ಸಲಿಂಗಕಾಮಿ ಅಥವಾ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ನನಗೆ ಸಮಸ್ಯೆ ಇಲ್ಲ..!

Nargis Fakhri on nudity : ಇತ್ತೀಚಿಗೆ ಬಿಟೌನ್‌ ನಟಿಯರು ತಮ್ಮ ಬೊಲ್ಡ್‌ ಹೇಳಿಕೆ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಇದೀಗ ನಟಿ ನರ್ಗಿಸ್ ಫಕ್ರಿ ನಗ್ನತೆಯ ಬಗ್ಗೆ ಓಪನ್‌ ಆಗಿ ಮಾತನಾಡಿದ್ದು, ನೆಟ್ಟಿಗರಿಗೆ ಶಾಕ್‌ ನೀಡಿದ್ದಾರೆ.

1 /7

ಬಾಲಿವುಡ್‌ ನಟಿ ನರ್ಗಿಸ್ ಫಕ್ರಿ 'ತಟ್ಲುಬಾಜ್' ಮೂಲಕ OTT ಚೊಚ್ಚಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚಿಕೆ ಕಾರ್ಯಕ್ರಮ ಪ್ರಚಾರದ ಸಮಯದಲ್ಲಿ ನಗ್ನತೆ ಕುರಿತು ನಗೀರ್ಸ್‌ ನೀಡಿದ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.

2 /7

ನರ್ಗಿಸ್ ಫಕ್ರಿ ಒಟಿಟಿಗೆ ಲಗ್ಗೆ ಇಟ್ಟಿದ್ದಾರೆ. 'ರಾಕ್‌ಸ್ಟಾರ್' ಮತ್ತು 'ಮದ್ರಾಸ್ ಕೆಫೆ' ನಂತಹ ಬಾಲಿವುಡ್ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ನಟಿ ಇದೀಗ 'ತಟ್ಲುಬಾಜ್' ಮೂಲಕ ತಮ್ಮ OTT ಚೊಚ್ಚಲ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ.

3 /7

ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ಸಿನಿಮಾಗಾಗಿ ನಗ್ನತೆಯ ಪಾತ್ರವನ್ನು ಮಾಡುವುದರ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಒಂದು ಪ್ರಾಜೆಕ್ಟ್‌ ಗಾಗಿ ನಾನು ಯಾವತ್ತೂ ಬೆತ್ತಲಾಗುವುದಿಲ್ಲ, ನನಗೆ ನಗ್ನತೆಯಿಂದ ಸಮಸ್ಯೆಯಿದೆ ಎಂದು ಹೇಳಿದ್ದರು.

4 /7

ಇನ್ನು ಸಿನಿಮಾದಲ್ಲಿ ಸಲಿಂಗಕಾಮಿ ಅಥವಾ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವ ಸನ್ನಿವೇಶಗಳಿದ್ದರೆ ನನ್ನಗೇನು ತೊಂದರೆಯಿಲ್ಲ. ಅಂಥ ಪಾತ್ರಗಳನ್ನು ಮಾಡುವುದು ನನ್ನ ಕೆಲಸದ ಒಂದು ಭಾಗವಷ್ಟೇ ಅಂತ ನಟಿ ನರ್ಗಿಸ್‌ ಹೇಳಿಕೆ ನೀಡಿದ್ದರು.

5 /7

ಬೋಲ್ಡ್‌ ಕಂಟೆಂಟ್‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜನರು ಏನು ನೋಡಬೇಕು ಏನು ನೋಡಬಾರದೆನ್ನುವುದು ಅವರ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಎಂದು ನಟಿ ಹೇಳಿದ್ದಾರೆ.

6 /7

ನರ್ಗಿಸ್ ಫಕ್ರಿ ಇಮ್ತಿಯಾಜ್ ಅಲಿ ಅವರ ‘ರಾಕ್‌ಸ್ಟಾರ್ʼಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮೇನ್ ತೇರಾ ಹೀರೋ, ಹೌಸ್‌ಫುಲ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

7 /7

ಸದ್ಯ ಫಕ್ರಿ ಧೀರಜ್ ಧೂಪರ್ ಮತ್ತು ದಿವ್ಯಾ ಅಗರ್ವಾಲ್ ಜೊತೆ 'ತಟ್ಲುಬಾಜ್' ಎಂಬ ಸಿನಿಮಾದ ಮೂಲಕ OTT ಪ್ರವೇಶಕ್ಕೆ ಮುಂದಾಗಿದ್ದಾರೆ.