ಅತ್ಯಂತ ದುಬಾರಿ ಐದು ಕಾಫಿಗಳಿವು..! ಬೆಲೆ ಕೇಳಿದರೆ ದಂಗಾಗಬೇಕು

Most Expensive Coffee in the World 2021: ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ  ಕಾಫಿ ಕುಡಿಯುವವರು ಇದ್ದಾರೆ. ಇಂದು ಅಂದರೆ ಅಕ್ಟೋಬರ್ 1 ಕಾಫಿಗೆ ಬಹಳ ವಿಶೇಷವಾದ ದಿನ.

ನವದೆಹಲಿ : Most Expensive Coffee in the World 2021: ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ  ಕಾಫಿ ಕುಡಿಯುವವರು ಇದ್ದಾರೆ. ಇಂದು ಅಂದರೆ ಅಕ್ಟೋಬರ್ 1 ಕಾಫಿಗೆ ಬಹಳ ವಿಶೇಷವಾದ ದಿನ. ಇಂದು ಅಂತರಾಷ್ಟ್ರೀಯ ಕಾಫಿ ದಿನ. ಪ್ರಪಂಚದಲ್ಲಿ ಕೆಲವು ವಿಶೇಷ ರೀತಿಯ ಕಾಫಿಗಳು ಅತ್ಯಂತ ದುಬಾರಿ ವಿಭಾಗದಲ್ಲಿ ಬರುತ್ತವೆ. ಈ ರೀತಿಯ ಕಾಫಿ ಯಾವುದು ಎನ್ನುವುದು ತಿಳಿದಿದೆಯೇ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಓಸ್ಪಿನಾ  ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿದೆ. ಇದು ಕೊಲಂಬಿಯಾದ ಕಾಫಿ. ಇದರ ಬೆಲೆ ಪ್ರತಿ ಪೌಂಡ್‌ಗೆ 1540 ಡಾಲರ್ ಆಗಿದೆ. ಒಂದು ಪೌಂಡ್ 453.592 ಗ್ರಾಂಗೆ ಸಮಾನವಾಗಿರುತ್ತದೆ.  

2 /5

ಬ್ಲಾಕ್ ಐವರಿ ಕಾಫಿ ಒಂದು ವಿಶಿಷ್ಟವಾದ ಕಾಫಿ. ಇದರ ಪ್ರೋಸೆಸ್ ಅನ್ನು ಆನೆಗಳ ಮೂಲಕ ಮಾಡಲಾಗುತ್ತದೆ.  ಕಂಪನಿಯು ತನ್ನ ಆನೆಗಳಿಗೆ ಅರೇಬಿಕಾ ಕಾಫಿ ಬೀಜಗಳನ್ನು ನೀಡುತ್ತದೆ ಮತ್ತು ಅದು ಆನೆಯ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗಿ, ಮಲವಾಗಿ ಹೊರಬರುತ್ತದೆ ಮತ್ತು ನಂತರ ಈ ಕಾಫಿಯನ್ನು ಅದರಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಪ್ರತಿ ಪೌಂಡ್‌ಗೆ  1500 ಡಾಲರ್ .  

3 /5

ಫಿಂಕಾ ಎಲ್ ಇಂಜರ್ಟೊ ಕಾಫಿ ಕೂಡ ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿದೆ. Themanual.com ಪೋರ್ಟಲ್ ಪ್ರಕಾರ, ಇದರ ಬೆಲೆ ಪ್ರತಿ ಪೌಂಡ್‌ಗೆ  500 ಡಾಲರ್ . 

4 /5

ಹಸೆಂಡಾ ಎಸ್ಮೆರಾಲ್ಡಾ ಗೀಶಾ ಕಾಫಿಯನ್ನು ವಿಶ್ವದ ಅತ್ಯಂತ ದುಬಾರಿ ಕಾಫಿಯಲ್ಲಿ ಸೇರಿಸಲಾಗಿದೆ. ಈ ಕಾಫಿಯ ಬೆಲೆ ಪ್ರತಿ ಪೌಂಡ್‌ಗೆ 120 ಡಾಲರ್ .   

5 /5

ಕೋಪಿ ಲುವಾಕ್ ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಕಾಫಿಯಾಗಿದೆ. ಪ್ರಾಣಿಗಳಿಗೆ ಆಹಾರವಾಗಿ  ನೀಡುವ ಮೂಲಕ ಪ್ರೋಸೆಸ್  ಮಾಡಲಾಗುತ್ತದೆ. ಕಂಪನಿಯು ಈ ಕಾಫಿ ಬೀಜಗಳನ್ನು ಬೆಕ್ಕುಗಳಿಗೆ ನೀಡುತ್ತದೆ ಮತ್ತು ಈ ಬೀನ್ಸ್ ಅನ್ನು ಅವುಗಳ ಮಲದಿಂದ ಸಂಸ್ಕರಿಸಲಾಗುತ್ತದೆ. ನಂತರ ಕಾಫಿ  ತಯಾರಿಸಲಾಗುತ್ತದೆ. ಇದರ ಬೆಲೆ ಪ್ರತಿ ಪೌಂಡ್‌ಗೆ 600 ಡಾಲರ್.