ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್

ಉಲ್ಮನ್ ಪಟ್ಟಣವು ಕೇವಲ 120,000 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅವರ ಮನೆ ನಿಂತಿದ್ದ ಒಂದು ಸಣ್ಣ ಸ್ಮರಣಾರ್ಥ ಫಲಕವಿದೆ (ಇದು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಾಶವಾಗಿದೆ). ಐನ್‌ಸ್ಟೈನ್ ಜನನದ ಸ್ವಲ್ಪ ಸಮಯದ ನಂತರ ಕುಟುಂಬವು ಮ್ಯೂನಿಚ್‌ಗೆ ಸ್ಥಳಾಂತರಗೊಂಡಿತು ನಂತರ ಇಟಲಿಗೆ ಹೋದಾಗ ಅವರ ತಂದೆ ತನ್ನ ಸ್ವಂತ ವ್ಯವಹಾರವನ್ನು ನಡೆಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರು.

Edited by - Manjunath N | Last Updated : Nov 23, 2024, 05:36 PM IST
  • ಐನ್‌ಸ್ಟೈನ್ 1903 ರಲ್ಲಿ ಜುರಿಚ್‌ನಿಂದ ಮಿಲೇವಾ ಮಾರಿಕ್‌ರನ್ನು ಪ್ರೀತಿಸಿದರು.
  • ಇವರಿಗೆ ಹ್ಯಾನ್‌ ಅಲ್ಬರ್ಟ್ ಮತ್ತು ಎಡ್ವರ್ಡ್ 1904 ಮತ್ತು 1910 ರಲ್ಲಿ ಜನಿಸಿದರು.
  • ಐನ್‌ಸ್ಟೈನ್ 1919 ರಲ್ಲಿ ಮಾರಿಕ್‌ಗೆ ವಿಚ್ಛೇದನ ನೀಡಿ ಎಲ್ಲಾ ಲೊವೆಂಥಾಲ್ ಅವರನ್ನು ವಿವಾಹವಾದರು.
ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ title=

ಐನ್‌ಸ್ಟೈನ್ ಹೆಸರೇ ವಿಜ್ಞಾನ ಪ್ರಿಯರಿಗೆ ಕುತೂಹಲ ಹಾಗೂ ಮನದಲ್ಲಿ ವಿಜ್ಞಾನ ಭಾವನೆ ಮೂಡಲು ಪ್ರೇರೇಪಿಸುತ್ತದೆ. ಶಾಲೆಯ ನಾಲ್ಕು ಗೋಡೆಗಳ ನಡುವೆ ಶಿಕ್ಷಣ ಕಲಿಯದ ಬಾಲಕ ಹೊರ ಪ್ರಪಂಚದ ಅನುಭವದಿಂದಲೇ ವಿಜ್ಞಾನಿಯಾಗಿ ಬೆಳೆದು ವಿಜ್ಞಾನ ಲೋಕವೇ ಬೆರಗುಗೊಳಿಸುವಂತ ಸಾಧನೆ ಮಾಡಿದ ಮಹಾನ್ ವಿಜ್ಞಾನಿ ಮಂಡಿಸಿದ ವೈಜ್ಞಾನಿಕ ಅನ್ವೇಷಣೆಗಳು ಇಂದಿಗೂ ಮನುಕುಲಕ್ಕೆ ಮಹಾ ಉಪಯೋಗ ನೀಡುತ್ತಾ ಬಂದಿವೆ.

ಹೀಗಿತ್ತು ವಿಜ್ಞಾನಿಯ ಬಾಲ್ಯ :

1879 ರ ಮಾರ್ಚ್ 14 ರಂದು ಆಲ್ಬರ್ಟ್ ಐನ್‌ಸ್ಟೈನ್ ಜರ್ಮನ್ ಸಾಮ್ರಾಜ್ಯದ ಒಂದು ಭಾಗವಾದ ಉಲ್ಡ್‌ನಲ್ಲಿ ಜನಿಸಿದರು. ಅವರ ತಂದೆ ಹರ್ಮನ್ ಬನ್‌ಸ್ಟೈನ್ ಅವರು ಎಂಜಿನಿಯರ್ ಆಗಿದ್ದರು. ಅವರ ತಾಯಿ ಪಾಲಿನ್

ಐನ್‌ಸ್ಟೈನ್.

