Dhanteras 2022: ಕುಬೇರನ ಕೃಪೆಗೆ ಪಾತ್ರರಾಗಲು ಧಂತೇರಸ್‌ನಲ್ಲಿ ಈ ವಸ್ತುಗಳನ್ನು ದಾನ ಮಾಡಿ

Dhanteras 2022: ದೀಪಾವಳಿಯ ಸಂದರ್ಭದಲ್ಲಿ ಧಂತೇರಸ್‌ನಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಕುಬೇರನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಧಂತೇರಸ್‌ನಲ್ಲಿ ಯಾವ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಎಂದು ತಿಳಿಯೋಣ...

Dhanteras 2022: ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲೂ, ನಿರ್ದಿಷ್ಟ ದಿನದಂದು ದಾನ ಮಾಡುವುದರಿಂದ ವಿಶೇಷ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ದೀಪಾವಳಿಯ ಸಂದರ್ಭದಲ್ಲಿ ಧಂತೇರಸ್‌ನಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಕುಬೇರನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಧಂತೇರಸ್‌ನಲ್ಲಿ ಯಾವ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಕಬ್ಬಿಣದ ವಸ್ತುಗಳು: ಧಂತೇರಸ್ ದಿನದಂದು ಕಬ್ಬಿಣವನ್ನು ದಾನ ಮಾಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಕಬ್ಬಿಣವನ್ನು ದಾನ ಮಾಡಿದರೆ, ವ್ಯಕ್ತಿಯ ಜೀವನದಲ್ಲಿ ತಲೆದೋರಿರುವ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಯಾವುದೇ ಕೆಲಸದಲ್ಲಿ ಬರುವ ಅಡೆತಡೆಗಳೂ ದೂರವಾಗುತ್ತವೆ ಎಂಬ ನಂಬಿಕೆಯೂ ಇದೆ.

2 /4

ಪೊರಕೆ ದಾನ : ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಧಂತೇರಸ್ ದಿನದಂದು ಪೊರಕೆಯನ್ನು ದಾನ ಮಾಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ದೇವಸ್ಥಾನಕ್ಕೆ ಅಥವಾ ಯಾವುದೇ ಬಡವರಿಗೆ ಪೊರಕೆಯನ್ನು ದಾನ ಮಾಡುವುದರಿಂದ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಈ ದಿನ ಪೊರಕೆ ದಾನ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.

3 /4

ಧಾನ್ಯ ದಾನ: ಜ್ಯೋತಿಷ್ಯದಲ್ಲಿ ಧಾನ್ಯಗಳ ದಾನದ ವಿಶೇಷ ಮಹತ್ವವನ್ನು ಹೇಳಲಾಗಿದೆ.  ಧಂತೇರಸ್‌ನಲ್ಲಿ ಧಾನ್ಯಗಳನ್ನು ದಾನ ಮಾಡುವುದರಿಂದ ಶುಭ ಫಲ ಸಿಗುತ್ತದೆ.  ಧಂತೇರಸ್ ದಿನದಂದು ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ ಮನೆಯ ಕಣಜಗಳು ಖಾಲಿಯಾಗುವುದಿಲ್ಲ ಎಂಬ ನಂಬಿಕೆ ಇದೆ.

4 /4

ಬಟ್ಟೆ ದಾನ: ಧಂತೇರಸ್ ದಿನದಂದು ಬಡವರಿಗೆ ಅಥವಾ ಅಗತ್ಯ ಇರುವವರಿಗೆ ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಡವರಿಗೆ ವಸ್ತ್ರದಾನ ಮಾಡುವುದರಿಂದ ಯಾವತ್ತೂ ಧನ ಮತ್ತು ಧಾನ್ಯಗಳ ಕೊರತೆಯಾಗುವುದಿಲ್ಲ. ಇದಲ್ಲದೆ, ವ್ಯಕ್ತಿಯು ಸಾಲದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.