Palmistry:ಹಸ್ತದ ಗಾತ್ರ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ತೋರಿಸುತ್ತದೆ

Palmistry: ಹಸ್ತದ ಗಾತ್ರ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ತೋರಿಸುತ್ತದೆ.

Written by - Nitin Tabib | Last Updated : Sep 21, 2021, 12:46 PM IST

    ಅಂಗೈ ಆಕಾರದಿಂದ ಅರಿಯಿರಿ ನಿಮ್ಮ ಗುಣ-ಸಾಮರ್ಥ್ಯ.

    ಅಂಗೈಯಾ ಸಂರಚನೆ ಹೇಳುತ್ತೆ ನಿಮ್ಮ ಪರ್ಸನಾಲಿಟಿ ರಹಸ್ಯ.

    ಚೌಕಾಕಾರದ ಅಂಗೈ ಹೊಂದಿದವರಲ್ಲಿ ನಾಯಕತ್ವದ ಗುಣಗಳಿರುತ್ತವೆ.

Palmistry:ಹಸ್ತದ ಗಾತ್ರ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ತೋರಿಸುತ್ತದೆ title=
Hast Rekha Shastra (File Photo)

Palmistry: ಕೇವಲ ಅಂಗೈಯಲ್ಲಿನ ರೇಖೆಗಳು ಮತ್ತು ಅವುಗಳು ನಿರ್ಮಿಸಿರುವ ಆಕಾರಗಳು ಮಾತ್ರ ವ್ಯಕ್ತಿಯ ಭವಿಷ್ಯ ಮತ್ತು ನಡವಳಿಕೆ ಬಗ್ಗೆ ಹೇಳುವುದಿಲ್ಲ. ಬದಲಾಗಿ, ಕೈಯ ಆಕಾರ (Palm Size), ಅಂಗೈಯ ಉದ್ದ ಮತ್ತು ಅಗಲ ಕೂಡ ಬಹಳಷ್ಟು ಸಂಗತಿಗಳನ್ನು ಹೇಳುತ್ತವೆ. ಹಸ್ತ ರೇಖಾ ಶಾಸ್ತ್ರದ (Hast Rekha Shastra) ಹೊರತಾಗಿ, ಇದನ್ನು ವೇದ ಜ್ಯೋತಿಷ್ಯದಲ್ಲಿ ಕೂಡ  ಉಲ್ಲೇಖಿಸಲಾಗಿದೆ. ಕೈಯ ವಿನ್ಯಾಸವು ವ್ಯಕ್ತಿತ್ವದ (Know Your Personality)ಹಲವು ರಹಸ್ಯಗಳನ್ನು ಹೇಗೆ ಬಹಿರಂಗಪಡಿಸುತ್ತದೆ  ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಅಂಗೈಯ ಆಕಾರದಿಂದ ನಿಮ್ಮ ಪರ್ಸನ್ಯಾಲಿಟಿ ರಹಸ್ಯ ತಿಳಿದುಕೊಳ್ಳಿ (Hast Samudrik)
ಪೃಥ್ವಿ - ಅಂಗೈ ಚೌಕಾಕಾರದಲ್ಲಿದ್ದರೆ ಅದನ್ನು ಪೃಥ್ವಿ ಎಂದು ಕರೆಯಲಾಗುತ್ತದೆ. ಈ ಜಾತಕದ ವ್ಯಕ್ತಿಗಳು ಬಲಿಷ್ಠ ವ್ಯಕ್ತಿತ್ವ ಹೊಂದಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣಗಳಿರುತ್ತವೆ (Leadership Skills). ಈ ಜನರು ತಮ್ಮ ಮೆದುಳು ಚಲಾಯಿಸುವುದರ ಜೊತೆಗೆ ಶಾರೀರಿಕ ಕಷ್ಟಪಡುವುದರಲ್ಲಿಯೂ ಕೂಡ ಉತ್ತಮರಾಗಿರುತ್ತಾರೆ.

