• May 09, 2024, 16:41 PM IST
1 /6

ಸೌತ್‌ ಸಿನಿರಂಗದ ಸುಂದರಿ ನಟಿ ನಭಾ ನತೇಶ್‌ ಸದಾ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್‌ ಆಗಿರುವ, ಸದ್ಯ ಚಾರ್ಲಿ ಚಾಪ್ಲಿನ್ ಲುಕ್‌ನಲ್ಲಿ ಹೊಸ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

2 /6

ಕನ್ನಡದ ನಟಿ ನಭಾ ನತೇಶ್‌ ಫೋಟೋಗಳಲ್ಲಿ ಬಿಳಿ ಶರ್ಟ್ ಮತ್ತು ಮೇಲೆ ಕಪ್ಪು ಬ್ಲೇಜರ್ ಧರಿಸಿ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಟೋಪಿ ಹಾಕಿಕೊಂಡು ವಿಭಿನ್ನ ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.  

3 /6

ನಟಿ ನಭಾ ನತೇಶ್ ಕ್ಯಾಮೆರಾ ಮುಂದೆ ಕಾಮಿಡಿ ಲುಕ್‌ನಲ್ಲಿ ಪೋಸ್  ನೀಡುತ್ತಾ ತಮ್ಮ ಫ್ಯಾನ್ಸ್‌ಗಳನ್ನು ನಗಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ.  

4 /6

ನಭಾ ನತೇಶ್‌ ಚಾರ್ಲಿ ಚಾಪ್ಲಿನ್ ಅವತಾರದಲ್ಲಿರುವ ಪೋಸ್ಟ್‌ಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.

5 /6

ಸ್ಯಾಂಡಲ್‌ವುಡ್‌ ನಟಿ ನಭಾ ನತೇಶ್‌ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡುವುದರ ಜೊತೆಗೆ ಚಾರ್ಲಿ ಚಾಪ್ಲಿನ್ ಅವರನ್ನು ಹೊಗಳುತ್ತಾ ಇದನ್ನು ವಿಶ್ವ ನಗುವಿನ ದಿನದಂದು ಹಂಚಿಕೊಂಡಿದ್ದಾರೆ.

6 /6

ನಟಿ ನಭಾ 'ವಜ್ರಕಾಯ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು, ತದನಂತರ ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.