ಶಾಸಕಾಂಗ ಪಕ್ಷದ ನಾಯಕರ ವಿಪ್ ನೀಡುವ ಜವಾಬ್ದಾರಿ ಮೊಟಕುಗೊಳಿಸುವುದಿಲ್ಲ: ಸ್ಪೀಕರ್ ರೂಲಿಂಗ್

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ರಿಯಾಲೋಪಕ್ಕೆ ರೂಲಿಂಗ್ ನೀಡಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್.  

Last Updated : Jul 22, 2019, 01:34 PM IST
ಶಾಸಕಾಂಗ ಪಕ್ಷದ ನಾಯಕರ ವಿಪ್ ನೀಡುವ ಜವಾಬ್ದಾರಿ ಮೊಟಕುಗೊಳಿಸುವುದಿಲ್ಲ: ಸ್ಪೀಕರ್ ರೂಲಿಂಗ್ title=

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ರಿಯಾಲೋಪಕ್ಕೆ ರೂಲಿಂಗ್ ನೀಡಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಶಾಸಕಾಂಗ ಪಕ್ಷದ ನಾಯಕರ ಅಧಿಕಾರವನ್ನು ನಾವು ಮೊಟಕುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'10ನೇ ಅನುಚ್ಛೇದದಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಿರುವ ಜಬಾಬ್ದಾರಿಯನ್ನು ಮೊಟಕು ಮಾಡುವ ಕೆಲಸ ನಾವು ಮಾಡುವುದಿಲ್ಲ' ಎಂದು ವಿಪ್ ವಿಷಯವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪ ಕುರಿತು ಸಭಾಪತಿ ಕೆ.ಆರ್. ರಮೇಶ್ ಕುಮಾರ್ ರೂಲಿಂಗ್ ನೀಡಿದರು.

ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಯಲ್ಲಿ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅತೃಪ್ತರು ಸದನಕ್ಕೆ ಹಾಜರಾಗಲು ಭಯವಿದ್ದರೆ ಅವರಿಗೆ ನಾನು ರಕ್ಷಣೆ ನೀಡುತ್ತೇನೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ವಿಪ್ ಕೊಡೋದು ಪಕ್ಷದ ನಾಯಕರ ವಿವೇಚನೆಗೆ ಬಿಟ್ಟಿದ್ದು. ವಿಪ್ ಗೌರವಿಸುವ ವಿಚಾರ ಅತೃಪ್ತರಿಗೆ ಬಿಟ್ಟ ವಿಚಾರ. ವಿಪ್ ಉಲ್ಲಂಘನೆಯಾದರೆ ಆ ಬಗ್ಗೆ ದೂರು ನೀಡಬಹುದು. ಆಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ. 
 

Trending News