ಧಾರಾವಾಹಿ ಶೂಟಿಂಗ್‌ ವೇಳೆ ಅಪಘಾತ..! ಖ್ಯಾತ ನಟಿಗೆ ಗಂಭೀರ ಗಾಯ..

Mngal lakshmi actress Deepika : ಸೀರಿಯಲ್‌ ಶೂಟಿಂಗ್‌ ವೇಳೆ ನಡೆದ ಅವಘಡದಲ್ಲಿ ಖ್ಯಾತ ನಟಿ ಗಾಯಗೊಂಡಿದ್ದಾರೆ. ಮಂಗಳಲಕ್ಷ್ಮಿ ಎಂಬ ಧಾರಾವಾಹಿ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
 

1 /8

ಮಂಗಳಲಕ್ಷ್ಮಿ ಧಾರಾವಾಹಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಸೀರಿಯಲ್‌ನಲ್ಲಿ ಮಂಗಳಾ ಪಾತ್ರದಲ್ಲಿ ಖ್ಯಾತ ನಟಿ ದೀಪಿಕಾ ಸಿಂಗ್‌ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ದೀಪಿಕಾ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..   

2 /8

ದಿಯಾ ಔರ್ ಬಾತಿ ಧಾರಾವಾಹಿಯ ಖ್ಯಾತಿಯ ದೀಪಿಕಾ ಸಿಂಗ್ ಸದ್ಯ ಮಂಗಳಲಕ್ಷ್ಮಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಮಂಗಳಾ ಪಾತ್ರದಲ್ಲಿ ದೀಪಿಕಾ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ದೀಪಿಕಾ ಗಾಯಗೊಂಡಿದ್ದಾರಂತೆ.  

3 /8

ಇತ್ತೀಚಿನ ಮಾಹಿತಿಯ ಪ್ರಕಾರ, ಈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಗೋರೆಗಾಂವ್ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿತ್ತು, ಈ ವೇಳೆ ಸೆಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ..  

4 /8

ಪ್ರಶಸ್ತಿ ಸಮಾರಂಭದ ದೃಶ್ಯವನ್ನು ಚಿತ್ರೀಕರಿಸುವಾಗ, ಬಲವಾದ ಗಾಳಿಗೆ ಹಿಂದೆ ಹಾಕಲಾಗಿದ್ದ ಪ್ಲೈವುಡ್ ಬೋರ್ಡ್ ದೀಪಿಕಾ ಮೇಲೆ ಬಿದ್ದಿದೆ. ಈ ವೇಳೆ ಅವರು ಕಿರುಚುತ್ತಾ ಕೆಳಗೆ ಬಿದ್ದಿದ್ದಾರೆ, ಆಕೆಯ ಕಿರುಚಾಟ ಕೇಳಿ ತಕ್ಷಣ ಅಲ್ಲಿಗೆ ಆಗಮಿಸಿದ ಪ್ರೊಡಕ್ಷನ್ ತಂಡ ನಟಿಯ ಮೇಲೆ ಬಿದ್ದಿದ್ದ ಪ್ಲೈವುಡ್ ಬೋರ್ಡ್ ತೆಗೆದಿದೆ.   

5 /8

ಘಟನೆಯಿಂದಾಗಿ ದೀಪಿಕಾ ಬೆನ್ನಿಗೆ ಗಂಭೀರ ಗಾಯವಾಗಿದೆಯಂತೆ. ಗಾಯಗೊಂಡ ಸ್ಥಿತಿಯಲ್ಲಿಯೂ ಸಹ, ದೀಪಿಕಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.   

6 /8

ನೋವು ಕಡಿಮೆ ಮಾಡಲು ಐಸ್ ಪ್ಯಾಕ್ ಗಳನ್ನು ನಟಿ ಬಳಸಿದ್ದಾರಂತೆ.. ಆದರೆ ಬೆನ್ನಿನ ಊತ ಹೆಚ್ಚಾದ ಕಾರಣ ಚಿತ್ರೀಕರಣವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  

7 /8

ಬೆನ್ನಿಗೆ ತೀವ್ರ ಪೆಟ್ಟಾಗಿರುವ ಕಾರಣ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ದೀಪಿಕಾ ಸಿಂಗ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.   

8 /8

ದಿಯಾ ಔರ್ ಬಾತಿ ಧಾರಾವಾಹಿ ಮೂಲಕ ನಟಿಯಾಗಿ ವೃತ್ತಿ ಜೀವನ ಆರಂಭಿಸಿದ ದೀಪಿಕಾ.. ಅದೇ ಧಾರಾವಾಹಿಯ ನಿರ್ದೇಶಕ ರೋಹಿತ್ ಗೋಯಲ್ ಅವರನ್ನು ಪ್ರೇಮಾ ವಿವಾಹವಾಗಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ.