ವಿಶ್ವಾಸ ಮತಕ್ಕೆ ಇನ್ನೆರಡು ದಿನಗಳ ಕಾಲಾವಕಾಶ ಕೋರಿದ ಸಿಎಂ ಕುಮಾರಸ್ವಾಮಿ?

ಕರ್ನಾಟಕದ ರಾಜಕೀಯ ಬಿಕ್ಕಟ್ಟು ಹಲವು ತಿರುವುಗಳನ್ನು ಪಡೆಯುತ್ತಿದ್ದು, ಈಗ ಬಂದಿರುವ ಮೂಲಕಗಳ ಪ್ರಕಾರ ಕರ್' ನಾಟಕ' ಇನ್ನು ಕೆಲವು ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Last Updated : Jul 22, 2019, 06:03 PM IST
ವಿಶ್ವಾಸ ಮತಕ್ಕೆ ಇನ್ನೆರಡು ದಿನಗಳ ಕಾಲಾವಕಾಶ ಕೋರಿದ ಸಿಎಂ ಕುಮಾರಸ್ವಾಮಿ?  title=
file photo

ಬೆಂಗಳೂರು: ಕರ್ನಾಟಕದ ರಾಜಕೀಯ ಬಿಕ್ಕಟ್ಟು ಹಲವು ತಿರುವುಗಳನ್ನು ಪಡೆಯುತ್ತಿದ್ದು, ಈಗ ಬಂದಿರುವ ಮೂಲಕಗಳ ಪ್ರಕಾರ ಕರ್' ನಾಟಕ' ಇನ್ನು ಕೆಲವು ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶ್ವಾಸಮತ ಸಾಬೀತುಪಡಿಸಲು ಸಿಎಂ ಕುಮಾರಸ್ವಾಮಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇನ್ನೆರಡುದಿನಗಳ ಕಾಲಾವಕಾಶವನ್ನು ಕೋರಿದ್ದಾರೆ ಎನ್ನಲಾಗಿದೆ.ಆದರೆ ಸ್ಪೀಕರ್ ಹಾಗೆ ಮಾಡಿದಲ್ಲಿ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಇದಕ್ಕೆ ಬಿಜೆಪಿ ಪ್ರತಿಭಟನೆ ನಡೆಸಿದರು ಪರವಾಗಿಲ್ಲ, ವಿಶ್ವಾಸ ಮತಕ್ಕೆ ಇನ್ನು ಎರಡು ದಿನಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.ಆದರೆ ಸ್ಪೀಕರ್ ರಮೇಶ್ ಕುಮಾರ್ ಮಾತ್ರ ಇಂದೇ ವಿಶ್ವಾಸ ಮತ ಸಾಬೀತು ಪಡಿಸಲು ಕೋರಿದ್ದಾರೆ ಎನ್ನಲಾಗಿದೆ.

ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ವಿಶ್ವಾಸಮತಕ್ಕೆ ಅವಕಾಶ ನೀಡಬೇಡಿ, ಇದಕ್ಕೆ ಬೇಕಾದರೆ ಇನ್ನು ಎರಡು ದಿನಗಳ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯದಲ್ಲಿಯೇ ಈಗ ಡಿಜಿಪಿ ವಿಧಾನಸಭೆಗೆ ಆಗಮಿಸಿ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
 

Trending News