ಐನ್‌ಸ್ಟೈನ್‌ ತಂದೆ ಹರ್ಮನ್ ಎಲೆಕ್ಟೋಕೆಮಿಕಲ್ ಕಾರ್ಖಾನೆಯನ್ನು ನಡೆಸುತ್ತಿದ್ದರು ಮತ್ತು ಅವರ ತಾಯಿ ಪಾಲಿನ್ ಆಲ್ಬರ್ಟ್ ಮತ್ತು ಅವರ ತಂಗಿ ಮಾರಿಯಾಳನ್ನು ನೋಡಿಕೊಂಡಿದ್ದರು.

ಇದನ್ನೂ ಓದಿ-ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಯೆ..! ಇನ್ಸ್ಟಾಗ್ರಾಮ್‌ ಪೋಸ್ಟ್‌ ವೈರಲ್‌

ಐನ್‌ಸ್ಟೈನ್ ತನ್ನ ಕೆಲವು ಶಿಕ್ಷಕರ ಸರ್ವಾಧಿಕಾರಿಧೋರಣೆಯ ವಿರುದ್ಧ ದಂಗೆ ಎದ್ದು, 16 ನೇ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿದನು. ನಂತರ ಅವನು ಜುರಿಚನ ಸ್ವಿಸ್ ಫೆಡರಲ್ ಪಾಲಿಟೆಕ್ನಿಕ್ ಶಾಲೆಗೆ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡನು. ಭೌತಶಾಸ್ತ್ರ ಮತ್ತು ಗಣಿತದಲ್ಲಿ ಅವನ ಪ್ರದರ್ಶನಗಳು ಅತ್ಯುತ್ತಮವಾಗಿದ್ದರೂ, ಅವನ ಅಂಕಗಳು ಇತರ ಪ್ರದೇಶಗಳು ಸಬ್ ಪಾರ್ ಆಗಿದ್ದವು ಮತ್ತು ಅವನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ.

ಬಾಲ್ಯದಲ್ಲೇ ಆವಿಷ್ಕಾರ :

ಆಲ್ಬರ್ಟ್ ಐನ್‌ಸ್ಟೈನ್ ವಿದ್ವಾಂಸ ಹ್ಯಾನ್ಸ್-ಜೋಸೆಫ್ ಕೊಪ್ಪರ್ ಅವರ ಪ್ರಕಾರ, ಐನ್‌ಸ್ಟೈನ್ ತನ್ನ ಆತ್ಮಚರಿತ್ರೆಯಲ್ಲಿ ಎರಡು "ಅದ್ಭುತಗಳು" ತನ್ನ ಆರಂಭಿಕ ವರ್ಷಗಳನ್ನು ಬಹಳವಾಗಿ ಪ್ರಭಾವಿಸಿದವು.

ಯುವ ಐನ್‌ಸ್ಟೈನ್ ತನ್ನ ಮೊದಲ ಅದ್ಭುತವನ್ನು ದಿಕ್ಕೂಚಿ, 5 ನೇ ವಯಸ್ಸಿನಲ್ಲಿ ಗ್ರಹಿಸಿದನು. ಅದೃಶ್ಯ ಶಕ್ತಿಗಳು ಸೂಜಿಯನ್ನು ತಿರುಗಿಸಬಲ್ಲವು ಎಂದು ಅವನಿಗೆ ಅತೀಂದ್ರಿಯವಾಯಿತು. ಇದು ಕಾಣದ ಶಕ್ತಿಗಳ ಮೇಲೆ ಆಜೀವ ಮೋಹಕ್ಕೆ ಕಾರಣವಾಗುತ್ತದೆ. ಎರಡನೆಯ ಆಶ್ಚರ್ಯವು 12 ನೇ ವಯಸ್ಸಿನಲ್ಲಿ ಜ್ಯಾಮಿತಿಯ ಪುಸ್ತಕವನ್ನು ಕಂಡುಹಿಡಿದನು. ಅದನ್ನು ಅವನು ಪೂಜಿಸಿದನು, ಅದನ್ನು ಅವನ "ಪವಿತ್ರಜ್ಯಾಮಿತಿ ಪುಸ್ತಕ" ಎಂದು ಕರೆದನು.

ಐನ್‌ಸ್ಟೈನ್ನ ಮಹಾನ್ವೇಷಣೆಗಳು :

ಐನ್‌ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ 'ಬೋಸ್- ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್' ಸೇರಿದಂತೆ 'ಐನ್‌ಸ್ಟೈನ್ ರೆಫ್ರಿಜರೇಟರ್', 'ಐನ್‌ಸ್ಟೈನ್-ಕಾರ್ಟನ್ ಸಿದ್ಧಾಂತ', 'ಐನ್‌ಸ್ಟೈನ್ - ಇನ್ನೆಲ್-ಹಾಪ್ಟನ್ ಇಕೇಷನ್ಸ್', 'ಐನ್‌ಸ್ಟೈನ್ -ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್' ಇವುಗಳಲ್ಲಿ ಪ್ರಮುಖವಾದವು. ಇರ್ವಿನ್ ಪ್ರೋಡಿಂಗರ್'ಗೆ ಸಂಶೋಧನೆಗೆ ಸೂಚಿಸಿದ್ದು ಐನ್‌ಸ್ಟೈನ್ ಹಿರಿಮೆಗಳಲ್ಲೊಂದು.

ನೊಬೆಲ್ ಸಮಿತಿಗೂ ಅರ್ಥವಾಗಿರಲಿಲ್ಲ :

ತಮ್ಮ ಅದ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೈನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೊಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಏಕೆಂದರೆ ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ. ಇದರ ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ 'ಫೋಟೋ ಎಲೆಕ್ಟಿಕ್ ಎಫೆಕ್ಟ್‌'ಗೆ ಅದೂ 16 ವರ್ಷ ಬಿಟ್ಟು 1921ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ವಿಚಿತ್ರ ಎಂದರೆ ಅವರ ಕೆಲವು ಥಿಯರಿಗಳು ಸಾಕ್ಷ್ಯವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದ ಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ.

ನಾಲಿಗೆ ಪೋಸು ಫೇಮಸ್ಸು :

ಐನ್‌ಸ್ಟೈನ್ ಅವರ ಜನಪ್ರಿಯ ಚಿತ್ರವೆಂದರೆ ಅವರು ತಮ್ಮ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದ್ದು, ಐನ್‌ಸ್ಟೈನ್ ಚಿಕ್ಕ ಹುಡುಗನಂತೆ ವರ್ತಿಸಿದ್ದ ಈ ಚಿತ್ರ ತೆಗೆದಿದ್ದು ಐನ್‌ಸ್ಟೈನ್ 72ನೇ ಹುಟ್ಟುಹಬ್ಬದಂದು. ಐನ್‌ಸ್ಟೈನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಟನ್ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೋಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು. ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೋ ತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೈನ್ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದರು.

ಸಾಕ್ಸ್ ಹಾಕಲೇ ಇಲ್ಲ :

ಐನ್‌ಸ್ಟೈನ್ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್ ಆಗಿತ್ತು. ಆದರೆ ಅವರ ಕೆದರಿದ ಕೂದಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂ ಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ.. ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್‌ಸ್ಟೈನ್ ಅವರಿಗೆ ಸಾಕ್ಸ್ ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತು.

ಸಂಗೀತ ಪ್ರಿಯ :