ಜಲ -ಆಯತಾಕಾರದ ಅಂಗೈ ಮತ್ತು ಉದ್ದನೆಯ ಬೆರಳುಗಳನ್ನು ಹೊಂದಿರುವ ವ್ಯಕ್ತಿಯ ಅಂಗೈ ಕೂಡ ಚಪ್ಪಟೆಯಾಗಿರುತ್ತದೆ, ಇದನ್ನು ಜಲ ಅಂಗೈ ಎಂದು ಕರೆಯಲಾಗುತ್ತದೆ. ಅಂತಹ ಜನರು ಭಾವನಾತ್ಮಕ ಮತ್ತು ಸೂಕ್ಷ್ಮ. ಅವರು ಭಾವನೆಗಳನ್ನು ನಿಭಾಯಿಸುವವರಾಗಿರುತ್ತಾರೆ.

ಇದನ್ನೂ ಓದಿ-Planets and their effects :ನಿಮ್ಮ ಭವಿಷ್ಯ, ಸ್ವಭಾವ, ವೃತ್ತಿಯನ್ನು ಯಾವ ಗ್ರಹವು ನಿರ್ಧರಿಸುತ್ತದೆ ಎಂದು ತಿಳಿಯಿರಿ

ವಾಯು - ಅಂಗೈ ಚೌಕಾಕಾರದಲ್ಲಿದ್ದು, ಉದ್ದನೆಯ ಬೆರಳುಗಳಿದ್ದರೆ ಅದಕ್ಕೆ ವಾಯು ಅಂಗೈ ಎಂದು ಕರೆಯಲಾಗುತ್ತದೆ. ಈ ಜನರು ಬೇಗನೆ ಒತ್ತಡಕ್ಕೆ ಸಿಲುಕುತ್ತಾರೆ. ಆದರೆ, ಈ ಜನರ ಬೌದ್ಧಿಕ ಕ್ಷಮತೆ ತುಂಬಾ ಚೆನ್ನಾಗಿರುತ್ತದೆ ಜೊತೆಗೆ ಇವರು ಸಂವಹನದ ವಿಷ್ಯದಲ್ಲಿ ಇವರು ತುಂಬಾ ಉತ್ತಮರಾಗಿರುತ್ತಾರೆ.

ಇದನ್ನೂ ಓದಿ-Pitru Paksha 2021: ನೀವು ಪೂರ್ವಜರ ಸಂಪೂರ್ಣ ಆಶೀರ್ವಾದವನ್ನು ಬಯಸಿದರೆ, ಈ ಪ್ರಮುಖ ವಿಷಯಗಳ ಬಗ್ಗೆ ಇರಲಿ ಎಚ್ಚರ

ಅಗ್ನಿ - ಆಯತಾಕರದ ಅಂಗೈ ಹಾಗೂ ಅಸಮಾನ ಬೆರಳುಗಳಿದ್ದರೆ ಅವರಲ್ಲಿ ಸಾಕಷ್ಟು ಉರ್ಜೆ ಇರುತ್ತದೆ. ಇವರಿಗೆ ಅಡ್ವೆಂಚರ್ ಅಂದರೆ ಇಷ್ಟ ಹಾಗೂ ಇವರು ತುಂಬಾ ವೃತ್ತಿಪರರಾಗಿರುತ್ತಾರೆ. ತಂಡವನ್ನು ಒಟ್ಟಿಗೆ ಕೊಂಡೊಯ್ಯುವ ಗುಣ ಇರುತ್ತದೆ. ಇವರು ತುಂಬಾ ಬೇಗನೆ ಕಲಿತುಕೊಳ್ಳುತ್ತಾರೆ ಮತ್ತು ಉತ್ತಮ ಪರ್ಫಾರ್ಮೆನ್ಸ್ ನೀಡುತ್ತಾರೆ.

ಇದನ್ನೂ ಓದಿ-Snoring Problem: ಮಲಗುವಾಗ ನೀವೂ ಗೊರಕೆ ಹೊಡೆಯುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯಿರಿ

(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News