ರಾತ್ರಿ AC ಬಳಸುವಾಗ ಸೀಲಿಂಗ್ Fan ಹಾಕ್ತೀರಾ..? ತಪ್ಪದೇ ಈ ವಿಚಾರ ತಿಳಿದುಕೊಳ್ಳಿ

AC and Fan at the same time : ಎಸಿ ಬಳಸುವಾಗ ಸೀಲಿಂಗ್ ಫ್ಯಾನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು ಅಂತ ಕೆಲವು ಜನರು ಹೇಳುತ್ತಾರೆ.. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ ಅಥವಾ ತಪ್ಪಾ..? ಈ ಕುರಿತ ಸ್ಪಷ್ಟವಾದ ವಿವರ ಇಲ್ಲಿದೆ.. ನೋಡಿ..

1 /6

ಬೇಸಿಗೆ ಕಾಲ ಆರಂಭವಾಗಿದ್ದು, ಸೂರ್ಯ ಶಾಖಕ್ಕೆ ಮನೆಬಿಟ್ಟು ಹೊರ ಹೋಗಲು ಜನರ ಹಿಂದೇಟು ಹಾಕುತ್ತಿದ್ದಾರೆ. ದುಡ್ಡು ಖರ್ಚಾದರೂ ಚಿಂತೆಯಿಲ್ಲ ಅಂತ ಮನೆಯಲ್ಲಿ ಎಸಿ ಹಾಕಿಸುತ್ತಿದ್ದಾರೆ.  

2 /6

ಇತ್ತೀಚಿನ ದಿನಗಳಲ್ಲಿ ಜನರು ಎಸಿಗಳನ್ನು ಹೆಚ್ಚು ಬಳಸುತ್ತಿದ್ದಾರೆ. ನಗರದ ಮನೆಗಳಲ್ಲಿರುವಂತೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಎಸಿ ಬಳಕೆ ಹೆಚ್ಚಾಗಿದೆ  

3 /6

ಅನೇಕ ಜನರು ಎಸಿ ಮತ್ತು ಸೀಲಿಂಗ್ ಫ್ಯಾನ್ ಎರಡನ್ನೂ ಒಟ್ಟಿಗೆ ಬಳಸುತ್ತಾರೆ. ಕೆಲವರು ಎಸಿ ಬಳಸುವಾಗ ಸೀಲಿಂಗ್ ಫ್ಯಾನ್ ಬಳಸಬಾರದು ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ.  

4 /6

ಫ್ಯಾನ್ ಮತ್ತು AC ಅನ್ನು ಒಟ್ಟಿಗೆ ಬಳಸುವಾಗ, ಕೋಣೆಯಲ್ಲಿನ ಬಿಸಿ ತಾಪಮಾನ ತ್ವರಿತವಾಗಿ ಕರಗಿ ತಕ್ಷಣವೇ ಕೊಠಡಿಯನ್ನು ತಂಪಾಗಿಸುವುದನ್ನು ನೀವು ಗಮನಿಸಿರಬಹುದು.  

5 /6

ಆದರೆ AC ಯೊಂದಿಗೆ ಫ್ಯಾನ್‌ ಬಳಸುವಾಗ ಎಸಿ ತಾಪಮಾನ 18 ಅಥವಾ 20 ಡಿಗ್ರಿಗಳಲ್ಲಿ ಇರಿಸುವ ಅಗತ್ಯವಿಲ್ಲ. 24 ನಲ್ಲಿ ಇರಿಸಿದರೆ ಸಾಕು, ರೂಮ್‌ ತಂಪಾಗುತ್ತದೆ.   

6 /6

ಎಸಿ ಮತ್ತು ಫ್ಯಾನ್‌ ಹಚ್ಚಿ ಇಡುವುದರಿಂದ ನಿಮ್ಮ ವಿದ್ಯುತ್ ಬಿಲ್‌ನಲ್ಲಿ ನೀವು ಶೇಕಡಾ 12-20 ರಷ್ಟು ಉಳಿಸಬಹುದು.