ನಿಮ್ಮ ಜೀವನದಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆಯೇ? ಪಿತೃ ದೋಷದ ಲಕ್ಷಣಗಳು ಮತ್ತು ಪರಿಹಾರಗಳನ್ನು ತಿಳಿಯಿರಿ
ಜಾತಕದಲ್ಲಿ ಪಿತೃ ದೋಷವಿದ್ದರೆ ಅದರ ಲಕ್ಷಣಗಳು ಯಾವುವು ಮತ್ತು ಅವುಗಳನ್ನು ತೆಗೆದುಹಾಕಲು ಇರುವ ಪರಿಹಾರಗಳು ಯಾವುವು ನೋಡೋಣ..
ನವದೆಹಲಿ : ಪಿತೃ ದೋಷದ (Pitru dosha) ಕಾರಣ ಜೀವನವು ಅನೇಕ ಸಮಸ್ಯೆಗಳಿಂದ ಆವೃತವಾಗಿರುವುದರಿಂದ ಪಿತೃ ದೋಷವನ್ನು (Pitru dosha) ಧರ್ಮ ಮತ್ತು ಜ್ಯೋತಿಷ್ಯದಲ್ಲಿ (Astrology) ವಿವರವಾಗಿ ವಿವರಿಸಲಾಗಿದೆ. ಮಾಡುತ್ತಿರುವ ಕೆಲಸ ಹಾಳಾಗುತ್ತಿದ್ದಂತೆ, ಪ್ರಗತಿ ನಿಲ್ಲುತ್ತದೆ, ಮನೆಯಲ್ಲಿ ಯಾವಾಗಲೂ ಜಗಳಗಳು ನಡೆಯುತ್ತಿರುತ್ತವೆ. ಅದಕ್ಕಾಗಿಯೇ ಪಿತೃ ದೋಷವನ್ನು ಆದಷ್ಟು ಬೇಗ ತೊಡೆದುಹಾಕುವಂತೆ ಹೇಳಲಾಗುತ್ತದೆ. ಪಿತೃ ದೋಷವನ್ನು ತೊಡೆದುಹಾಕಲು ಪಿತೃ ಪಕ್ಷ ಉತ್ತಮ ಸಮಯವೆಂದು ಹೇಳಲಾಗುತ್ತದೆ.
ಜಾತಕದಲ್ಲಿ ಪಿತೃ ದೋಷವಿದ್ದರೆ (Pitru dosha), ಅದರ ಲಕ್ಷಣಗಳು ಯಾವುವು ಮತ್ತು ಅವುಗಳನ್ನು ತೆಗೆದುಹಾಕಲು ಇರುವ ಪರಿಹಾರಗಳು ಯಾವುವು ನೋಡೋಣ..
ಇದನ್ನೂ ಓದಿ : Snake Appearing In Dreams: ಪದೇ ಪದೇ ಕನಸಲ್ಲಿ ಹಾವು ಕಂಡ್ರೆ ಏನರ್ಥ?
ಪಿತೃ ದೋಷದ ಲಕ್ಷಣಗಳು :
- ಕೆಲಸ ಸ್ಥಗಿತಗೊಳ್ಳುವುದು
- ಕಠಿಣ ಪರಿಶ್ರಮದ ನಂತರವೂ ಪ್ರಗತಿ ಸಿಗುವುದಿಲ್ಲ
- ಯಾವಾಗಲೂ ಮನಸ್ಸು ಪ್ರಕ್ಷುಬ್ಧವಾಗಿರುತ್ತದೆ
- ಮನೆಯಲ್ಲಿ ಅನಗತ್ಯ ಕಾರಣಗಳಿಗಾಗಿ ಜಗಳಗಳು
- ಮನೆಯಲ್ಲಿ ದುಃಖ ಅಥವಾ ಋಣಾತ್ಮಕ ವಾತಾವರಣ
- ಅನಗತ್ಯ ವಿಷಯಗಳಿಗಾಗಿ ಮತ್ತೆ ಮತ್ತೆ ಹಣ ಖರ್ಚಾಗುವುದು
- ಯಾವುದೇ ಕಾರಣವಿಲ್ಲದೆ ಮದುವೆಯಲ್ಲಿ (Marriage)ತೊಂದರೆಗಳು ಎದುರಾಗುವುದು
- ಬೆಳವಣಿಗೆ ಕುಂಠಿತ
ಇದನ್ನೂ ಓದಿ : Nature By Zodiac Signs: ಇನ್ನೊಬ್ಬರ ಯಶಸ್ಸು, ಸಂತೋಷ ಕಂಡು ಹೊಟ್ಟೆ ಉರಿ ಪಡುತ್ತಾರೆಯಂತೆ ಈ ನಾಲ್ಕು ರಾಶಿಯವರು
ಪಿತೃ ದೋಷವನ್ನು ನಿವಾರಿಸಲು ಪರಿಹಾರಗಳು :
ಪಿತೃ ದೋಷದ ಪರಿಣಾಮವನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಪಿತೃ ಪಕ್ಷದ ಸಮಯದಲ್ಲಿ ಕೆಲವು ಪರಿಹಾರಗಳನ್ನು ಮಾಡಬಹುದು. ಈ ಪರಿಹಾರ ಕಾರ್ಯಗಳನ್ನು ಮಾಡಿದ ನಂತರ ಜೀವನದ ಕಷ್ಟಗಳು ದೂರವಾಗುತ್ತವೆ.
-ಪಿತೃ ಪಕ್ಷದ ಸಮಯದಲ್ಲಿ, ಆಲದ ಮರಗಳಿಗೆ ಪ್ರತಿದಿನ ನೀರು (Water), ಹೂವುಗಳು, ಕಪ್ಪು ಎಳ್ಳನ್ನು ಅರ್ಪಿಸಿ ಪೂಜೆ ಮಾಡಿ. ಅಲ್ಲದೆ, ನಿಮ್ಮಿಂದಾದ ತಪ್ಪಿಗೆ ಪಿತೃಗಳ ಕ್ಷಮೆ ಕೋರಿ.
-ಪಿತೃ ಪಕ್ಷದಲ್ಲಿ, ನಿಮ್ಮ ಕುಟುಂಬದ ಎಲ್ಲ ಸದಸ್ಯರಿಂದ ಕೆಲವು ನಾಣ್ಯಗಳನ್ನು (Coin)ತೆಗೆದುಕೊಂಡು ದೇವಸ್ಥಾನದಲ್ಲಿ ದಾನ ಮಾಡಿ.
- ಪ್ರತಿದಿನ ನಾಯಿ, ಹಸು, ಕಾಗೆ, ಪಕ್ಷಿಗಳು ಮತ್ತು ಇರುವೆಗಳಿಗೆ ಆಹಾರ ನೀಡಿ.
-ಶ್ರಾದ್ಧದ ದಿನ, ಪೂರ್ವಜರಿಗೆ ಪಂಚಬಲಿ ಭೋಗವನ್ನು ಅರ್ಪಿಸಿ. ಪಂಚಬಲಿ ಭೋಗ್ ಎಂದರೆ ಪೂರ್ವಜರಿಗಾಗಿ ತಯಾರಿಸಿದ ಆಹಾರವನ್ನು ದೇವರು, ಹಸು, ಕಾಗೆ, ನಾಯಿ ಮತ್ತು ಇರುವೆಗಳಿಗೆ ಭೋಗವಾಗಿ ಇಡಬೇಕು. ಪೂರ್ವಿಕರು ಕಾಗೆಗಳ ರೂಪದಲ್ಲಿ ಬರುತ್ತಾರೆ ಎಂದು ಹೇಳಲಾಗುತ್ತದೆ. ಪಿತೃ ಪಕ್ಷದಲ್ಲಿ (Pitru Paksha)ಕಾಗೆಗಳಿಗೆ ಆಹಾರ ನೀಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.
-ಶ್ರಾದ್ಧ ದಿನದಂದು ಬ್ರಾಹ್ಮಣರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿ. ದಾನ ಮಾಡಿ.
-ಪಿತೃ ಪಕ್ಷದ ಸಮಯದಲ್ಲಿ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಕರ್ಪೂರವನ್ನು ಬೆಲ್ಲ (Jaggery) ಮತ್ತು ತುಪ್ಪದ ಧೂಪದೊಂದಿಗೆ ಸುಡಬೇಕು. ಇದು ಪಿತೃ ದೋಷದಿಂದ ಪರಿಹಾರವನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.