Kannada Serial Actress Swathi: ಸಾಕಷ್ಟು ಧಾರವಾಹಿಗಳ ಮೂಲಕ ಗುರಿತಿಸಿಕೊಂಡ ನಟಿ ಸ್ವಾತಿ ಹೆಚ್ಚಾಗಿ ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.. ಅನೀರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಸಿರೀಯಲ್ ಪ್ರಿಯರ ನೆಚ್ಚಿನ ನಟಿ ಎಂದರೇ ತಪ್ಪಾಗುವುದಿಲ್ಲ..
ಶುಭವಿವಾಹ, ಪುಟ್ಟಗೌರಿ, ಗಂಗಾ, ರಂಗನಾಯಕಿ ಸಿರೀಯಲ್‌ಗಳ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದ ನಟಿ ಸ್ವಾತಿ.. ಹೆಚ್ಚಾಗಿ ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಗುರುತಿಸಿಕೊಂಡ ಇವರು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ..
ಇನ್ನು ನಟಿ ಸ್ವಾತಿ ಕಿರಿತೆರೆಗೆ ಪ್ರವೇಶಿಸುವ ಮುನ್ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.. ಇವರು ಅನೀರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ..
ದಂಡು ಪಾಳ್ಯ, ವಾರಸ್ಥಾರ, ಉಡ ಹೀಗೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ಈಗಲೂ ಅವರು ಯಂಗ್ ಆಗಿ ಕಾಣುತ್ತಾರೆ..
ಇದೀಗ ಕಿರುತೆರೆಯಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಸ್ವಾತಿ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಫೇವರೆಟ್ ಆಗಿದ್ದಾರೆ.. ಇವರಿಗೆ ಅತೀ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಗಟ್ಟಿಮೇಳ ಸಿರೀಯಲ್‌ನಿಂದ..
ಇನ್ನು ನಟಿ ಸ್ವಾತಿಯವರ ಸ್ವಾತಿ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರು ಮೈಸೂರಿನಲ್ಲಿ ನಾಗಾರ್ಜುನ ರವಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಸದ್ಯ ನಟಿ ಸ್ವಾತಿ ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ರಾಜಿ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ.. ಈ ಪಾತ್ರವನ್ನು ಅವರು ಹೇಗೆ ನಿಭಾಯಿಸುತ್ತಾರೆ.. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ..