ್ಮನಿದ್ದರು. ಅದರ ಬಗ್ಗೆ ತನಿಖೆಯಾಗಲಿ, ನೇಣಿಗೆ ಹಾಕಲಿ. ಆ ಪಾಪದ ಹಣದಲ್ಲಿ ಚುನಾವಣೆ ನಡೆಸಿ ಇಲ್ಲಿಗೆ ಚುನಾಯಿತರಾಗಿ ಬಂದಿದ್ದರೆ ಅದಕ್ಕಿಂತ ಪಾಪದ ಸಂಗತಿ ಬೇರೆ ಇಲ್ಲ- ಸದನದಲ್ಲಿ ಸಿ.ಟಿ. ರವಿ ಹೇಳಿಕೆ


- ಇದು ಸಾರ್ವಜನಿಕರಲ್ಲಿ ಚರ್ಚೆಯಾಗಿ ಉಳಿದಿಲ್ಲ. ಸುಪ್ರೀಂಕೋರ್ಟ್ ವರೆಗೂ ಹೊದಿಗೆ. ಕುದುರೆ ವ್ಯಾಪಾರದ ಆರೋಪ ಬಂದಿರುವುದಾಗಿ ರಾಜ್ಯಪಾಲರೇ ಹೇಳಿದ್ದಾರೆ. ಹೀಗಿರುವಾಗ ಚರ್ಚೆಯಾಗುವುದರಲ್ಲಿ ತಪ್ಪೇನಿದೆ- ಪ್ರಿಯಾಂಕ ಖರ್ಗೆ


- ಆರೋಪಿಗಳ ಜತೆ ಬಿರಿಯಾನಿ ತಿಂದು ಅವರನ್ನು ರಕ್ಷಿಸಿದವರ ಹೆಸರನ್ನೂ ಹೇಳಿ- ಸಿ.ಟಿ. ರವಿ


ತಾವು ಬಿರಿಯಾನಿ ತಿಂದಿಲ್ಲ. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ


- ಐಎಂಎ ಪ್ರಕರಣದಲ್ಲಿ ನಮ್ಮ ಎಸ್​ಐಟಿ ಅಧಿಕಾರಿಗಳಿಗೆ ಎಲ್ಲ ಅಧಿಕಾರ ನೀಡಿದ್ದೇವೆ: ಸದನದಲ್ಲಿ ಸಿಎಂ ಕುಮಾರಸ್ವಾಮಿ 
- ಬಿರಿಯಾನಿ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತಂದಿದ್ದಾರೆ. ನನಗೆ ಮನ್ಸೂರ್​ ಖಾನ್​ ಪರಿಚಯವೇ ಇಲ್ಲ. ಎಸ್​ಐಟಿ ಅಧಿಕಾರಿಗಳಿಗೆ ಎಲ್ಲ ಅಧಿಕಾರ ನೀಡಿದ್ದೇವೆ. ಮನ್ಸೂರ್​ ಖಾನ್​ ವಿಚಾರಣೆ ನಡೆಯುತ್ತಿದೆ,  ಅದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ.
- ನಾನು ನಾನ್​ವೆಜ್ ತಿನ್ನೋದನ್ನೇ ಬಿಟ್ಟಿದ್ದೇನೆ. ಹಾಗಿದ್ದಾಗ ನಾನು ಬಿರಿಯಾನಿ ತಿನ್ನೋಕೆ ಸಾಧ್ಯವೇ ಇಲ್ಲ. ರೋಷನ್ ಬೇಗ್ ನನ್ನನ್ನು ರಂಜಾನ್​ ಔತಣಕೂಟಕ್ಕೆ ಕರೆದುಕೊಂಡು ಹೋಗಿದ್ದರು. ಆ ಔತಣಕೂಟದಲ್ಲಿ ಖರ್ಜೂರ ತಿಂದಿದ್ದನ್ನು ಫೇಸ್​ಬುಕ್​ನಲ್ಲಿ ಯಾರೋ ಹಾಕಿದ್ದನ್ನು ನಾನು ನೋಡಿದ್ದೇನೆ. ವೈಯಕ್ತಿಕವಾಗಿಮನ್ಸೂರ್​ ಖಾನ್​ ಪರಿಚಯವೇ ನನಗಿಲ್ಲ. ಶಾಸಕರ ಜೊತೆ ಹೋದಾಗ ಆತನೂ ಅಲ್ಲಿದ್ದಿರಬಹುದು ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.


ಸದನದಲ್ಲಿ ಆಪರೇಷನ್ ಕಮಲ ಆಡಿಯೋ ಬಗ್ಗೆ ತಮ್ಮ ಮಾತು ಮುಂದುವರೆಸಿದ ಕೃಷ್ಣಭೈರೇಗೌಡ


ರಾಜೀನಾಮೆ ನೀಡಿ ಮುಂಬೈಗೆ ತೆರಳಿದ ಶಾಸಕರೊಂದಿಗೆ ವಿರೋಧ ಪಕ್ಷದ ನಾಯಕರ ಸಹಾಯಕ ಕಾಣಿಸಿಕೊಂಡ ಬಗ್ಗೆ ಕೃಷ್ಣಬೈರೇಗೌಡ ಪ್ರಸ್ತಾಪ.


- ಅತ್ರುಪ್ತರನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋದವರು ಯಾರು? 


- ಟ್ರಿಪ್​ಗಳಲ್ಲಿ ರಾಜ್ಯಸಭಾ ಸದಸ್ಯರೊಬ್ಬರ ವಿಶೇಷ ವಿಮಾನದಲ್ಲಿ ಶಾಸಕರನ್ನು ಕರೆದೊಯ್ಯಲಾಗಿದೆ: ಸಚಿವ ಕೃಷ್ಣ ಭೈರೇಗೌಡ ಆರೋಪ


ಅತೃಪ್ತ ಶಾಸಕರೊಂದಿಗೆ ಬಿಜೆಪಿ ನಾಯಕರ ಸಮಾಲೋಚನೆ ಬಗ್ಗೆ ಪ್ರಸ್ತಾಪಿಸಿದ ಕೃಷ್ಣಭೈರೇಗೌಡ

ಈ ವೇಳೆ ಮಧ್ಯಪ್ರವೇಶಿಸಿದ ಅರವಿಂದ ಲಿಂಬಾವಳಿ:


- ಕೃಷ್ಣಭೈರೇಗೌಡ ಆರೋಪಕ್ಕೆ ಲಿಂಬಾವಳಿ ಆಕ್ಷೇಪ. ಯಾರು ಬೇಕಾದರೂ ವಿಮಾನ ತೆಗೆದುಕೊಂಡು ಹೋಗಬಹುದು. ಯಾರು ವಿಮಾನ ತೆಗೆದುಕೊಂಡು ಹೋಗಿದ್ದಾರೆ ಎಂದು ಬಿಲ್ ತೆಗೆದು ನೋಡಿ ಎಂದ ಲಿಂಬಾವಳಿ


