ಸಕ್ಕರೆ/ಸಿಹಿ ಸೇವನೆಯಿಂದ ಸ್ಥೂಲಕಾಯತೆ, ಕೊಬ್ಬಿನ ಯಕೃತ್ತು, ಟೈಪ್ -2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ.
ಸಿಹಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರಲು ಆರಂಭಿಸುತ್ತದೆ. ಆದರೆ, ಅತಿಯಾದ ಸಿಹಿ ಸೇವನೆಯು ಕೇವಲ ಡಯಾಬಿಟಿಸ್ ಮಾತ್ರವಲ್ಲ ಹಲವು ರೋಗಗಳ ಮೂಲ ಎಂದು ನಿಮಗೆ ತಿಳಿದೇ ಇದೆ. ಆದರೆ, ಕೇವಲ 30 ದಿನ ನೀವು ಸಕ್ಕರೆಯನ್ನು/ಸಿಹಿಯನ್ನು ತಿನ್ನದಿದ್ದರೆ ಅದ್ಭುತವೇ ಸಂಭವಿಸಲಿದೆ. 30 ದಿನಗಳವರೆಗೆ 'ನೋ ಶುಗರ್ ಚಾಲೆಂಜ್' ಅನುಸರಿಸಿದರೆ ಐದು ಕಾಯಿಲೆಗಳಿಂದ ಪರಿಹಾರ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
30 ದಿನಗಳವರೆಗೆ 'ನೋ ಶುಗರ್ ಚಾಲೆಂಜ್' ಅನುಸರಿಸಿದರೆ ಅಂದರೆ ನೀವು ಪೂರ್ಣ ಒಂದು ತಿಂಗಳವರೆಗೆ ಸಕ್ಕರೆಯನ್ನು ಉಪಯೋಗಿಸದಿದ್ದರೆ ಡಯಾಬಿಟಿಸ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು.
ಅತಿಯಾದ ಸಿಹಿ ಸೇವನೆಯು ಹೃದಯದ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ವಾಸ್ತವವಾಗಿ, ಸಕ್ಕರೆ ಕೊಬ್ಬಾಗಿ ಬದಲಾದಾಗ, ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ರಕ್ತದೊತ್ತಡ ಹೆಚ್ಚಾಗುತ್ತದೆ, ಅಂದರೆ ರಕ್ತವು ಹೃದಯವನ್ನು ತಲುಪಲು ಬಲವನ್ನು ಉಂಟುಮಾಡುತ್ತದೆ, ಇದರಿಂದಾಗಿ ಹೃದಯಾಘಾತ ಸಂಭವಿಸುತ್ತದೆ. ಹಾಗಾಗಿ, 30 ದಿನಗಳವರೆಗೆ 'ನೋ ಶುಗರ್ ಚಾಲೆಂಜ್' ಅನುಸರಿಸಿದರೆ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ.
ಯಕೃತ್ ನಮ್ಮ ದೇಹದ ಪ್ರಮುಖ ಅಂಗ. ಅತಿಯಾದ ಸಿಹಿ ಸೇವನೆಯು ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸಕ್ಕರೆಯಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳುವುದು ತುಂಬಾ ಅಗತ್ಯ.
ಸಿಹಿ, ಚಾಕೊಲೇಟ್ ಸೇವನೆಯಿಂದ ಹಲ್ಲು ಹುಳುಕಾಗುತ್ತದೆ ಎಂದು ನಿಮಗೆ ತಿಳಿದೇ ಇದೆ. ಹಾಗಾಗಿ ಸಕ್ಕರೆಯ ಅತಿಯಾದ ಬಳಕೆಯನ್ನು ನಿಲ್ಲಿಸಿದರೆ ಕುಳಿಗಳು, ವಸಡು ಕಾಯಿಲೆಗಳು ಮತ್ತು ಕೆಟ್ಟ ಉಸಿರಾಟದ ಅಪಾಯದಿಂದ ನಿಮ್ಮನ್ನು ದೂರ ಉಳಿಯುವಂತೆ ಮಾಡುತ್ತದೆ.
ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರು ಕೇವಲ ಜಂಕ್ ಫುಡ್ಸ್ ಮಾತ್ರವಲ್ಲ ಸಿಹಿ ಆಹಾರಗಳಿಂದಲೂ ದೂರ ಉಳಿಯುವುದು ತುಂಬಾ ಮುಖ್ಯ. ನೀವು ಬರೀ ಒಂದು ತಿಂಗಳು ಸಕ್ಕರೆ/ಸಿಹಿಯನ್ನು ಸೇವಿಸದಿದ್ದರೆ ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲೂ ನಿರೀಕ್ಷಿತ ಫಲಿತಾಂಶವನ್ನು ನೀವು ಕಾಣಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.