ನವದೆಹಲಿ : ಜೀವನದಲ್ಲಿ ಕೆಲವೊಮ್ಮೆ ನಿಮಗೆ ಯಶಸ್ಸು (Success) ಸಿಗಬಹುದು. ಮತ್ತೆ ಕೆಲವೊಮ್ಮೆ ನಿಮ್ಮ ಕೆಲಸಗಳಲ್ಲಿ ಪ್ರಯತ್ನಗಳಲ್ಲಿ ವಿಫಲರಾಗಬಹುದು. ಇತರರ ಸಂತೋಷದಲ್ಲಿ ಸಂಭ್ರಮಿಸುವವರು ಕೆಲವರಾದರೆ, ಬೇರೆಯವರ ಏಳಿಗೆ ಕಂಡು ಅಸೂಯೆ ಪಡುವವರು ಇನ್ನೂ ಕೆಲವರು. ಜ್ಯೋತಿಷ್ಯದ (Astrology) ಪ್ರಕಾರ, 4 ರಾಶಿಚಕ್ರ ಚಿಹ್ನೆಗಳ (Zodiac Sign) ಜನರು, ಬೇರೆಯವರ ನೆಮ್ಮದಿ, ಯಶಸ್ಸು, ಸಂತೋಷ ಕಂಡು ಅಸೂಯೆಪಟ್ಟುಕೊಳ್ಳುತ್ತಾರೆಯಂತೆ.
ಈ ರಾಶಿಚಕ್ರ ಚಿಹ್ನೆಗಳು ಅಸೂಯೆಯ ಭಾವನೆಯನ್ನು ಹೊಂದಿವೆಯಂತೆ :
ಮೇಷ: ಮೇಷ ರಾಶಿಯ (Aries) ಜನರು ಬಹಳ ಮಹತ್ವಾಕಾಂಕ್ಷಿಗಳು. ಎಲ್ಲಾ ವಿಷಯಗಳಲ್ಲೂ ಮುಂದಿರಬೇಕು ಎಂದು ಬಯಸುತ್ತಾರೆ. ಏನೇ ಇರಲಿ, ಎಲ್ಲೇ ಇರಲಿ ಟಾಪ್ ಸ್ಥಾನದಲ್ಲಿ ನಾವೇ ಇರಬೇಕು ಎಂದುಕೊಳ್ಳುತ್ತಾರೆ. ಹೀಗಿರುವಾಗ ಯಾರಾದರೂ ಈ ರಾಶಿಯವರನ್ನು (Zodiac Sign) ಹಿಂದೆ ಹಾಕಿ, ಮುಂದೆ ಹೋದರೆ ಅವರು ಸಹಿಸುವುದಿಲ್ಲ.
ಇದನ್ನೂ ಓದಿ : Pitru Paksha 2021: ನೀವು ಪೂರ್ವಜರ ಸಂಪೂರ್ಣ ಆಶೀರ್ವಾದವನ್ನು ಬಯಸಿದರೆ, ಈ ಪ್ರಮುಖ ವಿಷಯಗಳ ಬಗ್ಗೆ ಇರಲಿ ಎಚ್ಚರ
ಕನ್ಯಾ (Virgo) : ಈ ರಾಶಿಚಕ್ರದ ಜನರಿಗೆ ಅಸೂಯೆ ಇರುವುದಿಲ್ಲ. ಆದರೆ ಯಾರಾದರೂ ಅವರನ್ನು ಹಿಂದಿಕ್ಕಿದಾಗ, ಮುಂದೆ ಹೋದರು ಎಂದಾದರೆ, ಅವರ ಬಗ್ಗೆ ಬಹಳ ಕೆಟ್ಟದಾಗಿ ಯೋಚಿಸುತ್ತಾರೆ.
ವೃಶ್ಚಿಕ: ವೃಶ್ಚಿಕ ರಾಶಿಯ (Scorpio) ಜನರು ಸಾಮಾನ್ಯವಾಗಿ ಇತರರ ಸಂತೋಷವನ್ನು ಇಷ್ಟಪಡುವುದಿಲ್ಲ. ಇತರರು ಸಂತೋಷವಾಗಿರುವುದನ್ನು ನೋಡುವುದು ಇಲ್ಲ. ಇತರರ ಸಂತೋಷದಿಂದ ಇರುವುದನ್ನು ನೋಡಿದರೆ ಅಸೂಯೆ ಪಟ್ಟುಕೊಳ್ಳುತ್ತಾರೆ.
ಇದನ್ನೂ ಓದಿ : Astrology: ತಾವೇ ಶ್ರೇಷ್ಠ ಅಂದುಕೊಳ್ಳುತ್ತಾರಂತೆ ಈ 4 ರಾಶಿಯವರು, ನಿಮ್ಮ ಸುತ್ತಲೂ ಇದ್ದಾರೆಯೇ ಇವರು?
ಕುಂಭ : ಕುಂಭ ರಾಶಿಯ (Aquarius) ಜನರು ಕೆಲವೊಮ್ಮೆ ಇತರರಿಂದ ಅಭದ್ರತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅವರು ಈ ರೀತಿ ಭಾವಿಸುವ ಜನರ ಬಗ್ಗೆ ಅಸೂಯೆ ಪಡುತ್ತಾರೆ. ಈ ರಾಶಿಯವರು ಯಾವಾಗಲೂ ತಮ್ಮನ್ನು ಇತರರಿಗೆ ಹೋಲಿಸುತ್ತಾರೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಡೀ ಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.