Good News: Rental Policy - ಬಾಡಿಗೆದಾರರಿಗೆ ಭಾರಿ ನೆಮ್ಮದಿ, ನಿಯಮ ಬದಲಾಯಿಸಿದ ಸರ್ಕಾರ

Rental Policy - ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ Tenant Lawಗೆ ಅನುಮೋದನೆ ನೀಡಿದೆ. 

Rental Policy - ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ Tenant Lawಗೆ ಅನುಮೋದನೆ ನೀಡಿದೆ. ಈ ಕಾನೂನಿನ ಅಡಿ ಮನೆ ಮಾಲೀಕರು ತಮ್ಮ ಮನಸ್ಸಿಗೆ ತೋಚಿದಂತೆ ಮನೆ ಬಾಡಿಗೆ ಹೆಚ್ಚಿಸುವಂತಿಲ್ಲ. ಹೀಗಾಗಿ ಬಾಡಿಗೆದಾರರ ಪಾಲಿಗೆ ಇದು ಭಾರಿ ನೆಮ್ಮದಿಯ ಸುದ್ದಿ ಎಂದೇ ಹೇಳಲಾಗುತ್ತಿದೆ. ಈ ನೂತನ ಕಾನೂನಿನಿಂದ ಬಾಡಿಗೆದಾರರು ಹಾಗೂ ಮಾಲೀಕರ ನಡುವಿನ ವಿವಾದಗಳೂ ಕೂಡ ಕಡಿಮೆಯಾಗಲಿವೆ. ಇಂತಹುದರಲ್ಲಿ ಜನರ ವ್ಯರ್ಥ ಸಂಕಷ್ಟಗಳು ಕೂಡ ಬಗೆಹರಿಯಲಿವೆ.

 

ಇದನ್ನು ಓದಿ-  PG Doctors: ಸರ್ಕಾರಿ ಆಸ್ಪತ್ರೆಗಳಲ್ಲಿ 10 ವರ್ಷ ಸೇವೆ ಮಾಡಿ, ಇಲ್ಲದಿದ್ದರೆ 1 ಕೋಟಿ ದಂಡ ಪಾವತಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಆಗುತ್ತಿರುವ ವಿವಾದಗಳನ್ನು ಕಡಿಮೆ ಮಾಡಲು ಉತ್ತರ ಪ್ರದೇಶ ಉತ್ತರ ಪ್ರದೇಶ ನಗರ ಹಿಡುವಳಿ ನಿಯಂತ್ರಣ ಸುಗ್ರೀವಾಜ್ಞೆ -2021 ಕ್ಕೆ ಅನುಮೋದನೆ ನೀಡಿದೆ. ಬೈ ಸರ್ಕ್ಯೂಲೇಶನ್ ಮೂಲಕ ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿದೆ.

2 /3

ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರದ ವಕ್ತಾರರೊಬ್ಬರು, " ಈ ಸುಗ್ರೀವಾಜ್ಞೆಯ ಪ್ರಕಾರ, ಯಾವುದೇ ಭೂಮಾಲೀಕರು ಅಗ್ರಿಮೆಂಟ್ ಮಾಡದೇ ತಮ್ಮ ಮನೆಯನ್ನು ಗುತ್ತಿಗೆ  ಅಥವಾ ಬಾಡಿಗೆಯ ಆಧಾರದ ಮೇಲೆ ನೀಡಲು ಸಾಧ್ಯವಿಲ್ಲ. ಭೂಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಯಾವುದೇ ವಿವಾದವನ್ನು ಬಗೆಹರಿಸಲು, ಬಾಡಿಗೆ ಪ್ರಾಧಿಕಾರ ಮತ್ತು ಬಾಡಿಗೆ ನ್ಯಾಯಮಂಡಳಿಗೆ ಅವಕಾಶ ಕಲ್ಪಿಸಲಾಗಿದ್ದು,  ಭರವಸೆಗಳನ್ನು ಗರಿಷ್ಠ 60 ದಿನಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.

3 /3

ಅಲ್ಲದೆ, ಈ ಸುಗ್ರೀವಾಜ್ಞೆಯ ಪ್ರಕಾರ, ಯಾವುದೇ ಭೂಮಾಲೀಕರು ಅನಿಯಂತ್ರಿತ ರೀತಿಯಲ್ಲಿ ಬಾಡಿಗೆಯನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ವಸತಿ ಕಟ್ಟಡಗಳಿಗೆ ವಾರ್ಷಿಕವಾಗಿ ಶೇ.5 ಹಾಗೂ ವಾಣಿಜ್ಯ ಪರಿಸರಗಳಿಗೆ ವಾರ್ಷಿಕವಾಗಿ ಶೇ.7 ರಷ್ಟು ಬಾಡಿಗೆಯನ್ನು ಮಾತ್ರ ಹೆಚ್ಚಿಸಬಹುದಾಗಿದೆ.