Health benefits of garlic : ಸಾಕಷ್ಟು ತರಕಾರಿಗಳು ಹಲವಾರು ರೋಗಗಳಿಗೆ ಪರಿಹಾರವಾಗಿವೆ. ಅದರಲ್ಲಿ ಬೆಳ್ಳುಳ್ಳಿಯೂ ಒಂದು ಇದು ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಬೆಳ್ಳುಳ್ಳಿಯಲ್ಲಿ ಔಷಧಿಯ ಗುಣಗಳಿವೆ ಎಂದು ಹೇಳಲಾಗುತ್ತದೆ. ಆದ್ದರಿಂದ ನಿಯಮಿತವಾಗಿ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿ ಆರೋಗ್ಯವಂತರಾಗಿರಿ. ಹಾಹಾದರೆ ಈ ಬೆಳ್ಳುಳ್ಳಿಯಿಂದ ಯಾವ ರೋಗಗಳಿಗೆ ಪರಿಹಾರ ನೀಡಬಹುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ : ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಕ್ಯಾನ್ಸರ್ ಗೆ ಚಿಕಿತ್ಸೆ : ಮೂತ್ರಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಇವೆಲ್ಲವೂ ಬೆಳ್ಳುಳ್ಳಿಯಿಂದ ಚಿಕಿತ್ಸೆ ನೀಡಿದಾಗ ಅವುಗಳ ಬೆಳವಣಿಗೆ ಕಡಿಮೆಯಾಗುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ6 ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ವಿಟಮಿನ್ ಬಿ6 ಕೊರತೆಯನ್ನು ನೀಗಿಸುತ್ತದೆ : ಬೆಳ್ಳುಳ್ಳಿ ವಿಟಮಿನ್ B6 ನ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಗೆ ಮತ್ತು ಹೊಸ ಕೋಶಗಳ ಸಮರ್ಥ ಬೆಳವಣಿಗೆಗೆ ಅಗತ್ಯವಾಗಿರುತ್ತದೆ.
ದೇಹದ ದುರ್ಬಲತೆಗೆ ಚಿಕಿತ್ಸೆ : ದೇಹದ ದೌರ್ಬಲ್ಯದಿಂದ ಮುಕ್ತಿ ಪಡೆಯಲು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸಿ. ಇಂದಿಗೂ ಹಲವಾರು ಸಮುದಾಯಗಳಲ್ಲಿ ಈ ಬೆಳ್ಳುಳ್ಳಿಯೇ ದೇಹಕ್ಕೆ ಶಕ್ತಿ ನೀಡುವ ತರಕಾರಿ ಎಂದು ನಂಬಲಾಗುತ್ತದೆ.
ಹೈಪರ್ ಥೈರಾಯ್ಡ್ ಚಿಕಿತ್ಸೆ : ಬೆಳ್ಳುಳ್ಳಿಯು ಹೆಚ್ಚಿನ ಮಟ್ಟದ ಅಯೋಡಿನ್ ಅನ್ನು ಹೊಂದಿರುತ್ತದೆ, ಇದು ಹೈಪರ್ ಥೈರಾಯ್ಡ್ ಕಾಯಿಲೆಗಳಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ.