Sapthami Gowda : ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಮುಂದಿನ ಸಿನಿಮಾ ಇದೇ ನೋಡಿ..

Saptami Gowda : ಕಾಂತಾರ ಕ್ರೇಜ್ ದಿನ ಕಳೆದಂತೆ ಹೆಚ್ಚಾಗ್ತಿದೆ. ಅದರಲ್ಲೂ ಲೀಲಾ ಮಾಯೆ ಮಾತ್ರ ಜನರನ್ನು ಆವರಿಸುತ್ತಲೇ ಇದೆ. ಮೂಗುತಿ ಸುಂದರಿ ಸಪ್ತಮಿ ಗೌಡ ಕರಾವಳಿ ಹುಡುಗಿ ಆಗಿ ಜನರ ಮನಗೆದ್ದಿದ್ದಾರೆ. ಇದೀಗ ಕಾಂತಾರ ಬಳಿಕ ಅವರ ಲಕ್‌ ಬದಲಾಗಿದ್ದು, ಸಾಲು ಸಾಲು ಸಿನಿಮಾಗಳ ಆಫರ್‌ ಬಂದಿವೆಯಂತೆ. 

Saptami Gowda next movie : ಕಾಂತಾರ ಕ್ರೇಜ್ ದಿನ ಕಳೆದಂತೆ ಹೆಚ್ಚಾಗ್ತಿದೆ. ಅದರಲ್ಲೂ ಲೀಲಾ ಮಾಯೆ ಮಾತ್ರ ಜನರನ್ನು ಆವರಿಸುತ್ತಲೇ ಇದೆ. ಮೂಗುತಿ ಸುಂದರಿ ಸಪ್ತಮಿ ಗೌಡ ಕರಾವಳಿ ಹುಡುಗಿ ಆಗಿ ಜನರ ಮನಗೆದ್ದಿದ್ದಾರೆ. ಸಪ್ತಮಿ ಗೌಡ ಅವರು ಪ್ರಸ್ತುತ ತಮ್ಮ ಬ್ಲಾಕ್‌ಬಸ್ಟರ್ ಚಲನಚಿತ್ರ ಕಾಂತಾರದ ಅದ್ಭುತ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದು ದೇಶಾದ್ಯಂತದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಕಾಂತಾರ ಬಳಿಕ ಅವರ ಲಕ್‌ ಬದಲಾಗಿದ್ದು, ಸಾಲು ಸಾಲು ಸಿನಿಮಾಗಳ ಆಫರ್‌ ಬಂದಿವೆಯಂತೆ.

1 /4

ಇತ್ತೀಚಿನ ಬಝ್ ಪ್ರಕಾರ, ಸಪ್ತಮಿ ಗೌಡ ಅವರು ತಮ್ಮ ಮುಂಬರುವ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರಂತೆ.   

2 /4

ಸಪ್ತಮಿ ಮುಂದೆ ಧನಂಜಯ ಮತ್ತು ರಮ್ಯಾ ಅವರ ಬಹು ನಿರೀಕ್ಷಿತ ಚಿತ್ರ ಉತ್ತರಕಾಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಹ ಕೆಲವು ಊಹಾಪೋಹಗಳಿವೆ.   

3 /4

ಸಪ್ತಮಿ ಗೌಡ ಇನ್ನೂ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಕಾಂತಾರ ಯಶಸ್ಸಿನ ನಂತರ ಹಿಂದಿನ ಸಂದರ್ಶನವೊಂದರಲ್ಲಿ, ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದೇನೆ. ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದರು.  

4 /4

ಚಿತ್ರದ ಶೀರ್ಷಿಕೆ, ಪೋಷಕ ಪಾತ್ರ, ಕಥಾವಸ್ತು ಮತ್ತು ಬಿಡುಗಡೆಯ ದಿನಾಂಕ ಸೇರಿದಂತೆ ಚಿತ್ರದ ವಿವರಗಳು ತಿಳಿದಿಲ್ಲ ಮತ್ತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.