ಐನ್‌ಸ್ಟೈನ್ ಅವರ ತಾಯಿ ಪೈಂಟಿಸ್ಟ್, ಆಕೆ ತನ್ನ ಮಗ ಮ್ಯೂಸಿಕ್‌ನ್ನು ಇಷ್ಟಪಡಬೇಕು ಮತ್ತು ಕಲಿಯಬೇಕು ಎಂದು ಬಯಸಿದ್ದರು. ಅಲ್ಬರ್ಟ್ ಐನ್‌ಸ್ಟೈನ್ ಚಿಕ್ಕವರಿದ್ದಾಗ ವಾಯಲಿನ್ ಕಲಿಯುವುದನ್ನು ಇಷ್ಟಪಡಲೇ ಇಲ್ಲ. ಆದರೆ ಟೀನೇಜ್‌ಗೆ ಕಾಲಿಟ್ಟ ಮೇಲೆ ಅವರು ವಯಲಿನ್ ಕಲಿತದ್ದು ಮಾತ್ರವಲ್ಲ ಹಾಡುವುದೂ ಕೂಡ ತಿಳಿದಿತ್ತು. ಮ್ಯೂಸಿಕ್ ಅನ್ನು ಬಹಳವಾಗಿ ಇಷ್ಟಪಟ್ಟರು. ಐನ್‌ಸ್ಟೈನ್ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ, ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ ಸಂಗೀತಗಾರನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೈನ್ ಹೇಳಿಕೊಂಡಿದ್ದರು.

ನೌಕಾಯಾನ :

ನೌಕಾಯಾನ ಅಂದರೆ ಐನ್‌ಸ್ಟೈನ್ ಅವರಿಗೆ ಇಷ್ಟವಾಗುತ್ತಿತ್ತು. ಹಾಗಂತ ಅವರು ಅಷ್ಟೇನು ಉತ್ತಮ ನಾವಿಕರಾಗಿರಲಿಲ್ಲ. ದೋಣಿ ಹಾಳಾದರೆ ಅಕ್ಕಪಕ್ಕದವರು ಅದನ್ನು ಸರಿಪಡಿಸಿಕೊಡಬೇಕಿತ್ತು. ಅಷ್ಟೇ ಅಲ್ಲ ಅವರು ತಮ್ಮ ಜೀವನದುದ್ದಕ್ಕೂ ಈಜುವುದನ್ನು ಕಲಿಯಲೇ ಇಲ್ಲವಂತೆ. ಹಾಗಂತ ಅವರು ನೌಕಾಯಾನ ಕೈಗೊಳ್ಳುವುದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ.

ರೆಫ್ರಿಜರೇಟರ್ ಸಂಶೋಧನೆ :

ಐನ್‌ಸ್ಟೈನ್ ಅವರು ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್ ಅನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರ ಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಫ್ರಿಜರೇಟರ್ ಅನ್ನು ಪೇಟೆಂಟ್ ಪಡೆಯಲಾಯಿತು ಮತ್ತು ಕೂಡಲೇ ಅದರ ಅಪ್‌ಡೇಟ್ ಆಗಿರುವ ವರ್ಷನ್ ಕೂಡ ಬಂತು.

ಅಧ್ಯಕ್ಷರಾಗುವ ಆಫರ್ ಬಿಟ್ಟಿದ್ದರು :

ಇಸ್ರೇಲ್‌ನ ಮೊದಲ ಅಧ್ಯಕ್ಷ ಚೈಮ್ ವಿಜ್ಜನ್ ಅವರು 1952. ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೇಲ್‌ ಎರಡನೇ ಅಧ್ಯಕ್ಷರಾಗುವಂತೆ ಆಲ್ಬರ್ಟ್ ಐನ್‌ಸ್ಟೈನ್ ಅವರಿಗೆ ಆಫರ್ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್‌ಸ್ಟೈನ್ ನಾಜೂಕಿನಿಂದಲೇ ಅವರಿಗೆ ಬಂದ ಆಫರ್‌ನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವನ್ನು ಕೇಳಿದಾಗ ಅವರು "ನೈಸರ್ಗಿಕ ಯೋಗ್ಯತೆಯ ಕೊರತೆ ಮತ್ತು ಜನರನ್ನು ಸರಿಯಾಗಿ ನಿಭಾಯಿಸುವ ತಾಕತ್ತು ಇಲ್ಲದೇ ಇರುವುದು' ಎಂದು ತಿಳಿಸಿದ್ದರು. ಅಂದರೆ ನನಗೆ ವಯಸ್ಸಾಗಿದೆ ನಾನು ಅಧ್ಯಕ್ಷನಾಗುವುದು ಸೂಕ್ತವಲ್ಲ ಎಂದು ಹೇಳಿದ್ದರು.

