ತೂಕ ಇಳಿಕೆಗೆ ಟಿಪ್ಸ್

  • Jun 02, 2024, 16:44 PM IST
1 /6

ಕ್ಯಾರೆಟ್‌’ನಲ್ಲಿ ಅನೇಕ ಪೋಷಕಾಂಶಗಳಿವೆ, ಇದು ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ, ಕ್ಯಾರೆಟ್ ತಿನ್ನುವುದು ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

2 /6

ಕ್ಯಾರೆಟ್‌ನಲ್ಲಿ ತೂಕ ಇಳಿಸಲು ಸಹಾಯ ಮಾಡುವ ಅನೇಕ ಗುಣಗಳಿವೆ. ಇದು ನಿಮ್ಮ ತೂಕ ನಷ್ಟ ಆಹಾರದ ಪ್ರಬಲ ಅಂಶವಾಗಿದೆ. ಕ್ಯಾರೆಟ್‌ನಲ್ಲಿ ಕಡಿಮೆ ಕ್ಯಾಲೋರಿ ಅಂಶವಿರುವುದರಿಂದ ತೂಕ ಇಳಿಕೆಗೆ ಇದು ಸೂಕ್ತ ಆಹಾರವಾಗಿದೆ. ಇದು ಫೈಬರ್‌’ನಿಂದ ಕೂಡಿದೆ

3 /6

ಒಂದು ಬೌಲ್ ಕೇಸರಿ ಬಣ್ಣದ ಕ್ಯಾರೆಟ್ ಅನ್ನು ಬೇಯಿಸಿ ತಿನ್ನಿ. ಅಥವಾ ಕ್ಯಾರೆಟ್ ಸೂಪ್ ರೂಪದಲ್ಲಾದರೂ ಸೇವಿಸಿ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

4 /6

ಕ್ಯಾರೆಟ್ ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಾತ್ರಿ ಕುರುಡುತನದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆ, ಅತಿಸಾರದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

5 /6

ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸಿಕೊಳ್ಳಬಹುದು ಏಕೆಂದರೆ ಇದು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಜೊತೆಗೆ ಕ್ಯಾರೆಟ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಕ್ಯಾಲ್ಸಿಯಂ ಸಹ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್‌’ನಲ್ಲಿದೆ,

6 /6

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.