Flight Rule: ಎಷ್ಟು ವಯಸ್ಸಿನ ಮಕ್ಕಳು ವಿಮಾನದಲ್ಲಿ ಒಂಟಿಯಾಗಿ ಪಯಣಿಸಬಹುದು, ಇಲ್ಲಿದೆ ಮುಖ್ಯ ನಿಯಮ

ವಿಮಾನದಲ್ಲಿ ಮಕ್ಕಳ ಪ್ರಯಾಣದ ನಿಯಮ ಏನು ಗೊತ್ತಾ? ಯಾವ ವಯಸ್ಸಿನಲ್ಲಿ ಮಕ್ಕಳು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಬಹುದು? ಈ ಎಲ್ಲಾ ಮಾಹಿತಿ ಇಲ್ಲಿದೆ. 

ಬೆಂಗಳೂರು : ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ, 11 ವರ್ಷ ವಯಸ್ಸಿನ ಮಗುವೊಂದು 1000 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿದೆ. ನಂತರ ವಿಮಾನದ ಮೂಲಕ ಏಕಾಂಗಿಯಾಗಿ ಸ್ಲೋವಾಕಿಯಾ ತಲುಪಿದೆ. ಈ ಮಗುವಿನ ಚಿತ್ರಗಳು ಸಾಕಷ್ಟು ವೈರಲ್ ಆಗಿತ್ತು. ಆದರೆ ವಿಮಾನದಲ್ಲಿ ಮಕ್ಕಳ ಪ್ರಯಾಣದ ನಿಯಮ ಏನು ಗೊತ್ತಾ? ಯಾವ ವಯಸ್ಸಿನಲ್ಲಿ ಮಕ್ಕಳು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಬಹುದು? ಈ ಎಲ್ಲಾ ಮಾಹಿತಿ ಇಲ್ಲಿದೆ. 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮಕ್ಕಳ ಪ್ರಯಾಣಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಸೂಚಿಗಳನ್ನು ಮಾಡಿದೆ. ಸಾಮಾನ್ಯವಾಗಿ, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ವಿಮಾನಗಳಲ್ಲಿ ಒಂಟಿಯಾಗಿ ಪ್ರಯಾಣಿಸಬಹುದು. ಆದರೂ, ಈ ಬಗ್ಗೆ ವಿವಿಧ ವಿಮಾನಯಾನ ಸಂಸ್ಥೆಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ಆದರೆ ಸರಾಸರಿ 5 ವರ್ಷದ ಮಕ್ಕಳಿಗೆ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಅವಕಾಶವಿದೆ.

2 /4

ಏರ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ದೇಶೀಯ ವಿಮಾನಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸಬಹುದು. 12 ವರ್ಷ ವಯಸ್ಸಿನವರೆಗೆ ಏಕಾಂಗಿಯಾಗಿ ಪ್ರಯಾಣಿಸುವ ಮಕ್ಕಳನ್ನು ಸಾಮಾನ್ಯವಾಗಿ Unaccompanied Minors ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಏರ್ ಇಂಡಿಯಾ ವಿಶೇಷ ಸೌಲಭ್ಯ ಕಲ್ಪಿಸಿದೆ.  

3 /4

ಏರ್ ಇಂಡಿಯಾದ ಪ್ರಕಾರ, ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳಲ್ಲಿ ಮಕ್ಕಳಿಗೆ ಪ್ರಯಾಣಿಸಲು ಅವಕಾಶ ನೀಡುತ್ತದೆ. ಟ್ರಾನ್ಸಿಟ್ ಪಾಯಿಂಟ್‌ನಲ್ಲಿ ಇಂಟರ್‌ಲೈನ್ ಪ್ರಯಾಣವನ್ನು ಸೇರಿಸಿದಾಗ,  ಮಕ್ಕಳನ್ನು ಮಾತ್ರ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.

4 /4

ಇದಲ್ಲದೆ, 7 ದಿನಗಳಿಗಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶವಿದೆ. 7 ತಿಂಗಳಿಂದ 2 ವರ್ಷಗಳವರೆಗಿನ ಮಕ್ಕಳನ್ನು ಶಿಶು ವಿಭಾಗದಲ್ಲಿ ಇರಿಸಲಾಗುತ್ತದೆ. ಅಂತಹ ಮಕ್ಕಳಿಗೆ ಪ್ರತ್ಯೇಕ ಸೀಟು ನೀಡುವುದಿಲ್ಲ. ಈ ಮಕ್ಕಳನ್ನು ವಿಮಾನದಲ್ಲಿ ಕರೆದೊಯ್ಯಲು, ಅವರ ಜನ್ಮ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ.