ಕರ್ರಗೆ ಇದೀಯಾ, ಬ್ಯಾಕ್‌ ದಪ್ಪ ಇದೆ, ಛೀ..! ಅಸಹ್ಯ ಮಾಡಿದವರೇ ಇಂದು ಈಕೆಯನ್ನ ಬಾಯ್ತೆರೆದು ನೋಡುತ್ತಿದ್ದಾರೆ..

Divya Bharathi : ಈಗ ಇರುವ ಸ್ಟಾರ್‌ಗಳ ಹಿಂದಿನ ಫೋಟೋಗಳನ್ನ ನೋಡಿದ್ರೆ.. ಆರೆ.. ಇವರೆಲ್ಲ ಹೀಗೆ ಇದ್ರಾ ಅಂತ ಅನಿಸುತ್ತೆ.. ಈ ಪೈಕಿ ಇಲ್ಲೊಬ್ಬ ಯುವತಿ ಕಾಲೇಜ್‌ ಡೇಸ್‌ನಲ್ಲಿ ನೋಡೋಕೆ ಗೌರಮ್ಮನ ಹಾಗೆ ಇದ್ಲು, ಎಲ್ಲರೂ ಈಕೆಯನ್ನ ನೋಡಿ ನಗುತ್ತಿದ್ದರು.. ಆದ್ರೆ ಇವಾಗ ಬಾಯಿ ಬಿಟ್ಕೋಂಡು ನೋಡುತ್ತಿದ್ದಾರೆ.. ಯಾರಿಕೆ...? ಬನ್ನಿ ನೋಡೋಣ..
 

1 /11

ಕೊಯಮತ್ತೂರಿನವರಾದ ದಿವ್ಯಭಾರತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಸಧ್ಯ ಸಿನಿಲೋಕದಲ್ಲಿ ರಾರಾಜಿಸುತ್ತಿದ್ದಾರೆ..   

2 /11

ನಟಿ ದಿವ್ಯಾ ಭಾರತಿ ಮೊದಲ ಚಿತ್ರದಲ್ಲೇ ತಮ್ಮ ಅಪರೂಪ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದರು.  

3 /11

ಸಿನಿಮಾ ಮಾಡುವುದಕ್ಕಿಂತ ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಗ್ಲಾಮರ್‌ ಮೂಲಕ ಚಿರಪರಿಚಿತರಾಗಿದ್ದರು.  

4 /11

ಜಿ.ವಿ.ಪ್ರಕಾಶ್ ಅಭಿನಯದ 'ಬ್ಯಾಚುಲರ್' ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ದಿವ್ಯ ಪಾದಾರ್ಪಣೆ ಮಾಡಿದರು.  

5 /11

"ಬ್ಯಾಚುಲರ್" ನಂತರ ಅವರು "ಬಿಗ್ ಬಾಸ್" ಮುಗೇನ್ ರಾವ್ ಜೊತೆಗೆ "ಮದಿಲ್ ಮೇಲ್ ಕಾದಲ್" ನಲ್ಲಿ ನಟಿಸಿದರು.  

6 /11

ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾಲೇಜು ದಿನಗಳಲ್ಲಿ ತನ್ನ ದೇಹದ ಆಕಾರದ ಬಗ್ಗೆ ಗೇಲಿ ಮಾಡಲಾಗಿತ್ತು ಅಂತ ದಿವ್ಯ ಬಹಿರಂಗಪಡಿಸಿದ್ದಾರೆ.  

7 /11

ಅಲ್ಲದೆ, ನಗೆ "ಫಂಡಾ ಬಾಟಲ್", ​​"ಅಸ್ಥಿಪಂಜರ", "ಬಿಗ್‌ ಬಟ್ ಗರ್ಲ್" ಸೇರಿದಂತೆ ತುಂಬಾ ಕೆಟ್ಟ ಕಾಮೆಂಟ್‌ಗಳು ಬಂದವು ಅಂತ ಹೇಳಿಕೊಂಡಿದ್ದಾರೆ ನಟಿ..  

8 /11

ಇದೆಲ್ಲವೂ ನನ್ನ ಮೇಲೆ ಪರಿಣಾಮ ಬೀರಿತು. ನಾನೇ ನನ್ನ ದೇಹವನ್ನು ದ್ವೇಷಿಸುವಂತೆ ಮಾಡಿತು. ಜನರ ಮುಂದೆ ನಡೆಯಲು ಕೂಡ ಹೆದರುತ್ತಿದ್ದೆ.  

9 /11

ನಂತರ 2015 ರಲ್ಲಿ, ನಾನು Instagram ಖಾತೆಯನ್ನು ತೆರೆದೆ. ನನ್ನ ಮಾಡೆಲಿಂಗ್ ಪ್ರಯಾಣವನ್ನು ಪ್ರಾರಂಭಿಸಿದೆ. ನನ್ನ ಬದಲಾವಣೆ ನೋಡಿ ಎಲ್ಲರೂ ಹೊಗಳಲು ಪ್ರಾರಂಭಿಸಿದರು.  

10 /11

ವಿಭಿನ್ನ ದೇಹದ ಆಕಾರವನ್ನು ಹೊಂದಿದ್ದರೂ ಪರವಾಗಿಲ್ಲ, ಎಲ್ಲಾ ಟೀಕೆಗಳ ನಡುವೆ ನೀವು ನಿಮ್ಮನ್ನು ಹೇಗೆ ಪ್ರೀತಿಸುತ್ತೀರಿ ಎಂಬುವುದು ಮುಖ್ಯ. ಇದನ್ನು ನನಗೆ ತಿಳಿಸಲು ಆ ದಿನಗಳಲ್ಲಿ ಯಾರಾದರೂ ಇದ್ದಿದ್ದರೆ ಚೆನ್ನಾಗಿತ್ತು.. ಅಂತ ನಟಿ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.  

11 /11

ಸಧ್ಯ ದಿವ್ಯ ಭಾರತಿ ಹಳೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.. ಇನ್ನೂ ಕೆಲವರು ಹೊಗಳುತ್ತಿದ್ದಾರೆ.