Bollywoodನ ಎಲ್ಲಾ ನಟಿಯರನ್ನು ಹಿಂದಿಕ್ಕೆ 2019ರ 'ಮೋಸ್ಟ ಡಿಸೈರೆಬಲ್ ವುಮನ್' ಪಟ್ಟ ಗಿಟ್ಟಿಸಿಕೊಂಡ ದಿಶಾ ಪಾಟ್ನಿ

ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani), ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಹಾಗೂ ಅಲಿಯಾ ಭಟ್ಟ್ ಗಳಂತಹ ನಾಯಕ ನಟಿಯರನ್ನು ಹಿಂದಿಕ್ಕಿ ವರ್ಷ 2019ರ ಮೋಸ್ಟ ಡಿಸೈರೆಬಲ್ ವುಮನ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾಳೆ. 

  • Aug 30, 2020, 17:20 PM IST

ನವದೆಹಲಿ: ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani), ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಹಾಗೂ ಅಲಿಯಾ ಭಟ್ಟ್ ಗಳಂತಹ ನಾಯಕ ನಟಿಯರನ್ನು ಹಿಂದಿಕ್ಕಿ ವರ್ಷ 2019ರ ಮೋಸ್ಟ ಡಿಸೈರೆಬಲ್ ವುಮನ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾಳೆ. ಈ ಪಟ್ಟಿಯಲ್ಲಿ ದಿಶಾ ಮೊದಲ ಸ್ಥಾನದಲ್ಲಿದ್ದಾಳೆ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಬಾಲಿವುಡ್ ಅಂಗಳದಲ್ಲಿ ದೊಡ್ಡ ಹೆಸರು ಮಾಡಿದ ನಟಿಯರಲ್ಲಿ ದಿಶಾ ಕೂಡ ಒಬ್ಬರು. ದಿಶಾ 2019 ರ ಮೋಸ್ಟ ಡಿಸೈರೆಬಲ್ ವುಮನ್-50 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾಳೆ. ಈ ಪಟ್ಟಿಯಲ್ಲಿ ದಿಶಾ, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಹಾಗೂ ಅಲಿಯಾ ಭಟ್ ಗಳಂತಹ ದಿಗ್ಗಜ ನಾಯಕ ನಟಿಯರನ್ನು ಹಿಂದಿಕ್ಕಿದ್ದಾಳೆ.

ದಿಶಾ ಬಳಿಕ ಖ್ಯಾತ ಮಾಡೆಲ್ ಸುಮನ್ ರಾವ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ವರ್ತಿಕ ಸಿಂಗ್, ಕಿಯಾರಾ ಅದ್ವಾನಿ, ಶೃದ್ಧಾ ಕಪೂರ್, ಯಾಮಿ ಗೌತಮ್, ಆದಿತಿ ರಾವ್ ಹೈದರಿ, ಜ್ಯಾಕ್ಲಿನ್ ಫರ್ನಾಂಡಿಸ್, ಶಿವಾನಿ ಜಾಧವ್, ಅಲಿಯಾ ಭಟ್, ತಾರಾ ಸುತಾರಿಯಾ, ಗಾಯತ್ರಿ ಭಾರದ್ವಾಜ್, ಕೃತಿ ಸನನ್ ಇವರುಗಳ ಹೆಸರೂ ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿದೆ.

ಈ ವಿಷಯವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ದಿಶಾ ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಲ್ಲಿ ದಿಶಾ ಪಾಟ್ನಿ ಅವರನ್ನು ಓರ್ವ ಯುಥ್ ಐಕಾನ್ ರೂಪದಲ್ಲಿ ನೋಡಲಾಗುತ್ತದೆ.

1 /8

2 /8

3 /8

4 /8

5 /8

6 /8

7 /8

8 /8