- ಬಿಜೆಪಿಗೆ ಸೇರ್ಪಡೆಯಾಗಿರುವ ವಿ. ಸೋಮಣ್ಣ, ಜಗ್ಗೇಶ್, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಇವರನ್ನೆಲ್ಲ ಬಿಜೆಪಿ ಆಪರೇಷನ್ ಕಮಲ ಮಾಡಲಿಲ್ವ? ಸದನದಲ್ಲಿ ಕೃಷ್ಣ ಭೈರೇಗೌಡ ಪ್ರಶ್ನೆ


ಆಕ್ಷೇಪ ವ್ಯಕ್ತಪಡಿಸಿದ ಸೋಮಣ್ಣ: ಸ್ವ ಇಚ್ಛೆಯಿಂದ ಪಕ್ಷ ಬಂದು ಸೇರುವ ಹಕ್ಕು ನಮಗಿದೆ. ನೀವೂ ಜನತಾ ದಳ ಬಿಟ್ಟು ಬಂದು ಕಾಂಗ್ರೆಸ್ ಸೇರಿಲ್ಲವೇ ಎಂದು ಕೃಷ್ಣ ಭೈರೇಗೌಡರನ್ನು ಪ್ರಶ್ನಿಸಿದ ಸೋಮಣ್ಣ


- ಕರ್ನಾಟಕ ಮಾತ್ರವಲ್ಲ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿಯೂ ಆಪರೇಷನ್ ಕಮಲ ನಡೆದಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಪ್ರಭಾವಿ ನಾಯಕರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಬಗ್ಗೆ ಸ್ಪೀಕರ್ ಮೊದಲು ತೀರ್ಮಾನ ತೆಗೆದುಕೊಳ್ಳಬೇಕು. ಆಗ ಈ ತ್ರಿಶಂಕು ಪರಿಸ್ಥಿತಿ ನಿವಾರಣೆಯಾಗುತ್ತದೆ. ರಾಜೀನಾಮೆ ಬಗ್ಗೆ ತೀರ್ಮಾನವಾಗದೆ ವಿಶ್ವಾಸಮತಕ್ಕೆ ಪಾವಿತ್ರ್ಯತೆ ಇರುವುದಿಲ್ಲ. ಸುಪ್ರೀಂಕೋರ್ಟ್ ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುತ್ತಿದೆ. ಅನರ್ಹತೆ, ವಿಪ್, ರಾಜೀನಾಮೆ ಮೂರು ಸ್ಪೀಕರ್ ಕೈಯಲ್ಲಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಗಮನಿಸಿದರೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ತಕ್ಷಣ ಭಿನ್ನಮತೀಯ ಶಾಸಕರ ರಾಜೀನಾಮೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಎಂದು ಸ್ಪೀಕರ್ ಗೆ ಕೃಷ್ಣಭೈರೇಗೌಡ ಮನವಿ ಮಾಡಿದರು.


ವಿಧಾನಸಭೆ ಕಲಾಪವನ್ನು ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಮಧ್ಯಾಹ್ನ 3:30ಕ್ಕೆ ಮುಂದೂಡಿದರು.


3.30ಕ್ಕೆ ಕಲಾಪ ಆರಂಭವಾದ ಬಳಿಕ ಸದನದಲ್ಲಿ ಮತ್ತೆ ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರೂ ಪಕ್ಷಾಂತರ ಮಾಡಿದ್ದರು ಎಂದ ಬಿಜೆಪಿ ಶಾಸಕ ಸಿ.ಟಿ.ರವಿ


ಬಸವರಾಜ ಬೋಮ್ಮಾಯಿಯನ್ನು ದೇವೇಗೌಡರೇ ಅಧಿಕಾರದಿಂದ ಇಳಿಸಿದ್ದರು ಎಂದು ನೀವೇ ಹೇಳಿದ್ದೀರಿ. ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ ಎಂದು ಸಿ.ಟಿ. ರವಿ ಅವರು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.


'ನಾನು ಜೆಡಿಎಸ್ ಬಿಟ್ಟಿಲ್ಲ. ಅವರೇ ನನ್ನನ್ನು ಉಚ್ಚಾಟನೆ ಮಾಡಿದ್ದರು'- ಸಿ.ಟಿ. ರವಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು.


ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಅಧಿಕಾರ ವಹಿಸಿಕೊಳ್ಳಬಹುದು. ಆದರೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಸರಿಯಲ್ಲ- ವಿಧಾನಸಭೆಯಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ


ಪ್ರತಿಪಕ್ಷದ ನಾಯಕರಿಗೂ ಜವಾಬ್ದಾರಿ ಇದೇ; ವಿಧಾನಸಭೆಯಲ್ಲಿ ಎ.ಟಿ. ರಾಮಸ್ವಾಮಿ
ಪ್ರತಿಪಕ್ಷದ ನಾಯಕರಿಗೂ ಜವಾಬ್ದಾರಿ ಇದೇ. ರಾಜ್ಯದಲ್ಲಿ ಬರ ಇದೆ, ರೈತರು ತೊಂದರೆಗೆ ಸಿಲುಕಿದ್ದಾರೆ. ಇಂತಹ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಗಮನ ಸೆಳೆಯಬೇಕಿದೆ ಎಂದು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
- ಈಗ ಪ್ರಜಾಪ್ರಭುತ್ವದ ಮೌಲ್ಯಗಳು ಇಲ್ಲದಂತಾಗಿದೆ.
- ನೈತಿಕ ಮೌಲ್ಯ, ಸಿದ್ಧಾಂತಗಳ ಮೇಲೆ ನಿರ್ಣಯ ಆಗಲ್ಲ.
- ನ್ಯಾಯ ಸತ್ಯಗಳು ಕುಸಿಯುತ್ತಿವೆ. ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಇರುವುದು ಸಂಖ್ಯಾ ಬಲದ ಮೇಲೆ.
- ರಾಜ್ಯದಲ್ಲಿ ಭೀಕರ ಬರಗಾಲವಿದೆ.
- ವಾಡಿಕೆ ಮಳೆಗಿಂತ 60-70 ರಷ್ಟು ಮಳೆ ಕೊರತೆ ಇದೆ.
- ರಾಜ್ಯದ 160 ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ.
- ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
- ಜಾನುವಾರುಗಳಿಗೆ ಮೇವಿನ ಕೊರತೆ ಇದೆ.
- ಇಂತಹ ಸಂದರ್ಭದಲ್ಲಿ ಅಂತಹ ವಿಚಾರಗಳ ಬಗ್ಗೆ ಚರ್ಚಿಸದೆ, ನಮ್ಮ ಅಧಿಕಾರದ ದಾಹಕ್ಕಾಗಿ ಚರ್ಚೆ ಮಾಡುತ್ತಿರುವುದು ಸದನದ ಗೌರವಕ್ಕೆ ಧಕ್ಕೆ ತರುತ್ತಿರುವುದು ಸರಿ ಎನಿಸುತ್ತಿಲ್ಲ.


