ಪ್ರಬಲ ರಾಜಕಾರಣಿಯ ಮಗಳ ಮೇಲೆ ಈ ಸ್ಟಾರ್‌ ಆಟಗಾರನಿಗೆ ಲವ್‌ : ಇವರ ಲವ್‌ಸ್ಟೋರಿಯೇ ವಿಭಿನ್ನ

ಭಾರತದ ಸ್ಟಾರ್ ಆಲ್‌ರೌಂಡರ್ ಕ್ರಿಕೆಟರ್‌ ರವೀಂದ್ರ ಜಡೇಜಾ ಕಿಲ್ಲರ್ ಬೌಲಿಂಗ್ ಮತ್ತು ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಆಡಿರುವ ಅವರು, ಅನೇಕ ಆಟಗಳನ್ನು ತನ್ನ ಸ್ವಂತ ಬಲದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ಕ್ರಿಕೆಟ್‌ ಜೊತೆಗೆ ರವೀಂದ್ರ ಜಡೇಜಾ ಅವರ ಪ್ರೇಮ ಜೀವನವೂ ಸುದ್ದಿಯಾಗುತ್ತಿದೆ. ಜಡೇಜಾ ಅವರ ಪತ್ನಿ ರೀವಾ ಸೋಲಂಕಿ ತುಂಬಾ ಸುಂದರಿ. ಇವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ.

1 /5

ರೀವಾ ಸೋಲಂಕಿ. ಇವರು ರಾಜ್‌ಕೋಟ್‌ನ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಓದಿನಲ್ಲಿ ತುಂಬಾ ಚುರುಕಾಗಿದ್ದ ಇವರು ಯುಪಿಎಸ್‌ಸಿಗೂ ತಯಾರಿ ನಡೆಸಿದ್ದರು.

2 /5

ರೀವಾ ಸೋಲಂಕಿ. ಇವರು ರಾಜ್‌ಕೋಟ್‌ನ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಓದಿನಲ್ಲಿ ತುಂಬಾ ಚುರುಕಾಗಿದ್ದ ಇವರು ಯುಪಿಎಸ್‌ಸಿಗೂ ತಯಾರಿ ನಡೆಸಿದ್ದರು.

3 /5

ಪೋಷಕರಿಗೆ ರೀವಾ ಒಬ್ಬಳೇ ಮಗಳು. ಜಡೇಜಾ ಮತ್ತು ರಿವಾ 17 ಏಪ್ರಿಲ್ 2016 ರಂದು ವಿವಾಹವಾದರು. ಮದುವೆಗೂ ಮುನ್ನವೇ ಜಡೇಜಾ ಅವರಿಗೆ ಮಾವ ಸುಮಾರು 1 ಕೋಟಿ ಮೌಲ್ಯದ ಆಡಿ ಕ್ಯೂ7 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇಬ್ಬರೂ ಬಹಳ ವಿಜೃಂಭಣೆಯಿಂದ ಮದುವೆಯಾದರು.

4 /5

ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಅವರು ರಿವಾ ಸೋಲಂಕಿಯ ಉತ್ತಮ ಸ್ನೇಹಿತೆ. ಜಡೇಜಾ ಅವರನ್ನು ಪಾರ್ಟಿಯೊಂದರಲ್ಲಿ ರಿವಾ ಸೋಲಂಕಿ ಭೇಟಿಯಾಗುವಂತೆ ಮಾಡಿದ್ದು ಅವರೇ. ಇದಾದ ನಂತರ ಜಡೇಜಾ-ರೇವಾ ಪ್ರೀತಿ ಹೆಚ್ಚಾಗ ತೊಡಗಿತು. 2017 ರಲ್ಲಿ ಇಬ್ಬರಿಗೂ  ಹೆಣ್ಣು ಮಗುವಾಗಿದ್ದು, ಕಂದಮ್ಮನಿಗೆ ನಿಧ್ಯಾನಾ ಎಂದು ಹೆಸರಿಟ್ಟಿದ್ದಾರೆ. ಇಬ್ಬರೂ ಮಗಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡಲು ಬಯಸುತ್ತಾರೆ.

5 /5

ಕಳೆದ ಕೆಲವು ವರ್ಷಗಳಲ್ಲಿ ರವೀಂದ್ರ ಜಡೇಜಾ ಅದ್ಭುತ ಆಟವಾಡುತ್ತಿದ್ದು, ಜನಮನ ಗೆದ್ದಿದ್ದಾರೆ. ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಸಾಮರ್ಥ್ಯ ಅವರಲ್ಲಿದೆ.