ಹೆಜ್ಜೆಗುರುತುಗಳು :

1896 ರಲ್ಲಿ ಸ್ವಿಸ್ ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆದರು ಮತ್ತು 1901 ರಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಕಲಿಯಲು ಡಿಪ್ಲೊಮಾವನ್ನು ಪಡೆದರು. ಆದಾಗ್ಯೂ, ಐನ್‌ಸ್ಟೈನ್‌ಗೆ ಬೋಧನಾ ಸ್ಥಾನ ಸಿಗಲಿಲ್ಲ ಮತ್ತು ಅವರ ನೊಬೆಲ್ ಪ್ರಶಸ್ತಿ ಜೀವನಚರಿತ್ರೆಯ ಪ್ರಕಾರ 1901 ರಲ್ಲಿ ಬರ್ನ್ ಪೇಟೆಂಟ್ ಕಚೇರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಪೇಟೆಂಟ್ ಅರ್ಜಿಗಳನ್ನು ವಿಶ್ಲೇಷಿಸುವ ನಡುವೆ, ಅವರು ವಿಶೇಷ ಸಾಪೇಕ್ಷತೆ ಮತ್ತು ಭೌತಶಾಸ್ತ್ರದ ಇತರ ಕ್ಷೇತ್ರಗಳಲ್ಲಿ ತಮ್ಮ ಕೆಲಸವನ್ನು ಅಭಿವೃದ್ಧಿಪಡಿಸಿದರು. ಅದು ನಂತರ ಅವರನ್ನು ಪ್ರಸಿದ್ದಿಯನ್ನಾಗಿ ಮಾಡಿತು.

ಐನ್‌ಸ್ಟೈನ್ 1903 ರಲ್ಲಿ ಜುರಿಚ್‌ನಿಂದ ಮಿಲೇವಾ ಮಾರಿಕ್‌ರನ್ನು ಪ್ರೀತಿಸಿದರು. ಇವರಿಗೆ ಹ್ಯಾನ್‌ ಅಲ್ಬರ್ಟ್ ಮತ್ತು ಎಡ್ವರ್ಡ್ 1904 ಮತ್ತು 1910 ರಲ್ಲಿ ಜನಿಸಿದರು. ಐನ್‌ಸ್ಟೈನ್ 1919 ರಲ್ಲಿ ಮಾರಿಕ್‌ಗೆ ವಿಚ್ಛೇದನ ನೀಡಿ ಎಲ್ಲಾ ಲೊವೆಂಥಾಲ್ ಅವರನ್ನು ವಿವಾಹವಾದರು. 1955 ರಲ್ಲಿ ಇಹಲೋಕ ಯಾತ್ರೆ ಮುಗಿಸಿದರು.

ಬ್ರಿಲಿಎಂಟ್ ಟ್ರೈನ್ :

ಐನ್‌ಸ್ಟೈನ್ ಅವರ ಹೆಸರನ್ನೇ ತೆಗೆದುಕೊಳ್ಳಿ. ಇಂಗ್ಲೀಷ್‌ನಲ್ಲಿ ಅವರ ಹೆಸರಿನ "Albert Einstein" ನಲ್ಲಿರುವ ಅಕ್ಷರಗಳನ್ನು ಆಚೀಚೆ ಮಾಡಿ ಪುನಃ ಜೋಡಿಸಿದರೆ "Ten elite brains' ಎಂದು ಕೂಡ ಮಾಡಬಹುದು. ಇದರರ್ಥ 10 ಶ್ರೇಷ್ಠ ಮೆದುಳುಗಳು ಎಂದಾಗುತ್ತದೆ. ಇದಷ್ಟು ಸಮಂಜಸವಾಗಿಲ್ಲವೇ ಐನ್‌ಸ್ಟೈನ್ ಅವರಿಗೆ ನೀವೇ ಹೇಳಿ!

-ಡಾ. ಡಿ.ಸಿ. ರಾಮಚಂದ್ರ

ಶ್ರೀ ಕ್ಷೇತ್ರ ಆದಿಚುಂಚನಗಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News