ಜೀರೋ ಟ್ರಾಫಿಕ್ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ


- ನಾವು ಜೀರೋ ಟ್ರಾಪಿಕ್ ಕೊಟ್ಟಿಲ್ಲ. ಕೊಡುವಂತೆ ಆದೇಶ ನೀಡಿಯೂ ಇಲ್ಲ ಎಂದ ಎಂ.ಬಿ.ಪಾಟೀಲ್. ರಾಜ್ಯಪಾಲರ ಆದೇಶದ ಭದ್ರತೆ ಮಾತ್ರ ಒದಗಿಸಲಾಗಿತ್ತು.

ಗೃಹ ಸಚಿವ ಎಂ.ಬಿ ಪಾಟೀಲ್ ಗೆ ಸ್ಪೀಕರ್ ರಮೇಶ್ ಕುಮಾರ್ ತರಾಟೆ


- ಮಧ್ಯಾಹ್ನ ಭೋಜನದ ಬಳಿಕ ಸದನಕ್ಕೆ ಗೈರಾಗಿದ್ದ ಸಿಎಂ ಕುಮಾರಸ್ವಾಮಿ


ಮೈತ್ರಿ ಬಿಕ್ಕಟ್ಟು ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್


- ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿವೆ. ಇಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. 15 ಜನ ಶಾಸಕರು ಸದನಕ್ಕೆ ಹಾಜರಾಗಬಹುದು ಅಥವಾ ಬಿಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಅಲ್ಪಮತಕ್ಕೆ ಕುಸಿದಿದೆ. ಆ ಶಾಸಕರು ಹಿಂತಿರುಗುವವರೆಗೂ, ಸರ್ಕಾರಕ್ಕೆ ಬಹುಮತ ಬರುವವರೆಗೂ ಕಲಾಪ ಮುಂದುವರೆಯುತ್ತೆ. ಸ್ಪೀಕರ್ ಅವರ ಈ ನಡೆ ಸ್ವೀಕಾರಾರ್ಹವಲ್ಲ. ಇದಕ್ಕೆಲ್ಲ ಇಂದೇ ಕೊನೆ ಹಾಡಬೇಕು. ರಾಜ್ಯಪಾಲರು ಈ ಬಗ್ಗೆ ನಿರ್ಧಾರ ಕೈಗೊಂಡು ಪ್ರಜಾಪ್ರಭುತ್ವ ಉಳಿಸಬೇಕು- ಮುರಳೀಧರ ರಾವ್


ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ ಎಂದು ಸ್ಪೀಕರ್ ಬಳಿ ಮತ್ತೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ


- ಸುಪ್ರೀಂಕೋರ್ಟ್ ತೀರ್ಪಿನವರೆಗೂ ಕಾಯೋಣ. ಅಲ್ಲಿಯವರೆಗೆ ವಿಸ್ವಾಸಮತ ಯಾಚನೆ ಬೇಡ ಎಂದು ಸಿಎಂ ಮನವಿ


ವಿಶ್ವಾಸ ಮತಕ್ಕೆ ಇನ್ನೆರಡು ದಿನಗಳ ಕಾಲಾವಕಾಶ ಕೋರಿದ ಸಿಎಂ ಕುಮಾರಸ್ವಾಮಿ?


ಕರ್ 'ನಾಟಕ' ರಾಜಕೀಯ ಬಿಕ್ಕಟ್ಟು: ಇಂದೇ ವಿ'ಶ್ವಾಸ ಮತಯಾಚನೆಗೆ ಸ್ಪೀಕರ್ ಬಿಗಿಪಟ್ಟು


ವಿಧಾನಸೌಧಕ್ಕೆ ಆಗಮಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಜಿಪಿ ನೀಲಮಣಿ ರಾಜು. 


ಸದನದಲ್ಲಿ ಮಾತನಾಡಿದ ಶಾಸಕ ಕಂಪ್ಲಿ ಗಣೇಶ್


- ಭಾಷಣದ ಉದ್ದಕ್ಕೂ ಹಲವು ತಪ್ಪುಗಳನ್ನು ಮಾಡಿದ ಕಂಪ್ಲಿ ಶಾಸಕ


- ವಿಶ್ವಾಸಮತಯಾಚನೆಗೆ ಅವಿಶ್ವಾಸಮತ ಎಂದು ಹೇಳಿದ ಕಂಪ್ಲಿ ಗಣೇಶ್


- ಹಲವು ಬಾರಿ ತಪ್ಪುಗಳನ್ನು ತಿದ್ದಿದ ಸ್ಪೀಕರ್


- ಬರೆದುಕೊಂಡು ಬಂದಿರುವ ಭಾಷಣವನ್ನು ಓದುತ್ತಿದೀರಿ. ಇನ್ನೂ ಹಲವರು ಮಾತನಾಡುವವರಿದ್ದಾರೆ. ಅವಕಾಶ ಕೊಡಿ ಎಂದು ಕಂಪ್ಲಿ ಗಣೇಶ್ ಅವರಿಗೆ ಸ್ಪೀಕರ್ ಸೂಚನೆ


ಸದನದಲ್ಲಿ ಝೀರೋ ಟ್ರಾಫಿಕ್ ಬಗ್ಗೆ ಗದ್ದಲ; ಪೊಲೀಸ್ ಆಯುಕ್ತರೊಂದಿಗೆ ತುರ್ತು ಸಭೆ ಕರೆದ ಗೃಹ ಸಚಿವ ಎಂ.ಬಿ.ಪಾಟೀಲ್


ಸದನದಲ್ಲಿ ಎಲ್ಲಾ ಶಾಸಕರಿಗೂ ಮಾತನಾಡಲು ಅವಕಾಶ ಮಾಡಿಕೊಡುವಂತೆ ಆಡಳಿತ ಪಕ್ಷದ ಶಾಸಕರಿಂದ ಗದ್ದಲ


- ಇನ್ನೂ ಹಲವು ವಿಷಯಗಳ ಚರ್ಚೆ ಆಗಬೇಕಿದೆ. ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸುಪ್ರೀಂಕೋರ್ಟ್ ಇನ್ನೂ ತೀರ್ಪು ನೀಡಿಲ್ಲ. ಹೀಗಿರುವಾಗ ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ. ಎಲ್ಲರೂ ಮಾತನಾಡಬೇಕು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಹದದಲ ಆರಂಭಿಸಿದ ಆಡಳಿತ ಪಕ್ಷದ ಶಾಸಕರು


- ಗದ್ದಲದ ಹಿನ್ನೆಲೆಯಲ್ಲಿ 10 ನಿಮಿಷಗಳ ಕಾಲ ಕಲಾಪ ಮುಂದೂಡಿದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್


ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಿರುವ ವಿಚಾರ


ಸ್ಪೀಕರ್ ಕಚೇರಿಗೆ 2 ಸಿ.ಡಿ.ಗಳನ್ನು ರವಾನೆ ಮಾಡಿದ ಪೊಲೀಸ್ ಇಲಾಖೆ


10 ನಿಮಿಷ ಎಂದು ಗಂಟೆಗಳ ಬಳಿಕ ಕಲಾಪ ಮತ್ತೆ ಆರಂಭ


- ಕಲಾಪ ಆರಂಭವಾಗುತ್ತಿದ್ದಂತೆಯೇ ವಿಶಾಸಮತ ಯಾಚನೆಗೆ ಬಿಜೆಪಿ ಒತ್ತಾಯ


- ಎಷ್ಟು ಹೊತ್ತಾದರೂ ಪರವಾಗಿಲ್ಲ. ಇಂದೇ ವಿಶ್ವಾಸಮತ ಯಾಚನೆ ಆಗಲಿ- ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ 


