Pandya Brothers Luxury Life : ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಐಷಾರಾಮಿ ಮನೆ ಹೇಗಿದೆ ನೋಡಿ : ಇವರ ಬಂಗಲೆಯಲ್ಲಿ ಇವೇ ಈ ಎಲ್ಲ ಸೌಲಭ್ಯಗಳು!

ಈ ಇಬ್ಬರು ಸಹೋದರರು ಮುಂಬೈನಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರ ಈ ಫ್ಲಾಟ್ 8 ಬೆಡ್ ರೂಮ್ ಹೊಂದಿದೆ.

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅತಿ ಕಡಿಮೆ ಸಮಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಂಡವರು. ಈ ಇಬ್ಬರು ಸಹೋದರರು ಮುಂಬೈನಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರ ಈ ಫ್ಲಾಟ್ 8 ಬೆಡ್ ರೂಮ್ ಹೊಂದಿದೆ.

 

1 /5

ಪಾಂಡ್ಯ ಬ್ರದರ್ಸ್ ಕಠಿಣ ಪರಿಶ್ರಮದ ಯಶಸ್ಸು : ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು, ಮೊದಲು ಅವರು ವಡೋದರಾದ ಒಂದು ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅವರ ಕಠಿಣ ಪರಿಶ್ರಮವೇ ಇಂದು ಅವರನ್ನು ಗುಜರಾತಿನಿಂದ ಮುಂಬೈನ ಐಷಾರಾಮಿ ಮನೆಗೆ ಕರೆದೊಯ್ದಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

2 /5

ಮನೆಯ ಬಾಲ್ಕನಿಯಿಂದ ನೋಡಬಹುದು ಅರೇಬಿಯನ್ ಸಮುದ್ರದ ಸುಂದರ ದೃಶ್ಯ : ಪಾಂಡ್ಯ ಬ್ರದರ್ಸ್ ಮನೆಯಿಂದ ಅರೇಬಿಯನ್ ಸಮುದ್ರದ ಒಂದು ಸುಂದರ ದೃಶ್ಯ ಗೋಚರಿಸುತ್ತದೆ. ಇದರೊಂದಿಗೆ, ಅವರ ಅವರ ಮನೆಯಲಿ ಜಿಮ್ ಏರಿಯಾ ಇದೆ. ಅಲ್ಲಿ ಇಬ್ಬರೂ ವ್ಯಾಯಾಮ ಮಾಡುತ್ತಾರೆ. ಜಿಮ್ ಹೊರತಾಗಿ, ಖಾಸಗಿ ಥಿಯೇಟರ್, ಸ್ಕೈ ಲೌಂಜ್, ದೊಡ್ಡ ಈಜುಕೊಳ, ಒಳಾಂಗಣ ಗೇಮಿಂಗ್ ವಲಯ ಕೂಡ ಇದೆ.

3 /5

ಶೀಘ್ರದಲ್ಲೇ ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಇಬ್ಬರು ಸಹೋದರರು : ಪಾಂಡ್ಯ ಬ್ರದರ್ಸ್ ಅಪಾರ್ಟ್ ಮೆಂಟ್ ನಲ್ಲಿ ಖಾಸಗಿ ಸಿನಿಮಾ ಥಿಯೇಟರ್ ಕೂಡ ಇದೆ. ಮೊದಲು ಈ ಸಹೋದರರಿಬ್ಬರೂ ವಡೋದರಾದಲ್ಲಿ ವಾಸಿಸುತ್ತಿದ್ದರು, ಶೀಘ್ರದಲ್ಲೇ ಈ ಸಹೋದರರಿಬ್ಬರೂ ತಮ್ಮ ಕುಟುಂಬದೊಂದಿಗೆ ಮುಂಬೈಗೆ ಸ್ಥಳಾಂತರಗೊಳ್ಳಬಹುದು ಎಂಬ ವರದಿಗಳಿವೆ.

4 /5

ಅಪಾರ್ಟ್ಮೆಂಟ್ನಲ್ಲಿದೆ ಜಿಮ್ ಮತ್ತು ಸ್ವಿಮಿಂಗ್ ಫೂಲ್ : ಡಿಎನ್‌ಎ ವರದಿಯ ಪ್ರಕಾರ, ಪಾಂಡ್ಯ ಬ್ರದರ್ಸ್‌ನ ಈ ಫ್ಲಾಟ್ ಮುಂಬೈನ ರುಸ್ತೋಮ್‌ಜಿ ಪ್ಯಾರಾಮೌಂಟ್‌ನಲ್ಲಿದೆ. ಬಾಲಿವುಡ್ ನಟರಾದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಕೂಡ ಈ ಬಿಲ್ಡಿಂಗ್ ನಲ್ಲಿ ವಾಸಿಸುತ್ತಿದ್ದಾರೆ. ಪಾಂಡ್ಯ ಬ್ರದರ್ಸ್ ಅಪಾರ್ಟ್ಮೆಂಟ್ ಜಿಮ್, ಗೇಮಿಂಗ್ ಏರಿಯಾ ಮತ್ತು ಖಾಸಗಿ ಈಜುಕೊಳವನ್ನು ಸಹ ಹೊಂದಿದೆ.

5 /5

ಕಡಿಮೆ ಸಮಯದಲ್ಲಿ ಸಾಕಷ್ಟು ಸಂಪತ್ತನ್ನು ಗಳಿಸಿದ ಪಾಂಡ್ಯ ಬ್ರದರ್ಸ್ : ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ವಿಶ್ವ ಕ್ರಿಕೆಟ್ ನಲ್ಲಿ, ಈ ಇಬ್ಬರೂ ಸಹೋದರರು ಬಹಳ ಕಡಿಮೆ ಸಮಯದಲ್ಲಿ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಪಡೆದಿದ್ದರೆ. ಈ ಸಹೋದರರ ಈ ಐಷಾರಾಮಿ ಮನೆಯನ್ನು 3838 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.