ಚಿಕನ್

  • Nov 06, 2023, 09:47 AM IST
1 /5

ಪಾಲಕ್‌ ಸೊಪ್ಪಿನಿಂದ ತಯಾರಿಸಿದ ವಸ್ತುಗಳನ್ನು ಮತ್ತೆ ಬಿಸಿ ಮಾಡಿ ತಿನ್ನಬಾರದು. ಇದರಲ್ಲಿ ನೈಟ್ರೇಟ್ ಇರುತ್ತದೆ, ಇದು ನೈಟ್ರೊಸಮೈನ್ ಆಗಿ ಪರಿವರ್ತನೆಯಾಗುತ್ತದೆ. ನೈಟ್ರೋಸಮೈನ್ ಒಂದು ಕ್ಯಾನ್ಸರ್ ಕಾರಕ. ನೈಟ್ರೊಸಮೈನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆ, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.  

2 /5

ಅಕ್ಕಿಯಿಂದ ಮಾಡಿದ ಆಹಾರವನ್ನು ಮತ್ತೆ ಬಿಸಿ ಮಾಡಿ ಸೇವಿಸಬಾರದು. ಅನೇಕ ಮನೆಗಳಲ್ಲಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅನ್ನವನ್ನು ಒಂದೇ ಬಾರಿ ಮಾಡುತ್ತಾರೆ. ಫುಡ್ ಸೇಫ್ಟಿ ಏಜೆನ್ಸಿ ಪ್ರಕಾರ, ತಣ್ಣನೆಯ ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಆಹಾರ ವಿಷವಾಗಬಹುದು.   

3 /5

ಆಲೂಗಡ್ಡೆ ಪಿಷ್ಟವನ್ನು ಹೊಂದಿರುತ್ತದೆ. ಇದು ಮತ್ತೆ ಬಿಸಿ ಮಾಡಿದಾಗ ಒಡೆಯುತ್ತದೆ ಮತ್ತು ವಿಷವನ್ನು ಉತ್ಪಾದಿಸಬಹುದು. ಈ ವಿಷ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು.  

4 /5

ಮೊಟ್ಟೆಗಳು ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಫುಡ್‌ ಪಾಯಿಸನ್‌ಗೆ ಕಾರಣವಾಹಬಹುದು. ಅತಿಸಾರ, ಹೊಟ್ಟೆ ನೋವು ಮತ್ತು ಜ್ವರ ಕಾಣಿಸಿಕೊಳ್ಳಬಹುದು.  

5 /5

ಚಿಕನ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ಅದರ ಪ್ರೋಟೀನ್ ಒಡೆಯುತ್ತದೆ ಮತ್ತು ವಿಭಿನ್ನ ರೂಪವನ್ನು ಪಡೆಯುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬೇಯಿಸಿದ ಚಿಕನ್ ಅನ್ನು ಮೈಕ್ರೋವೇವ್‌ನಲ್ಲಿ ಇರಿಸಿದರೆ, ಬ್ಯಾಕ್ಟೀರಿಯಾವು ಮಾಂಸದಾದ್ಯಂತ ಹರಡಬಹುದು.