- ಇಂದೇ ವಿಶ್ವಾಸಮತ ನಡೆಯಲಿದೆ. ಅದಕ್ಕಾಗಿ ನಾನ್ನೂ ಕಾಯುತ್ತೇನೆ ಎಂದ ಸ್ಪೀಕರ್ ರಮೇಶ್ ಕುಮಾರ್


ಬಿಜೆಪಿ ಮನವಿಗೆ ಆಡಳಿತ ಪಕ್ಷದ ಸದಸ್ಯರಿಂದ ಆಕ್ಷೇಪ


- ಬೇಕೇ ಬೇಕು ನ್ಯಾಯ ಬೇಕು ಎಂದು ಸದನದಲ್ಲಿ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್-ಜೆಡಿಎಸ್ ನಾಯಕರು


ದೋಸ್ತಿ ಪಕ್ಷಗಳ ಪ್ರತಿಭಟನೆಯಿಂದ ಸಿಟ್ಟಿಗೆದ್ದ ಸ್ಪೀಕರ್ ರಮೇಶ್ ಕುಮಾರ್


- ಯಾರಿಗೆ ಬೇಕು ನ್ಯಾಯ? ಯಾರು ಕೊಡಿಸಬೇಕು? ಜನ ನಮ್ಮನ್ನು ಲೈವ್ ನೋಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಕಲಾಪ ನಿದಬೇಕ್ದ್ನು ನಾನು ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ನೀವೆಲ್ಲರೂ ಇದಕ್ಕೆ ಸಹಕರಿಸಿ. ಎಲ್ಲರೂ ಅವರವರ ಸ್ಥಾನಗಳಲ್ಲಿ ಕುಳಿತುಕೊಳ್ಳಿ. ಅಲ್ಲಿಯವರೆಗೂ ಕಲಾಪ ಆರಂಭಿಸುವುದಿಲ್ಲ : ಮೈತ್ರಿ ಪಕ್ಷದ ಶಾಸಕರ ವಿರುದ್ಧ ಸ್ಪೀಕರ್ ಗರಂ


ಸದನದಲ್ಲಿ ಗದ್ದಲದ ನಡುವೆಯೇ ಎದ್ದು ನಿಂತ ಸಭಾಧ್ಯಕ್ಷರು


- ಮತ್ತೆ ಸದನದಲ್ಲಿ ಗದ್ದಲ ಆರಂಭ. ಸಂವಿಧಾನ ಉಳಿಸಿ ಘೋಷಣೆ ಕೂಗಿದ ಸದಸ್ಯರ ವಿರುದ್ಧ ಸ್ಪೀಕರ್ ಗರಂ


- ಮೊದಲು ನಾಯಕರಿಗೆ ಗೌರವ ಕೊಡಿ. ಅವರು ಎದ್ದು ನಿಂತಿದ್ದರೂ ಅಗೌರವ ತೋರಿಸುತ್ತಿರುವುದು ಸರಿಯಲ್ಲ ಎಂದ ಸ್ಪೀಕರ್


ಗದ್ದಲದ ನಡುವೆಯೇ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ


ಸೋಮವಾರ ವಿಶ್ವಾಸಮತ ಯಾಚನೆ ಮಾಡುತ್ತೇವೆ ಎಂದು ಶುಕ್ರವಾರ ನೀವು, ಸಿದ್ದರಾಮಯ್ಯ ಅವರು, ಸಿಎಂ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಿರಿ. ನಮಗೆ ನಿಮ್ಮ ಮಾತಿನ ಬಗ್ಗೆ ವಿಶ್ವಾಸ ಇದೆ. ರಾತ್ರಿ 12 ಗಂಟೆಯವರೆಗೂ ಕಾಯುತ್ತೇವೆ. ಸಭಾಧ್ಯಕ್ಷರಾದ ಸಿಎಂ ಕುಮಾರಸ್ವಾಮಿ ಅವರು ಏನು ಮಾತನಾಡಬೇಕೋ ಮಾತನಾಡಲಿ. ನಾವು ತಾಳ್ಮೆಯಿಂದ ಕಾಯುತ್ತೇವೆ. ಸಿದ್ದರಾಮಯ್ಯ ಅವರು, ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದ ಮೇಲೆ ವಿಶ್ವಾಸಮತ ಯಾಚನೆ ಮಂಡನೆಯಾಗಲಿ. ನಾವು ಕಾಯುತ್ತೇವೆ- ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿಕ


ನಾನು ಸಹಕರಿಸುತ್ತೇನೆ ಎಂದು ಮಾತ್ರ ಭರವಸೆ ನೀಡಿದ್ದೆ. ನನ್ನನ್ನು ನಾನೇ ನಿಯಂತ್ರಣ ಮಾಡಿಕೊಳ್ಳುತ್ತಿದ್ದೇನೆ. ಕೋಪದಲ್ಲಿ ಏನೇನೋ ಮಾತನಾಡಿದರೆ ಸರಿಯಾಗುವುದಿಲ್ಲ: ಸ್ಪೀಕರ್ ರಮೇಶ್ ಕುಮಾರ್


ಸದನದಲ್ಲಿ ಮಾತನಾಡುತ್ತಿರುವ ಶಾಸಕ ಹೆಚ್.ಕೆ.ಪಾಟೀಲ್


-  ಸಂವಿಧಾನ ಚೌಕಟ್ಟಿನಲ್ಲಿ ನೀವು ತೀರ್ಪು ನೀಡುತ್ತಿದ್ದೀರಿ, ಅದು ಸ್ವಾಗತಾರ್ಹ. ಆದರೆ, ನೀವು ಯಾವುದೇ ತೀರ್ಪು ನೀಡುವ ಮುನ್ನ ನಮ್ಮ ಹಕ್ಕುಗಳನ್ನು ಗೌರವಿಸಬೇಕಿದೆ. ಸದನದಲ್ಲಿ ಎಲ್ಲಾ ಶಾಸಕರು ಇಲ್ಲ. ಇದರಿಂದಾಗಿ ನೀವು ಯಾವುದೇ ತೀರ್ಮಾನ ತೆಗೆದುಕೊಂಡರು, ಅದು ಅಪೂರ್ಣವಾಗಿರುತ್ತದೆ. ಹಾಗಾಗಿ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕವೇ ವಿಶ್ವಾಸಮತಯಾಚನೆ ಆಗಲಿ - ಕಾಂಗ್ರೆಸ್​ ಹಿರಿಯ ಶಾಸಕ ಎಚ್​​.ಕೆ ಪಾಟೀಲ್​​


ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸಿಎಂ ಕುಮಾರಸ್ವಾಮಿ ರಾಜೀನಾಮೆ ಪತ್ರ


