close

News WrapGet Handpicked Stories from our editors directly to your mailbox

ಜೆಡಿಎಸ್ ಪಕ್ಷ ತೊರೆದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಜೆಡಿಎಸ್ ಪಕ್ಷದಿಂದ ನಾನಾಗಿಯೇ ಹೊರಬರಲಿಲ್ಲ. ನನ್ನನ್ನು ಉಚ್ಛಾಟನೆ ಮಾಡಿದರು ಎಂದು ಸೋಮವಾರ ಸದನದಲ್ಲಿ ಸಿದ್ದರಾಮಯ್ಯ ಹೇಳಿದರು.

Updated: Jul 23, 2019 , 12:42 AM IST
ಜೆಡಿಎಸ್ ಪಕ್ಷ ತೊರೆದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: ಜೆಡಿಎಸ್ ಪಕ್ಷವನ್ನು ನಾನಾಗಿಯೇ ತೊರೆಯಲಿಲ್ಲ. ನನ್ನನು ಪಕ್ಷದಿಂದ ಉಚ್ಛಾಟಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸದನದಲ್ಲಿ ಸ್ಪಷ್ಟನೆ ನೀಡಿದರು.

ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದ ವೀಡಿಯೋ ವೈರಲ್ ಆದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸಿ.ಟಿ.ರವಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದಿಂದ ನಾನಾಗಿಯೇ ಹೊರಬರಲಿಲ್ಲ. ನನ್ನನ್ನು ಉಚ್ಛಾಟನೆ ಮಾಡಿದರು. ಆಗ ನಾನು ಕಾಂಗ್ರೆಸ್ ಪಕ್ಷ ಸೇರದೆ ಅಹಿಂದ ಕಟ್ಟಿದೆ. ಅದಾದ ಒಂದು ವರ್ಷದ ಬಳಿಕ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂತು. ಆಗ ನಾನು ಕಾಂಗ್ರೆಸ್ ಸೇರಿದೆ ಎಂಬ ಸ್ಪಷ್ಟನೆ ನೀಡಿದರು.

ಇದೇ ವೇಳೆ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಯಾರೂ ಸಹ ಇತಿಹಾಸವನ್ನು ತಿರುಚುವ ಕಾರ್ಯಕ್ಕೆ ಕೈ ಹಾಕಬಾರದು, ಸದನದಲ್ಲಿ ತಪ್ಪು ಮಾಹಿತಿ ರೆಕಾರ್ಡ್ ಗೆ ಹೋಗಬಾರದು ಎಂದು ಹೇಳಿದರು.