ಮದ್ಯದ ದೊರೆ ವಿಜಯ್‌ ಮಲ್ಯ ಮಗಳನ್ನು ನೋಡಿದ್ದೀರಾ? ಅಪ್ಪನಂತೇ ಈಕೆ ಕೂಡ ಪ್ರಖ್ಯಾತ ಉದ್ಯಮಿ... ಬೆಂಗಳೂರಿನಲ್ಲೇ ಇದೆ ಈ ಸುಂದರಿಯ ಪ್ರತಿಷ್ಠಿತ ಉದ್ಯಮ

Vijay Mallya step daughter Laila Mallya: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾವಿರಾರು ಕೋಟಿ ಸಾಲ ಪಡೆದು ವಂಚನೆ ಆರೋಪ ಎದುರಿಸಿ ಇದೀಗ ಲಂಡನ್‌ಗೆ ಪಲಾಯನ ಮಾಡಿರುವ ಕಿಂಗ್‌ ಫಿಷರ್ ಏರ್‌ ಲೈನ್ಸ್ ಒಡೆಯ, ಮದ್ಯದ ದೊರೆ ವಿಜಯ್ ಮಲ್ಯ  ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಮೊದಲು ಖ್ಯಾತಿ ಪಡೆದು ಇದೀಗ ಕುಖ್ಯಾತಿ ಪಡೆದ ಈ ಉದ್ಯಮಿಗೆ ಮೂವರು ಹೆಣ್ಣುಮಕ್ಕಳು, ಅದರಲ್ಲಿ ಒಬ್ಬಳು ಫ್ಯಾಷನ್‌ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾವಿರಾರು ಕೋಟಿ ಸಾಲ ಪಡೆದು ವಂಚನೆ ಆರೋಪ ಎದುರಿಸಿ ಇದೀಗ ಲಂಡನ್‌ಗೆ ಪಲಾಯನ ಮಾಡಿರುವ ಕಿಂಗ್‌ ಫಿಷರ್ ಏರ್‌ ಲೈನ್ಸ್ ಒಡೆಯ, ಮದ್ಯದ ದೊರೆ ವಿಜಯ್ ಮಲ್ಯ  ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಮೊದಲು ಖ್ಯಾತಿ ಪಡೆದು ಇದೀಗ ಕುಖ್ಯಾತಿ ಪಡೆದ ಈ ಉದ್ಯಮಿಗೆ ಮೂವರು ಹೆಣ್ಣುಮಕ್ಕಳು, ಅದರಲ್ಲಿ ಒಬ್ಬಳು ಫ್ಯಾಷನ್‌ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

2 /7

ಮದ್ಯದ ದೊರೆ ವಿಜಯ್ ಮಲ್ಯ ಅವರ ಮಲಮಗಳ ಹೆಸರು ಲೈಲಾ ಮಲ್ಯ. ಲೈಲಾ ಅವರನ್ನು ಹೊರತುಪಡಿಸಿ, ಮಲ್ಯಗೆ ಇಬ್ಬರು ಪುತ್ರಿಯರಿದ್ದು ಅವರ ಹೆಸರು ಹೆಸರು ಲಿಯಾನಾ ಮತ್ತು ತಾನ್ಯಾ.  

3 /7

ವಿಜಯ್ ಮಲ್ಯ ತನ್ನ ಮೊದಲ ಪತ್ನಿ ಸಮೀರಾಳಿಂದ ಬೇರ್ಪಟ್ಟ ನಂತರ ಬೆಂಗಳೂರಿನಲ್ಲಿ ರೇಖಾ ಎಂಬವರನ್ನು ವಿವಾಹವಾದರು. ರೇಖಾ ಅವರ ಮೊದಲ ಮದುವೆ ಶಾಹಿದ್ ಮೆಹಮೂದ್ ಜೊತೆ ಆಗಿತ್ತು. ಆ ಮದುವೆಯಿಂದ ರೇಖಾಗೆ ಇಬ್ಬರು ಮಕ್ಕಳಿದ್ದರು. ಒಬ್ಬ ಮಗ ಮತ್ತು ಒಬ್ಬ ಮಗಳು. ಮಗಳ ಹೆಸರು ಲೈಲಾ ಮತ್ತು ಮಗನ ಹೆಸರು ಕಬೀರ್ ಮಹಮೂದ್. ನಂತರ ವಿಜಯ್ ಮಲ್ಯ ಲೈಲಾಳನ್ನು ದತ್ತು ಪಡೆದರು.  

4 /7

ಲೈಲಾ ಮಲ್ಯ ಅವರು ಹೂಡಿಕೆ ಬ್ಯಾಂಕರ್ (Investment banker) ಸಮರ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಲೈಲಾ ತನ್ನ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್ನಿಂದ ಪಡೆದರೆ, ಆ ನಂತರ ಅವರು ಮ್ಯಾಸಚೂಸೆಟ್ಸ್‌ʼನ ವಾಲ್ಥಮ್‌ನ ಬೆಂಟ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಇದರ ನಂತರ ಲೈಲಾ ಅಧ್ಯಯನಕ್ಕಾಗಿ ನ್ಯೂಯಾರ್ಕ್‌ನ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಹೋದರು.  

5 /7

ಲೈಲಾ ಮಲ್ಯ ಆಭರಣ ವಿನ್ಯಾಸಕಿ. ತಮ್ಮ ಉತ್ಪನ್ನಗಳನ್ನು ಬೆಂಗಳೂರಿನ ಕಹ್ವಾ ಹೆಸರಿನ ಲೈಫ್‌ಸ್ಟೈಲ್ ಸ್ಟೋರ್‌ಗೆ ಹೊರಗುತ್ತಿಗೆ ನೀಡುತ್ತಾರೆ. ಕುತೂಹಲಕಾರಿಯಾಗಿ, ಲಲಿತ್ ಮೋದಿ ಅವರೊಂದಿಗೆ ಕೆಲಸ ಮಾಡುವಾಗ ಲೈಲಾ ಮಲ್ಯ ಅವರ ಹೆಸರು ಐಪಿಎಲ್ ವಿವಾದಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.  

6 /7

ಅಷ್ಟೇ ಅಲ್ಲದೆ, ಲೈಲಾ ಮತ್ತು ಲಲಿತ್ ಮೋದಿ ನಡುವೆ ಸಂಬಂಧವಿದೆ ಎಂಬ ಊಹಾಪೋಹ ಹಬ್ಬಲು ಪ್ರಾರಂಭಿಸಿತು. ಅದಾದ ಬಳಿಕ ಕೆಲಸ ತ್ಯಜಿಸಿ, ಮತ್ತೆ ಫ್ಯಾಶನ್ ಲೋಕಕ್ಕೆ ತೆರಳಿದರು.  

7 /7

ಮಲ್ಯ ಅವರು ಮಾರ್ಚ್ 2, 2016 ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈನ ವಿಶೇಷ ನ್ಯಾಯಾಲಯ ಮಲ್ಯ ಅವರನ್ನು ಪರಾರಿಯಾಗಿರುವುದಾಗಿ ಘೋಷಿಸಿದೆ. ಮಲ್ಯ ಅವರ ಪಾಸ್‌ಪೋರ್ಟ್ ಕೂಡ ರದ್ದಾಗಿದೆ. ಭಾರತದಲ್ಲಿ ಮಲ್ಯ ಅವರ ಹಲವು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.