Astro Tips For Money: ನಿಮಗೆ ಎಂದಾದರೂ ರಸ್ತೆಯಲ್ಲಿ ಹಣ ಸಿಕ್ಕಿದ್ಯಾ? ಕೆಲವೊಮ್ಮೆ ರಸ್ತೆಯಲ್ಲಿ ಹಣ ಸಿಕ್ಕಾಗ ಏನು ಮಾಡಬೇಕು ಎಂದು ಅರ್ಥವಾಗುವುದಿಲ್ಲ. ರಸ್ತೆಯಲ್ಲಿ ಹಣ ಸಿಕ್ಕರೆ ಏನು ಮಾಡಬೇಕು? ಅದನ್ನು ತೆಗೆದುಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಪ್ರತಿಯೊಬ್ಬರಲ್ಲೂ ಕೂಡ ವಿಭಿನ್ನ ಅಭಿಪ್ರಾಯಗಳಿವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ರಸ್ತೆಯಲ್ಲಿ ಹಣ ಸಿಗುವುದು ಶುಭ ಸಂಕೇತವಾಗಿದೆ. ಆದಾಗ್ಯೂ, ನೀವು ಆ ಹಣವನ್ನು ಯಾವ ರೀತಿ ವಿನಿಯೋಗಿಸುತ್ತೀರಿ ಎಂಬುದರ ಮೇಲೆ ಅದು ಶುಭವೋ ಅಥವಾ ಅಶುಭವೋ ಎಂಬುದು ಅವಲಂಬಿತವಾಗಿರುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾರಾದರೂ ಬೀದಿಯಲ್ಲಿ ಹಣವನ್ನು ನೋಡಿದರೆ, ಅದು ತುಂಬಾ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಜ್ಯೋತಿಷ್ಯದಲ್ಲಿ ಹಣವನ್ನು ಲಕ್ಷ್ಮಿ ದೇವಿಯ ಇನ್ನೊಂದು ರೂಪವೆಂದು ಪರಿಗಣಿಸಲಾಗುತ್ತದೆ. ರಸ್ತೆಯಲ್ಲಿ ಹಣ ಸಿಗುವುದೆಂದರೆ ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮೀಯ ಆಶೀರ್ವಾದ ನಿಮ್ಮ ಮೇಲಿದೆ ಎಂದು ಹೇಳಲಾಗುತ್ತದೆ. ಅವರ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಬಹಳ ಬೇಗ ನಿವಾರಣೆಯಾಗುತ್ತವೆ. ಒಂದೊಮ್ಮೆ ಆ ಹಣವನ್ನು ನಿರ್ಲಕ್ಷಿಸಿ ಮುಂದೆ ಸಾಗಿದರೆ ನಾವು ಲಕ್ಷ್ಮಿಗೆ ಮಾಡುವ ಅವಮಾನ, ಇದು ಮಾತೆ ಲಕ್ಷ್ಮಿಗೆ ಅಗೌರವ ತೋರಿದಂತೆ ಎನ್ನಲಾಗುವುದು.
ಇದನ್ನೂ ಓದಿ- Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ
ರಸ್ತೆಯಲ್ಲಿ ಸಿಕ್ಕ ಹಣವನ್ನು ಈ ರೀತಿ ಉಪಯೋಗಿಸಿದರೆ ತುಂಬಾ ಶುಭ:
ಪರ್ಸ್ ನಲ್ಲಿ ಹಣ ಸಿಕ್ಕರೆ:
ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ಹಣ ಇರುವ ಪರ್ಸ್ ಸಿಕ್ಕರೆ ನಿಮ್ಮ ಜೀವನದಲ್ಲಿ ಕಷ್ಟಗಳು ಕಳೆದು ಶೀಘ್ರದಲ್ಲೇ ಸಂಪತ್ತಿನ ಒಡೆಯರಾಗುತ್ತೀರಿ ಎಂದರ್ಥ. ಈ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದರಿಂದ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ರಸ್ತೆಯಲ್ಲಿ ಹಣ ಸಿಕ್ಕರೆ:
ರಸ್ತೆಯಲ್ಲಿ ಹಣ ಸಿಕ್ಕರೆ ಆ ಹಣವನ್ನು ನಿಮ್ಮ ಕೆಲಸಗಳಲ್ಲಿ ಬಳಸಿ. ಇದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುವುದು ಮಾತ್ರವಲ್ಲ, ನೀವು ಆರ್ಥಿಕ ಸಮಸ್ಯೆಗಳಿಂದಲೂ ಹೊರಬರುತ್ತೀರಿ ಎಂಬ ನಂಬಿಕೆ ಇದೆ.
ಇದನ್ನೂ ಓದಿ- Budh Asta 2023: ಬುಧನ ಅಸ್ತದಿಂದ ಈ 4 ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ನಷ್ಟ!
ಕಛೇರಿ ಅಥವಾ ಕೆಲಸದಿಂದ ಹಿಂದಿರುಗುವಾಗ ಹಣ ಸಿಕ್ಕರೆ:
ಕಛೇರಿ ಅಥವಾ ಕೆಲಸದಿಂದ ಹಿಂದಿರುಗುವಾಗ ಹಣ ಸಿಕ್ಕರೆ ಇದು ನಿಮ್ಮ ಖರ್ಚು ಹೆಚ್ಚಾಗಲಿದೆ ಎಂಬುದನ್ನೂ ಸೂಚಿಸುತ್ತದೆ. ಹಾಗಾಗಿ, ಇಂತಹ ಹಣವನ್ನು ಯಾವುದೇ ಕೆಲಸಕ್ಕೆ ಬಳಸದೆ ದೇವರ ಹುಂಡಿಗೆ ಹಾಕಿ.
ನೆನಪಿಡಿ: ನಿಮ್ಮ ಕಣ್ಣೆದುರಿಗೆ ಹಣ ಬೇರೆಯವರ ಪರ್ಸ್ ಅಥವಾ ಬ್ಯಾಗ್ ನಿಂದ ಕೆಳಗೆ ಬೀಳುವುದನ್ನು ಕಂಡರೆ, ತಪ್ಪದೇ ಹಣವನ್ನು ಅವರಿಗೆ ಹಿಂದಿರುಗಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.