ನಟ ಪ್ರಭಾಸ್ ಮೊದಲ ಸಿನಿಮಾದ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಇಷ್ಟೇನಾ ಅಂತೀರಾ..!

Prabhas remuneration : ಕಲ್ಕಿ 2898 ಎಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಲ್ಕಿ ಹಿಟ್ ಟಾಕ್‌ನೊಂದಿಗೆ ಪ್ರಭಾಸ್ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಮತ್ತೊಮ್ಮೆ ಗೆದ್ದಿದ್ದಾರೆ. ಈ ಸಿನಿಮಾ ರಿಲೀಸ್‌ ಆದ ಎಲ್ಲಾ ಸಿನಿಮಾಗಳು ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿವೆ.. ಇದೇ ವೇಳೆ ನೆಟ್ಟಿಗರು ಪ್ರಭಾಸ್ ಮೊದಲ ಸಿನಿಮಾ, ಅದಕ್ಕೆ ಅವರು ಪಡೆದ ಸಂಭಾವನೆ ಸೇರಿ ಅವರ ಹಿಸ್ಟರ್‌ ಹುಡುಕುತ್ತಿದ್ದಾರೆ..
 

1 /8

ಯಂಗ್ ರೆಬಲ್ ಸ್ಟಾರ್ ಪ್ರಭಾಸ್.. ಈ ಹೆಸರು ಈಗ ಭಾರತದಾದ್ಯಂತ ಜನಪ್ರಿಯವಾಗಿದೆ. ಬಾಹುಬಲಿ ಫ್ರಾಂಚೈಸ್‌ನೊಂದಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್, ಸಲಾರ್‌ನೊಂದಿಗೆ ದೊಡ್ಡ ಹಿಟ್ ಗಳಿಸಿದರು.  

2 /8

ಸಧ್ಯ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಮೂಲಕ ಡಾರ್ಲಿಂಗ್‌ ಮತ್ತೊಂದು ದೊಡ್ಡ ಹಿಟ್ ಗಳಿಸಲು ರೆಡಿಯಾಗಿದ್ದಾರೆ. ಆದಿಪುರುಷ ಸೋಲಿನ ನಂತರ, ಪ್ರಭಾಸ್‌ ಸಲಾರ್ ಭಾಗ 1 ಮತ್ತು ಕಲ್ಕಿ ಚಲನಚಿತ್ರಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್‌ಗಳನ್ನು ಹೊಡೆದಿದ್ದಾರೆ.   

3 /8

ಕಲ್ಕಿ 2898 ADಯ ಹಿಟ್ ಟಾಕ್‌ನೊಂದಿಗೆ, ಪ್ರಭಾಸ್ ಪಾನ್ ವರ್ಲ್ಡ್‌  ಸ್ಟಾರ್ ಆಗುವುದು ಫಿಕ್ಸ್‌. ಅದರಲ್ಲೂ ಸಿನಿಮಾ ನೋಡಿದವರು ಸಿನಿಮಾದ ಕ್ಲೈಮ್ಯಾಕ್ಸ್ ನೆಕ್ಸ್ಟ್‌ ಲೆವೆಲ್‌ ಎನ್ನುತ್ತಿದ್ದಾರೆ..

4 /8

ಬಾಲಿವುಡ್ ಹೀರೋಗಳಿಗೆ ಯಾವುದೇ ಕಡಿಮೆ ಮಾಡದೆ ನಿರ್ಮಾಪಕರು ಪ್ರಭಾಸ್‌ಗೆ ಭಾರಿ ಮೊತ್ತದ ಸಂಭಾವನೆ ನೀಡಿದ್ದಾರೆ ಎಂಬ ವರದಿಗಳಿವೆ. ಸಲಾರ್ ಭಾಗ 1 ಕ್ಕೆ ಸುಮಾರು ರೂ. 120 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕಲ್ಕಿ ಚಿತ್ರಕ್ಕೆ ರೂ. 150 ಕೋಟಿ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.  

5 /8

ಅದೇನೇ ಇರಲಿ, ಅತಿ ಹೆಚ್ಚು ಸಂಭಾವನೆ ಪಡೆಯುವ ತೆಲುಗು ಹೀರೋಗಳಲ್ಲಿ ಪ್ರಭಾಸ್ ಮುಂಚೂಣಿಯಲ್ಲಿದ್ದಾರೆ. ಪ್ರಭಾಸ್ ಕೆರಿಯರ್ ಮೊದಲ ಸಿನಿಮಾ ʼಈಶ್ವರ್‌ʼ ಗೆ ಅವರು ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?  

6 /8

ಪ್ರಭಾಸ್ ಮತ್ತು ಶ್ರೀದೇವಿ ನಾಯಕರಾಗಿ ಜಯಂತ್ ಸಿ. ಪರಾಂಜಿ ನಿರ್ದೇಶನದ ಚಿತ್ರ ಈಶ್ವರ. ಈ ಚಲನಚಿತ್ರವು ನವೆಂಬರ್ 11, 2002 ರಂದು ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಪ್ರಭಾಸ್ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು.  

7 /8

ಪ್ರಭಾಸ್ ತಮ್ಮ ಮೊದಲ ಚಿತ್ರಕ್ಕೆ ಕೇವಲ ರೂ. 4 ಲಕ್ಷ ಮಾತ್ರ ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಹುಬಲಿ ಚಿತ್ರದೊಂದಿಗೆ ರೂ. 25 ಕೋಟಿ ತಲುಪಿದ ಪ್ರಭಾಸ್.. ಈಗ ಒಟ್ಟಾಗಿ ರೂ. 150 ಕೋಟಿ ತಲುಪಿದೆ.   

8 /8

ಕಲ್ಕಿ ಚಿತ್ರದ ನಂತರ ಪ್ರಭಾಸ್ ಸಂಭಾವನೆ ಗಗನಕ್ಕೇರಿದರೂ ಆಶ್ಚರ್ಯವಿಲ್ಲ. ಪ್ರಭಾಸ್ ಸಿನಿಮಾದ ಕಲೆಕ್ಷನ್ ಗಳ ಸುರಿಮಳೆಯಾಗುತ್ತಿರುವುದರಿಂದ ನಿರ್ಮಾಪಕರು ಕೂಡ ಪ್ರಭಾಸ್ ಗೆ ಭಾರಿ ಮೊತ್ತ ನೀಡಲು ರೆಡಿಯಾಗಿದ್ದಾರೆ..