ಸುಮಾರು ನಾಲ್ಕು ಶತಕೋಟಿ ವರ್ಷಗಳ ಹಿಂದೆ ಮಂಗಳನ ಭೂಮಧ್ಯ ರೇಖೆಯ ಬಳಿ ತೀವ್ರ ಪ್ರವಾಹ ಉಂಟಾಗಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ ಮತ್ತು ಈ ಸಂಶೋಧನೆಯು ಮಂಗಳ ಗ್ರಹದ ಮೇಲೆ ಜೀವನ ಸಾಧ್ಯ ಎಂಬುದನ್ನು ಸೂಚಿಸುತ್ತಿವೆ.
ನವದೆಹಲಿ: ಮಂಗಳ ಗ್ರಹದ ಭೂಮಧ್ಯ ರೇಖೆಯ ಮೇಲೆ ಸುಮಾರು ನಾಲ್ಕು ಶತಕೋಟಿ ವರ್ಷಗಳ ಹಿಂದೆ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಇತ್ತೀಚಿಗೆ ನಡೆಸಲಾಗಿರುವ ನೂತನ ಅಧ್ಯಯನವೊಂದು ಇದನ್ನು ಬಹಿರಂಗಗೊಳಿಸಿದೆ. ಅಷ್ಟೇ ಅಲ್ಲ ಇದರಿಂದ ಮಂಗಳನ ಅಂಗಳದಲ್ಲಿ ಮಾನವ ಜೀವನ ನಡೆಸಬಹುದು ಎಂಬ ಸಂಕೇತ ಸಿಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 'ಸೈಂಟಿಫಿಕ್ ರಿಪೋರ್ಟ್ಸ್' ಹೆಸರಿನ ಜರ್ನಲ್ ನಲ್ಲಿ ಪ್ರಕಟಗೊಂಡ ಈ ಅಧ್ಯಯನದಲ್ಲಿ NASAದ ಕ್ಯೂರಿಯಾಸಿಟಿ ರೋವರ್ ರವಾನಿಸಿರುವ ಹೊಸ ಅಂಕಿ-ಅಂಶಗಳ ಅಧ್ಯಯನ ನಡೆಸಿ ವಿಜ್ಞಾನಿಗಳು ಈ ಪ್ರವಾಹದ ಕುರಿತು ಪತ್ತೆಹಚ್ಚಿದ್ದಾರೆ.
ಇದನ್ನು ಓದಿ- Alert: ಭೂಮಿಯೆಡೆಗೆ ವೇಗವಾಗಿ ಧಾವಿಸುತ್ತಿದೆ ಬೋಯಿಂಗ್-737 ನಷ್ಟು ದೊಡ್ಡ ಗಾತ್ರದ ಅಸ್ಟ್ರಾಯಿಡ್
ರೋವರ್ ಅನ್ನು ನಾಸಾ 2011 ರ ನವೆಂಬರ್ನಲ್ಲಿ ಉಡಾವಣೆ ಮಾಡಿತ್ತು ಮತ್ತು ಸಂಶೋಧನೆಯ ವೇಳೆ ಉಲ್ಕಾಶಿಲೆ ಪ್ರಭಾವದಿಂದ ಮಂಗಳನ ಮಂಜು ಕರಗಿ ಅಲ್ಲಿ ಭೀಕರ ಪ್ರವಾಹ ಉಂಟಾಗಿದೆ ಎಂದು ತಿಳಿದುಬಂದಿದೆ.
ಜಾಕ್ಸನ್ ಸ್ಟೇಟ್ ಯೂನಿವರ್ಸಿಟಿ, ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಹವಾಯಿ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಅಂಶಗಳು ಇದೀಗ ಬೆಳಕಿಗೆ ಬಂದಿವೆ. ಅವುಗಳ ಪ್ರಕಾರ, ಪ್ರಾಚೀನ ಉಲ್ಕಾ ಶಿಲೆಯ ಅಧ್ಯಯನದ ವೇಳೆ ಸುಮಾರು 4 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರು ನಿರ್ಮಾಣಗೊಂಡಿತ್ತು ಎಂಬುದು ತಿಳಿದುಬಂದಿದೆ.
ಕ್ಯೂರಿಯಾಸಿಟಿ ರೋವರ್ ನಿಂದ ಸಿಕ್ಕ ದತ್ತಾಂಶಗಳನ್ನು ಪರಿಶೀಲಿಸಿದ ವಿಜ್ಞಾನಿಗಳು ಗ್ರಹದ ಗೆಲ್ ಕ್ರೆಟರ್ ಕುಲಿಯಲ್ಲಿ ಈ ಭೀಕರ ಪ್ರವಾಹದ ನೀರಿನ ಆಳ 78 ಅಡಿಗಲಿಷ್ಟು. ಆದರೆ, ಅಲೆಗಳು ಮೇಲೆದ್ದ ಬಳಿಕ ಇದು ತುಂಬಾ ಭೀಕರ ರೂಪ ತಳೆದಿತ್ತು ಪ್ರತಿ ಸೆಕೆಂಡ್ ಗೆ 32 ಅಡಿ ಎತ್ತರದ ಅಲೆಗಳು ಮೇಲೆಳುತ್ತಿದ್ದವು.
400 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಂಜು ಇತ್ತು ಮತ್ತು ಮಂಜುಗಡ್ಡೆಗೆ ಭಾರಿ ಗಾತ್ರದ ಉಲ್ಕಾಶಿಲೆ ಬಂದು ಅಪ್ಪಳಿಸಿರಬಹುದು. ಈ ಡಿಕ್ಕಿಯಿಂದ ಉಂಟಾದ ಊರ್ಜೆ ಹಾಗೂ ತಾಪಮಾನದಿಂದ ಮಂಜು ಕರಗಿ ಈ ಭೀಕರ ಪ್ರವಾಹ ಸೃಷ್ಟಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸಂಶೋಧನೆಯ ಸಹ ಲೇಖಕ ಕಾರ್ನೆಲ್ ವಿಶ್ವವಿದ್ಯಾಲಯದ ಆಲ್ಬರ್ಟೊ ಜಿ. ಫಿಯರ್ನ್, 'ಕ್ಯೂರಿಯಾಸಿಟಿ ರೋವರ್ನ ಡೇಟಾವನ್ನು ಬಳಸಿಕೊಂಡು ನಾವು ಮಂಗಳ ಗ್ರಹದಲ್ಲಿ ಪ್ರವಾಹವನ್ನು ಗುರುತಿಸಿದ್ದೇವೆ. ಮಾಹಿತಿಯ ಪ್ರಕಾರ, ಮಂಗಳ ಗ್ರಹದಲ್ಲಿ ಗಾಳಿ ಮತ್ತು ನೀರಿನೊಂದಿಗೆ ಬೆರೆತ ಈ ಭೌಗೋಳಿಕ ಲಕ್ಷಣಗಳು ಸುಮಾರು ನಾಲ್ಕು ಶತಕೋಟಿ ವರ್ಷಗಳಿಂದ ಸಂಗ್ರಹವಾಗಿವೆ ಎಂದಿದ್ದಾರೆ.