ಹಣ್ಣುಗಳ ಸೇವನೆ ವೇಳೆ ಆಗದಿರಲಿ ಈ ತಪ್ಪುಗಳು, ಹಣ್ಣುಗಳ ಸೇವನೆ ಸರಿಯಾದ ವಿಧಾನ ತಿಳಿಯಿರಿ

ಹಣ್ಣುಗಳನ್ನು ಸರಿಯಾಗಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸದಿದ್ದರೆ, ಅದು ಪೂರ್ಣ ಪ್ರಯೋಜನಗಳನ್ನು ನೀಡುವುದಿಲ್ಲ. 

ನವದೆಹಲಿ : ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ.  ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡಾ.  ಆದರೆ ಹಣ್ಣುಗಳನ್ನು ತಿನ್ನಲು ಸರಿಯಾದ ಮಾರ್ಗವನ್ನು ಅನುಸರಿಸುವುದು ಕೂಡಾ ಅಷ್ಟೇ ಮುಖ್ಯ. ಹಣ್ಣುಗಳನ್ನು ಸರಿಯಾಗಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸದಿದ್ದರೆ, ಅದು ಪೂರ್ಣ ಪ್ರಯೋಜನಗಳನ್ನು ನೀಡುವುದಿಲ್ಲ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸಿಪ್ಪೆಗಳೊಂದಿಗೆ ಹಣ್ಣುಗಳನ್ನು ತಿನ್ನಬೇಕೆ ಅಥವಾ ಸಿಪ್ಪೆ ಸುಲಿದ ನಂತರ ಅವುಗಳನ್ನು ತಿನ್ನಬೇಕೇ ಎಂಬ ಗೊಂದಲ ಹಲವರ ಮನಸ್ಸಿನಲ್ಲಿ ಇರುತ್ತದೆ. ತಜ್ಞರ ಪ್ರಕಾರ ಹಣ್ಣುಗಳನ್ನು ಯಾವಾಗಲೂ ಸಿಪ್ಪೆ ಸಮೇತ ತಿನ್ನಬೇಕು. ಇದರಲ್ಲಿ ಫೈಬರ್ ಸೇರಿದಂತೆ  ಅನೇಕ ಪೋಷಕಾಂಶಗಳಿರುತ್ತವೆ.

2 /5

ಸೇಬು ಪೇರಳೆ ಮುಂತಾದ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸಿಪ್ಪೆ ಸಮೇತ ಸೇವಿಸಬಹುದು. ಆದರೆ ಕಿತ್ತಳೆ ಹಣ್ಣನ್ನು ಏನು ಮಾಡಬೇಕು? ಈ ಬಗ್ಗೆ, ತಜ್ಞರು ಹೇಳುವುದೇನೆಂದರೆ ಕಿತ್ತಳೆ ಹಣ್ಣನ್ನು ಅದರ ಫೈಬರ್ ಯುಕ್ತ ಸಿಪ್ಪೆಯೊಂದಿಗೆ ಸೇವಿಸಬೇಕು. ಕಿತ್ತಳೆಯ  ದಪ್ಪ ಸಿಪ್ಪೆ ತೆಗೆದ ನಂತರ ಸಿಗುವ ಮೊಗ್ಗುಗಳ ಮೇಲಿನ ಬಿಳಿ ನಾರಿನ ಸಿಪ್ಪೆಯನ್ನು ತಿನ್ನಬೇಕು. ಇದನ್ನು ತೆಗದು ಬಿಸಾಡುವ ಕ್ರಮ ಸರಿಯಲ್ಲ.   

3 /5

ಬಾಳೆಹಣ್ಣನ್ನು ಕೂಡಾ ಅದರ ಸಿಪ್ಪೆಯೊಂದಿಗೆ ತಿನ್ನಬೇಕು. ಏಕೆಂದರೆ ಇದರಲ್ಲಿ ವಿಟಮಿನ್ ಬಿ 12, ಪೊಟ್ಯಾಸಿಯಮ್-ಮೆಗ್ನೀಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳಿರುತ್ತವೆ. ಆದರೆ ಸಿಪ್ಪೆಯೊಂದಿಗೆ ಬಾಳೆಹಣ್ಣು ತಿನ್ನುವ ಮೊದಲು, ಅದನ್ನು ಚೆನ್ನಾಗಿ ಸ್ವಚ್ಚಗೊಳಿಸುವುದನ್ನು ಮರೆಯಬೇಡಿ.   

4 /5

ಹಣ್ಣುಗಳನ್ನು ತಿಂದರೆ ಹೇಗೆ ಪೋಷಕಾಂಶಗಳು ಸಿಗುತ್ತವೆಯೋ ಅವುಗಳ ಸಿಪ್ಪೆಗಳು ಕೂಡಾ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿ. ಆದ್ದರಿಂದ, ಸಿಪ್ಪೆಯೊಂದಿಗೆ ಹೆಚ್ಚಿನ ಹಣ್ಣುಗಳನ್ನು ಸೇವಿಸಿ. ಇದಲ್ಲದೆ ಕ್ಯಾರೆಟ್, ಸೌತೆಕಾಯಿ, ಮೂಲಂಗಿ ಇತ್ಯಾದಿಗಳನ್ನು ಸಹ ಸಿಪ್ಪೆಯೊಂದಿಗೆ ತಿನ್ನಬೇಕು.

5 /5

ಸಿಪ್ಪೆ ಸಮೇತ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ, ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು. ಮತ್ತು ಶೀಘ್ರದಲ್ಲೇ ತೂಕ ಕಡಿಮೆಯಾಗಲು ಕೂಡಾ ಇದು ಸಹಕಾರಿ. ಆದರೆ  ಸಿಪ್ಪೆ ಸಹಿತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮೊದಲು, ಅವುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