Surprising: ಕೋಟಿ ಬಾಳುವ ಮನೆಯಲ್ಲಿ ಉಚಿತವಾಗಿ ನೆಲೆಸುವ ಅವಕಾಶ, ಜೊತೆಗೆ ಸಿಗಲಿದೆ ಕೈ ತುಂಬಾ ಹಣ

ಕೋಟ್ಯಂತರ ಮೌಲ್ಯದ ಮನೆಯಲ್ಲಿ ವಾಸಿಸುವ ಅವಕಾಶ ಮಾತ್ರವಲ್ಲ, ಜೊತೆಗೆ ಕೈ ತುಂಬಾ ಹಣ ಕೂಡಾ ಸಿಗಲಿದೆ. 

ನವದೆಹಲಿ :  ಈಜುಕೊಳ, ಜಿಮ್, ಹಾಟ್ ಟಬ್ ಮತ್ತು ವಿಶ್ವ ದರ್ಜೆಯ ಒಳಾಂಗಣಗಳನ್ನು ಹೊಂದಿರುವ ಇಂತಹ ಐಷಾರಾಮಿ ಮನೆಯಲ್ಲಿ ಪ್ರತಿಯೊಬ್ಬರೂ ವಾಸಿಸಲು ಬಯಸುತ್ತಾರೆ. ಆದರೆ, ಅಂತಹ ಮನೆಯಲ್ಲಿ ಉಚಿತವಾಗಿ ವಾಸಿಸುವ ಅವಕಾಶ ಸಿಕ್ಕಿದರೆ, ಹೇಗಿರುತ್ತದೆ? ಹೌದು, ಈ ಕೋಟ್ಯಂತರ ಮೌಲ್ಯದ ಮನೆಯಲ್ಲಿ ವಾಸಿಸುವ ಅವಕಾಶ ಮಾತ್ರವಲ್ಲ, ಜೊತೆಗೆ ಕೈ ತುಂಬಾ ಹಣ ಕೂಡಾ ಸಿಗಲಿದೆ. ಒಂದು ಕಂಪನಿಯು ಐಷಾರಾಮಿ ಭವನದಲ್ಲಿ ಉಚಿತವಾಗಿ ವಾಸಿಸಲು ಅವಕಾಶವನ್ನು ನೀಡಲಾಗುತ್ತಿದೆ. ಮೂರು ರಾತ್ರಿಗಳನ್ನು ಕಳೆಯಲು ಅವಕಾಶ ನೀಡಲಾಗುತ್ತಿದ್ದು, ಜೊತೆಗೆ 50 ಸಾವಿರ ರೂಪಾಯಿಗಳನ್ನು ಸಹ ನೀಡಲಾಗುತ್ತಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಕರೋನಾ ಲಾಕ್‌ಡೌನ್‌ನಿಂದಾಗಿ ತಿಂಗಳುಗಟ್ಟಲೆ ಮನೆಯಲ್ಲಿ ಬಂಧಿಯಾಗಿರುವ ಜನರಿಗೆ, ಇದೊಂದು ಸುವರ್ಣಾವಕಾಶವಾಗಲಿದೆ.  ಯುಕೆಯ ಈ ಭವ್ಯ  ಭವನದಲ್ಲಿ ಅತ್ಯಂತ ಆರಾಮದಾಯಕ ರಜಾದಿನಗಳನ್ನು ಉಚಿತವಾಗಿ ಕಳೆಯಬಹುದು.   

2 /5

ದಿ ಸನ್ ವರದಿ ಪ್ರಕಾರ, ಈ ಭವ್ಯವಾದ ಭವನದಲ್ಲಿ ಒಬ್ಬ ವ್ಯಕ್ತಿ 3 ರಾತ್ರಿಗಳನ್ನು ಕಳೆದರೆ, 500 ಪೌಂಡ್ ಅಂದರೆ 50 ಸಾವಿರ ರೂಪಾಯಿ ಪಡೆಯಲಿದ್ದಾನೆ. ಈ ಭವನದ  ಹೆಸರು ಮ್ಯಾನರ್ ಹೌಸ್, ಇದರ ಒಳಭಾಗವು ತುಂಬಾ ಸುಂದರವಾಗಿರುತ್ತದೆ.  

3 /5

ಈ ಮನೆಯಲ್ಲಿ ವಾಸಿಸುವ ವ್ಯಕ್ತಿಯು ಈಜುಕೊಳ ಮತ್ತು ಹಾಟ್ ಟಬ್ ಅನ್ನು ಉಚಿತವಾಗಿ ಬಳಸುವ ಸೌಲಭ್ಯವನ್ನೂ ಪಡೆಯುತ್ತಾನೆ. ರಾಯಲ್ ಬೆಡ್ ರೂಂನಲ್ಲಿ ಉಳಿಯುವ ಅವಕಾಶವಿರುತ್ತದೆ. ಈ ಭವನದಲ್ಲಿ 8 ಮಲಗುವ ಕೋಣೆಗಳಿವೆ. 

4 /5

 ಈ ಮನೆಯಲ್ಲಿ ಉಳಿಯುವ ಸಲುವಾಗಿ ಹಣವನ್ನು ನೀಡಲಾಗುತ್ತಿದೆ. ಮ್ಯಾನ್ಶನ್‌ನಲ್ಲಿ ಉಳಿದುಕೊಳ್ಳುವ ವ್ಯಕ್ತಿಯು ಮೈ ಹೋಮ್ ಮೂವ್ ಕನ್ವೇಯಿಂಗ್ ಕಂಪನಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ. ಇದಕ್ಕಾಗಿ, ವ್ಯಕ್ತಿಯು ಈ ಭವನದಲ್ಲಿ ಸೆಪ್ಟೆಂಬರ್ 21 ರಿಂದ 23 ರ ನಡುವೆ ಇರಬೇಕಾಗುತ್ತದೆ. 

5 /5

"ಹೊಸ ಮನೆಯನ್ನು ಖರೀದಿಸುವುದು ಒಬ್ಬ ವ್ಯಕ್ತಿಯ ಜೀವನದ ಅತಿ ದೊಡ್ಡ ಖರೀದಿಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಖರೀದಿದಾರನಿಗೆ ನಂಬಿಕಸ್ಥರ ಸಲಹೆ, ಮಾರ್ಗದರ್ಶನದ ಅಗತ್ಯವಿರುತ್ತದೆ. ಮ್ಯಾನ್ಷನ್ ಟೆಸ್ಟರ್ ಈ ಕೆಲಸದಲ್ಲಿ ಖರೀದಿದಾರರಿಗೆ  ಬಹಳಷ್ಟು ಸಹಾಯ ಮಾಡುತ್ತದೆ.