- ರಾಜ್ಯಪಾಲರಿಗೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ ಎನ್ನಲಾದ ನಕಲಿ ರಾಜೀನಾಮೆ ಪತ್ರ


- ಸದನದಲ್ಲಿ ಕುಳಿತು ರಾಜ್ಯಪಾಲರಿಗೆ ಸಿಎಂ ಸಲ್ಲಿಸಿದ್ದಾರೆ ಎನ್ನಲಾದ ನಕಲಿ ರಾಜೀನಾಮೆ ಪತ್ರವನ್ನು ಸ್ವತಃ ಓದುತ್ತಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ



 


ರಾಜ್ಯಪಾಲರ ಬಗ್ಗೆ ಎಷ್ಟು ಬಾರಿ ಮಾತನಾಡುತ್ತೀರಿ. ಇದೇ ರೀತಿ ಮುಂದುವರೆದರೆ ಹೇಗೆ? ಕೋರ್ಟ್ ಗೆ ಹೋಗೋದು ಬಿಡೋದು ಅವರ ಹಣೆಬರಹ, ಶಾಸನ ಸಭೆ ಮತ್ತು ಸುಪ್ರೀಂಕೋರ್ಟ್ ಆದೇಶಗಳನ್ನು ಗೌರವಿಸಲಿ- ಆಡಳಿತ ಪಕ್ಬಿಷದ ಶಾಸಕರ ವಿರುದ್ಧ ಶಾಸಕ ಮಾಧುಸ್ವಾಮಿ ಟೀಕೆ


ಇಡೀ ರಾಜ್ಯಕ್ಕೇ ಗೊತ್ತಿದೆ ಆಡಳಿತ ಪಕ್ಷಗಳಿಗೆ ಬಹುಮತ ಇಲ್ಲ ಎಂದು. ನಿಮ್ಮ ಮೇಲೆ ನಾವು ಇನ್ನೂ ವಿಶ್ವಾಸ ಕಳೆದುಕೊಂಡಿಲ್ಲ. ಡಿವಿಷನ್ ಕರೆಯಿರಿ, ಯಾರಿಗೆ ಶಕ್ತಿ ಇದೆ ವೋಟ್ ಹಾಕಲಿ- ಸ್ಪೀಕರ್ ಗೆ ಮಾಧುಸ್ವಾಮಿ ಮನವಿ


ಶಾಸಕ ಮಾಧುಸ್ವಾಮಿ ಹೇಳಿಕೆಗೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಆಕ್ಷೇಪ


- BAC ಸಭೆಗೆ ಬಿಜೆಪಿಯವರೇ ಬರಲಿಲ್ಲ. ಅವತ್ತೆ ಬಂದಿದ್ರೆ ಎಲ್ಲಾ ಮುಗೀತಿತ್ತು. ಸುಪ್ರೀಂ ಕೋರ್ಟ್ ಗೆ ಹೋಗಿ ನಿರ್ದೇಶನ ತಂದವರು ಯಾರು? ಇಂದು ಸಂಜೆಯೊಳಗೆ ಮುಗಿಯಬೇಕು ಎಂದು ಹೇಳಿದ್ದಾರೆ. ಈ ಮಧ್ಯೆ ಝೀರೋ ಟ್ರಾಫಿಕ್ ನಲ್ಲಿ ಹೋಗಿದ್ದಾರೆ ಎಂದು ಹೆಚ್.ಡಿ ರೇವಣ್ಣ ಆರೋಪ.


- ರೇವಣ್ಣ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಅರವಿಂದ ಲಿಂಬಾವಳಿ. 


- "ಬನ್ನಿ ನಿಮ್ಮದು ಏನೆಲ್ಲಾ ಬಿಚ್ಚಿಡಬೇಕೋ ಎಲ್ಲಾ ಬಿಚ್ಚಿಡ್ತೀನಿ" ಎಂದು ಹೇಳುತ್ತಾ ಸಿಡಿಮಿಡಿಗೊಂಡ ಶಾಸಕ ಹೆಚ್.ಡಿ.ರೇವಣ್ಣ


ಸದನದಲ್ಲಿ ಸಚಿವ ಯು.ಟಿ.ಖಾದರ್ ಹೇಳಿಕೆ


-ನಾವು ವಿಶ್ವಾಸಮತ ಯಾಚನೆ ಮಂಡಿಸಿದ್ದೇವೆ. ನೀವು ನಿಗದಿ ಮಾಡಿದ ದಿನಾಂಕವನ್ನು ನಾವು ಗೊರವಿಸಿದ್ದೆವು. ಆದರೆ ಬಿಜೆಪಿಯವರು ಅತೃಪ್ತ ಶಾಸಕರಿಂದ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲವನ್ನೂ ನೋಡಿದ್ರೆ ಬಿಜೆಪಿ ಅವರಿಗೆ ಗೌರವ ಇಲ್ಲ ಅನ್ನೋದು ತಿಳಿಯುತ್ತಿದೆ. ಹಾಗಾಗಿ ದಯವಿಟ್ಟು ವಿಶ್ವಾಸಮತ ಯಾಚನೆ ಮುಂದೂಡಿ ಎಂದ ಸಚಿವ ಯು.ಟಿ.ಖಾದರ್


ಝೀರೋ ಟ್ರಾಫಿಕ್ ಬಗ್ಗೆ ಸ್ಪೀಕರ್ ಸ್ಪಷ್ಟೀಕರಣ


ಮಧ್ಯಾಹ್ನ ಸದನದಲ್ಲಿ ಎ.ಟಿ.ರಾಮಸ್ವಾಮಿ ಅವರ ಝೀರೋ ಟ್ರಾಫಿಕ್ ವಿಷಯ ಪ್ರಸ್ತಾಪಕ್ಕೆ ಸ್ಪೀಕರ್ ಸ್ಪಷ್ಟೀಕರಣ


- ಅತೃಪ್ತ ಶಾಸಕರು ಮುಂಬೈನಿಂದ ಬಂದು ರಾಜೀನಾಮೆ ಸಲ್ಲಿಸಲು ಅನುವಾಗುವಂತೆ ರಾಜ್ಯಪಾಲರು ಝೀರೋ ಟ್ರಾಫಿಕ್ ಬಗ್ಗೆ ಅನುಮತಿ ನೀಡಿಲ್ಲ. ಇಂತಹ ತಪ್ಪು ಸಂದೇಶ ಜನರಿಗೆ ಹೋಗಬಾರದು. ಝೀರೋ ಟ್ರಾಫಿಕ್ ಎನ್ನುವ ನಿರ್ದೇಶನವನ್ನು ಯಾವುದೇ ಅಧಿಕಾರಿಗೂ ನೀಡಿಲ್ಲ. ಸಿಗ್ನಲ್ ನಲ್ಲಿ ಕೇವಲ ಟ್ರಾಫಿಕ್ ತಡೆದು ವಿಧಾನಸೌಧಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ. 


- ಮಾಧ್ಯಮದವರು ರೋಚಕತೆಗೆ ಅದನ್ನು ಝೀರೋ ಟ್ರಾಫಿಕ್ ಎಂದು ಬಳಸಿದ್ದಾರೆ. ಇದು ಮಾಧ್ಯಮದವರ ತಪ್ಪು ಮಾಹಿತಿ. ರಾಜ್ಯಪಾಲರ ಬಗ್ಗೆ ತಪ್ಪು ಪ್ರಚಾರ ನೀಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆಯಿಂದ ಕೇವಲ ಭದ್ರತೆ, ರಕ್ಷಣೆ ಒದಗಿಸಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಡಿಜಿಪಿ ಯವರು ಎರಡು ಸಿಡಿಗಳನ್ನು ನೀಡಿದ್ದಾರೆ. ಅದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಅತೃಪ್ತ ಶಾಸಕರಿಗೆ ಕೇವಲ ರಕ್ಷಣೆ ಒದಗಿಸಲಾಗಿದೆ- ಸ್ಪೀಕರ್ ಸ್ಪಷ್ಟನೆ


ಸದನದಲ್ಲಿ ಮಾತು ಆರಂಭಿಸಿದ ಸಿಎಂ ಕುಮಾರಸ್ವಾಮಿ


-ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾದ ನಕಲಿ ರಾಜೀನಾಮೆ ಪತ್ರದ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರಸ್ತಾಪ


- ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವೈರಲ್ ಆಗಿರುವ ನಕಲಿ ರಾಜೀನಾಮೆ ಪತ್ರವನ್ನು ಸ್ಪೀಕರ್ ಗೆ ಸಲ್ಲಿಸಿದ ಸಿಎಂ. 


- ನನ್ನ ಸಹಿಯನ್ನು ಫೋರ್ಜರಿ ಮಾಡಿ ಪತ್ರ ಸಿದ್ಧಪಡಿಸಲಾಗಿದೆ. ನನ್ನ ರಾಜೀನಾಮೆ ಕೊಡಿಸಿ ಯಾರ್ಯಾರು ಸಿಎಂ ಆಗಲು ಆತುರದಿಂದಾದ್ದಾರೋ ಗೊತ್ತಿಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಸ್ಪೀಕರ್ ಬಳಿ ಸಿಎಂ ಮನವಿ


ವಿಶ್ವಾಸ ಮತಯಾಚನೆಗೆ ನಾವು ಸಿದ್ಧ, ಆದರೆ ಸ್ವಲ್ಪ ಸಮಯಾವಕಾಶ ಕೊಡಿ: ಸಿಎಂ ಕುಮಾರಸ್ವಾಮಿ


- ಸದನಕ್ಕೆ ಹಾಜರಾಗಬೇಕೆಂದು ನೀವು ಅತೃಪ್ತರಿಗೆ ನೋಟಿಸ್ ನೀಡಿದ್ದೀರಿ. ಆದರೆ ಅವರು ಅದಕ್ಕೆ ಗೌರವ ತೋರಿಸಿಲ್ಲ. ಈ ಹಿಂದೆಯೂ ಸಹ ಸರ್ಕಾರಕ್ಕೆ ಕೈ ಕೊಟ್ಟು ಹೋದ ಶಾಸಕರಾರೂ ಹಿಂದಿರುಗಿ ಬಂದ ಉದಾಹಣೆಗಳಿಲ್ಲ. ಒಂದು ಕಡೆ ಬಿಜೆಪಿಯವರು ನನ್ನ ಮೇಲೆ ಗೌರವ ಇದೆ ಎನ್ನುತ್ತಾರೆ. ಮತ್ತೊಂದೆಡೆ ಕೆಟ್ಟದಾಗಿ ಮಾತಾಡುತ್ತಾರೆ. ಒಂದು ವೇಳೆ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರದೇ ಇದ್ದಲ್ಲಿ ಇಷ್ಟು ದಿನ ಚರ್ಚೆ ಎಳೆಯುವ ಅಗತ್ಯವೇ ಇರಲಿಲ್ಲ. ನಾನು ವಿಶ್ವಾಸಮತ ಯಾಚನೆಗೆ ಸಿದ್ಧ. ಆದರೆ ಸಮಯಾವಕಾಶ ಕೊಡಿ ಎಂದು ಸ್ಪೀಕರ್ ಬಳಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ


ಕಲಾಪವನ್ನು ನಾಳೆಗೆ ಮುಂದೂಡಿ. ಅತೃಪ್ತ ಶಾಸಕರ ವಿಚಾರಣೆ ಬಳಿಕ ವಿಶ್ವಾಸಮತ ಯಾಚನೆ ಆಗಲಿ: ಡಿ.ಕೆ.ಶಿವಕುಮಾರ್ ಹೇಳಿಕೆ


- ನಾವು ಯಾವುದೇ ಕಾರಣಕ್ಕೂ ಮತ್ತೆ ಮುಂದೂಡುವುದಿಲ್ಲ. ನಾಳೆ ಮತ್ತಷ್ಟು ಜನ ಮಾತನಾಡಬೇಕಿದೆ. ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗಿದೆ. ಅವರೂ ಬರಲಿ, ವಿಚಾರಣೆ ನಡೆಯಲಿ. ಬಳಿಕ ವಿಶ್ವಾಸಮತಕ್ಕೆ ಹಾಕೋಣ- ಡಿಕೆಶಿ ಮನವಿ


ವಿಶ್ವಾಸಮತ ಯಾಚನೆ ಮುಂದೂಡಿಕೆ ಮನವಿಗೆ ಬಿಜೆಪಿ ಆಕ್ಷೇಪ


ಬಿಜೆಪಿ ಶಾಸಕ ಮಾಧುಸ್ವಾಮಿ ಅವರಿಂದ ಆಕ್ಷೇಪ.


ಆಡಳಿತ ಪಕ್ಷದ ಶಾಸಕರು ಯಾವುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ವಿಶ್ವಾಸಮತ ಯಾಚನೆ ಬಗ್ಗೆಯೋ, ಅಥ್ವಾ ಇನ್ಯಾವುದರ ಬಗ್ಗೆಯೋ ಅರಿಯುತ್ತಿಲ್ಲ. ಈಗಾಗಲೇ ಬಹಳಷ್ಟು ಶಾಸಕರು ಪ್ರಸ್ತಾಪಿಸಿರುವ ವಿಚಾರಗಳನ್ನೇ ಮತ್ತೆ ಮತ್ತೆ ಮಾತನಾಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹೇಳಿದ ಮಾತಿನಂತೆ ಇಂದೇ ವಿಶ್ವಾಸಮತ ಯಾಚನೆ ನಡೆಯಲಿ- ಬಿಜೆಪಿ ಶಾಸಕ ಸುರೇಶ ಕುಮಾರ್ ಒತ್ತಾಯ


ಬಿಜೆಪಿ ಶಾಸಕ ಮಾಧುಸ್ವಾಮಿ ಅವರಿಂದ ಆಕ್ಷೇಪ.


ಆಡಳಿತ ಪಕ್ಷದ ಶಾಸಕರು ಯಾವುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ವಿಶ್ವಾಸಮತ ಯಾಚನೆ ಬಗ್ಗೆಯೋ, ಅಥ್ವಾ ಇನ್ಯಾವುದರ ಬಗ್ಗೆಯೋ ಅರಿಯುತ್ತಿಲ್ಲ. ಈಗಾಗಲೇ ಬಹಳಷ್ಟು ಶಾಸಕರು ಪ್ರಸ್ತಾಪಿಸಿರುವ ವಿಚಾರಗಳನ್ನೇ ಮತ್ತೆ ಮತ್ತೆ ಮಾತನಾಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹೇಳಿದ ಮಾತಿನಂತೆ ಇಂದೇ ವಿಶ್ವಾಸಮತ ಯಾಚನೆ ನಡೆಯಲಿ- ಬಿಜೆಪಿ ಶಾಸಕ ಸುರೇಶ ಕುಮಾರ್ ಒತ್ತಾಯ


ಏನೇ ಆಗ್ಲಿ, ಇಂದೇ ವಿಶ್ವಾಸಮತ ಯಾಚನೆ ನಡೆಯಲಿ- ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ


- ರಾತ್ರಿ 1 ಗಂಟೆಯಾದರೂ ಸಮಸ್ಯೆಯಿಲ್ಲ. ಆಡಳಿತ ಪಕ್ಷದವರು ಮಾತನಾಡಲಿ. ನಾವು ತಾಳ್ಮೆಯಿಂದ ಕೇಳುತ್ತೇವೆ. ಇಲ್ಲೇ ಊಟದ ವ್ಯವಸ್ಥೆ ಮಾಡಿಸಿ. ಎಲ್ಲರೂ ಇಲ್ಲೇ ಊಟ ಮಾದುತ್ತೇವೆ. ಮತ್ತೆ ಕಲಾಪ ಮುಂದುವರೆಸಿ. ಏನೇ ಆಗ್ಲಿ ಇವತ್ತೇ ವಿಶ್ವಾಸಮತ ಫೈನಲ್ ಆಗಬೇಕು ಎಂದ ಬಿ.ಎಸ್.ಯಡಿಯೂರಪ್ಪ 


ಬಿ.ಎಸ್.ಯಡಿಯೂರಪ್ಪ ಒತ್ತಾಯಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ಆಕ್ಷೇಪ


- ನಮ್ಮಲ್ಲಿ ಹಲವರಿ ಡಯಾಬಿಟೀಸ್, ಬಿಪಿ ಇದೆ. ಹಾಗಾಗಿ ಅವರಿಗೆಲ್ಲ ಊಟಕ್ಕೆ ತಡವಾಗುತ್ತಿದೆ. ದಯವಿಟ್ಟು ಕಲಾಪವನ್ನುಮುಂದೂಡಿದರೆ ಒಳ್ಳೆಯದು- ಸ್ಪೀಕರ್ ಬಳಿ ಆಡಳಿತ ಸದಸ್ಯರಿಂದ ಮನವಿ


ಸದನದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್:


- ಜಿಂದಾಲ್ ಒಪ್ಪಂದದ ಬಗ್ಗೆ ಮಾಹಿತಿ ನೀಡಿ ಕೆ.ಜೆ.ಜಾರ್ಜ್


- ಬಿಜೆಪಿಯವರು ಅಧಿಕಾರಕ್ಕೆ ಬರಲು ಕಾಯುತ್ತಿದ್ದಾರೆ. ಆದರೆ ವಾಮ ಮಾರ್ಗ ಅನುಸರಿಸುವುದು ಬೇಡ ಎಂದ ಕೆ.ಜೆ.ಜಾರ್ಜ್


ಕಲಾಪವನ್ನು ನಾಳೆಗೆ ಮುಂದೂಡುವಂತೆ ಆಡಳಿತ ಪಕ್ಷದ ಸದಸ್ಯರಿಂದ ಒತ್ತಾಯ


- ನಾವೆಲ್ಲಾ ಡಯಾಬಿಟಿಸ್ ಇರುವವರು. ಊಟಕ್ಕೆ ಟೈಮ್ ಆಗಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಬರಲು ಹೇಳಿದರೂ ಸಹ ನಾವು ಬರಲು ಸಿದ್ಧ. ಆದರೆ ಕಲಾಪವನ್ನು ನಾಳೆ ಮುಂದೂಡಿ. ಮಹಿಳಾ ಸದಸ್ಯರೂ ಸಹ ಮನೆಗೆ ಹೋಗಬೇಕಿದೆ. ದಯವಿಟ್ಟು ಒಂದು ತಿರ್ಮಾನ ಕೈಗೊಳ್ಳಿ: ಸ್ಪೀಕರ್ ಬಳಿ ದಿನೇಶ್ ಗುಂಡೂರಾವ್ ಮನವಿ


 ನಾಳೆ ಬೆಳಿಗ್ಗೆಗೆ ಕಲಾಪ ಮುಂದೂಡುವಂತೆ ಆಡಳಿತ ಪಕ್ಷದ ಸದಸ್ಯರಿಂದ ಗದ್ದಲ


- ಎಲ್ಲರಿಗೂ ತಮ್ಮ ಸ್ಥಾನದಲ್ಲಿ ಕೂರುವಂತೆ ಸ್ಪೀಕರ್ ಸ್ಥಾನದಲ್ಲಿರುವ ಡೆಪ್ಯೂಟಿ ಸ್ಪೀಕರ್ ಸೂಚನೆ


- ಇವತ್ತಲ್ಲಾ ನಾಳೆ ವಿಶ್ವಾಸಮತ ಯಾಚನೆ ಆಗಲೇಬೇಕು. ಅದಕ್ಕೆ ಯಾಕಿಷ್ಟು ಆತುರ ಎನ್ನುತ್ತಿರುವ ಆಡಳಿತ ಪಕ್ಷದ ಶಾಸಕರು.


ಮಾತು ಆರಂಭಿಸಿದ ಸಚಿವ ಆರ್.ವಿ.ದೇಶಪಾಂಡೆ


ಸದನದ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕರ್ನಾಟಕದ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ಈ ಗೌರವ ನಮ್ಮ ಹಿರಿಯರು ತಂದುಕೊಟ್ಟಿದ್ದು. ಹಾಗಾಗಿ ವಿಶ್ವಾಸಮತ ಯಾಚನೆ ಎಂಬುದು ಒಂದು ನಂಬರ್ ಗೇಮ್. ಇದರಲ್ಲಿ ಒಬ್ಬರು ಗೆಲ್ಲಲೇಬೇಕು, ಮತ್ತೊಬ್ಬರು ಸೋಲಲೇ ಬೇಕು. ಹಾಗಾಗಿ ಇದನ್ನು ಮತ್ತಷ್ಟು ಎಳೆಯದೆ ಇಂದೇ ಪೂರ್ಣಗೊಳಿಸಬೇಕಿತ್ತು. ಆದರೆ ಅದು ಆಗುತ್ತಿಲ್ಲ. ಇದಕ್ಕೆ ಸ್ಪೀಕರ್ ಕೂಡ ಸಹಕರಿಸಬೇಕು- ಸ್ಪೀಕರ್ ಬಳಿ ಸಚಿವ ಆರ್.ವಿ.ದೇಶಪಾಂಡೆ ಮನವಿ


ಕಲಾಪ ಮುಂದೂಡುವುದೇ ಅಥವಾ ಮುಂದುವರೆಸುವುದೇ ಎಂಬುದರ ಬಗ್ಗೆ ತಿಳಿಸಲು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪಗೆ ಸ್ಪೀಕರ್ ಸೂಚನೆ


ಶುಕ್ರವಾರ ಹೇಳಿದ ಮಾತಿನಂತೆ, ನೀಡಿದ ಭರವಸೆಯಂತೆ ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಿ- ಬಿ.ಎಸ್.ಯಡಿಯೂರಪ್ಪ


ಕಲಾಪ ಮುಂದೂಡಿಕೆ ಒತ್ತಾಯದ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ 


- ಇದು ಸರ್ಕಾರದ ಅಳಿವು, ಉಳಿವಿನ ಪ್ರಶ್ನೆ. ಯಾವುದನ್ನೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. 


ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೆಗೌಡ ಭಾಷಣ


ಅತೃಪ್ತ ಶಾಸಕರಿಗೆ ಸ್ಪೀಕರ್ ರೂಲಿಂಗ್ ನೀಡಿದ್ದಾರೆ. ನಾಳೆ ಅವರ ವಿಚಾರಣೆ ಇದೆ. ಹೀಗಿರುವಾಗ ಅತೃಪ್ತ ಶಾಸಕರು ವಾಪಸ್ ಬರಲೂ ಅವಕಾಶ ನೀಡದೇ ವಿಶ್ವಾಸ ಮತ ಯಾಚನೆ ಮಾಡಿ ಅಂದರೆ ಅದು ಯಾವ್ ನ್ಯಾಯ? ಶಾಸಕರನ್ನು ಹಿಡ್ಕೊಂಡು ಹೋಗೋದು ಅಂದ್ರೆ ಕೋಳಿ ಪಿಳ್ಳೆಗಳನ್ನು ಹಿಡ್ಕೊಂಡು ಹೋದಂಗಾ? - ಸದನದಲ್ಲಿ ಶಾಸಕ ಶಿವಲಿಂಗೇ ಗೌಡ ಪ್ರಶ್ನೆ


ಹೆಚ್.ವಿಶ್ವನಾಥ್ ಅವರು ನಿರಾಶ್ರಿತರಾಗಿ ಬಿದ್ದಿದ್ದವರು. ಅವರನ್ನು ಕರೆದುಕೊಂಡು ಬಂದು ಶಾಸಕರಾಗಿ ಮಾಡಿದ್ರೆ ಈಗ ನಮಗೇ ಮೋಸ ಮಾಡ್ತಾರೆ- ಶಾಸಕ ಶಿವಲಿಂಗೇ ಗೌಡ 


ನನಗೆ ಮರ್ಯಾದೆ ಇದೆ: ಸ್ಪೀಕರ್


- ಸದನದಲ್ಲಿ ಕಲಾಪ ಮುಂದೂಡುವಂತೆ ಗದ್ದಲ


- ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿಲ್ಲ, ಸಿದ್ದರಾಮಯ್ಯ ಅವರು ಮಾತನಾಡುತ್ತಿಲ್ಲ, ಡಿಸಿಎಂ ಸದನದಲ್ಲೇ ಇದ್ರೂ ಏನೂ ಮಾತನಾಡಿಲ್ಲ. ಅಂದಿನಿಂದ ನಾಳೆ ನಾಳೆ ಎಂದು ಹೇಳುತ್ತಿದೀರಿ. ಸೋಮವಾರ ವಿಶ್ವಾಸಮತ ಯಾಚನೆ ಮಾದುವುದಾಗಿ ಹೇಳಿದ್ದೆ. ನನಗೆ ಮರ್ಯಾದೆ ಇದೆ. ಹೇಳಿದ ಮಾತಿಗೆ ತಪ್ಪಿ ನಡೆಯುವುದು ಸರಿಯಲ್ಲ. ನಿಮ್ಮ ನಿರ್ಧಾರಗಳನ್ನು, ಯೋಜನೆಗಳನ್ನು ಸ್ಪಷ್ಟವಾಗಿ ತಿಳಿಸಿ- ಸ್ಪೀಕರ್ ರಮೇಶ್ ಕುಮಾರ್


ಕಲಾಪ ಮುಂದೂಡಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ 


- ನಾಳೆ ಯಾರ್ಯಾರು ಮಾತನಾಡುತ್ತಾರೆ ಎಂಬುದನ್ನು ಪಟ್ಟಿ ಮಾಡೋಣ, ಸಮಯ ನಿಗದಿ ಮಾಡಿ. ನಾಳೆ ವಿಶ್ವಾಸಮತ ಯಾಚನೆ ಖಂಡಿತಾ ಪೂರ್ಣಗೊಳಿಸೋಣ. ನಾಳೆ ರಾತ್ರಿ 8 ಗಂಟೆಯ ಒಳಗೆ ಉತ್ತರ ಕೊಟ್ಟು, ಮತಕ್ಕೆ ಹಾಕಿ ಮುಗಿಸೋಣ- ಸಿದ್ದರಾಮಯ್ಯ ಹೇಳಿಕೆ


ನಾಳೆ ಸಂಜೆ 4 ಗಂಟೆಗೆ ಬೇಡ. ನಾಲ್ಕು ಗಂಟೆಯೊಳಗೆ ಚರ್ಚೆ ಪೂರ್ಣಗೊಳಿಸೋಣ. ಬಳಿಕ 6 ಗಂಟೆಯೊಳಗೆ ವಿಶ್ವಾಸಮತಕ್ಕೆ ಹಾಕಿ ಎಲ್ಲವನ್ನೂ ಪೂರ್ಣಗೋಳಿಸೋಣ - ಸ್ಪೀಕರ್ ಬಳಿ ಮನವಿ ಮಾಡಿದ ಸಿದ್ದರಾಮಯ್ಯ


ಸಿದ್ದರಾಮಯ್ಯ ಮಾತಿಗೆ ಸ್ಪಂದಿಸಿದ ಸ್ಪೀಕರ್


- ನಾಳೆ ಬೆಳಿಗ್ಗೆ 10 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್


- ಸಂಜೆ 4 ಗಂಟೆಯೊಳಗೆ ಎಲ್ಲರೂ ಮಾತನಾಡಿ ಚರ್ಚೆ ಪೂರ್ಣಗೊಳ್ಳಲೇ ಬೇಕು. ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಮಾಡಿ, ಎಣಿಕೆಯಾಗಿ ಎಲ್ಲವೂ ಮುಗಿಯಬೇಕು. ಅದಾದ ಬಳಿಕ ಒಂದು ನಿಮಿಷವೂ ನಾನು ಇಲ್ಲಿರುವುದಿಲ್ಲ: ಆಡಳಿತ ಪಕ್ಷದ ನಾಯಕರಿಗೆ ಸ್ಪೀಕರ್ ಖಡಕ್ ಸೂಚನೆ