PV Sindhu: ವಿಶ್ವ ಬ್ಯಾಡ್ಮಿಂಟನ್‌ ತಾರೆಯ ಅಪರೂಪದ ಫೋಟೋಗಳು ಇಲ್ಲಿವೆ

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ. ಪಿ.ವಿ. ಸಿಂಧು ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ. 

ಪುಸರ್ಲಾ ವೆಂಕಟ ಸಿಂಧು ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಬ್ಯಾಡ್ಮಿಂಟನ್‌ ಆಟಗಾರ್ತಿ. ಆಗಸ್ಟ್‌ 10, 2012ರಂದು ಚೀನಾದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 
 

1 /5

ಪಿ.ವಿ ಸಿಂಧು ಹುಟ್ಟಿದ್ದು ಜುಲೈ 2, 1995ರಲ್ಲಿ. ತೆಲುಗು ಮೂಲದವರಾದ ಬ್ಯಾಡ್ಮಿಂಟನ್ ಆಟಗಾರ್ತಿ, ಹೈದರಾಬಾದ್‌ನ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇನ್ನು ತಂದೆ ವೃತ್ತಿಪರ ವಾಲಿಬಾಲ್‌ ಆಟಗಾರರಾದರೂ ಸಿಂಧು ಒಲವು ಇದ್ದದ್ದು ಬ್ಯಾಡ್ಮಿಂಟನ್‌ ಮೇಲೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇನ್ಸ್ಟಿಟ್ಯೂಟ್ ಆಫ್ ಸಿಗ್ನಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಸಂಸ್ಥೆಗೆ ಸೇರ್ಪಡೆಕೊಂಡರು. 

2 /5

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆದ ಮೊದಲ ಮತ್ತು ಏಕೈಕ ಭಾರತೀಯ ಹಾಗೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸತತ ಎರಡು ಪದಕಗಳನ್ನು ಗೆದ್ದ ಭಾರತದ ಎರಡನೇ ವೈಯಕ್ತಿಕ ಕ್ರೀಡಾಪಟು ಎಂಬ ಕೀರ್ತಿಗೆ ಸಿಂಧು ಭಾಜನರಾಗಿದ್ದಾರೆ. ಸದ್ಯ ವಿಶ್ವ ಬ್ಯಾಡ್ಮಿಂಟನ್‌ ಶ್ರೇಯಾಂಕದಲ್ಲಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ. 

3 /5

ಬ್ಯಾಡ್ಮಿಂಟನ್ ಮೇಲೆ ಎಷ್ಟರ ಮಟ್ಟಿಗೆ ಸಿಂಧುಗೆ ಒಲವು ಇತ್ತು ಎಂದರೆ, 2012 ರಲ್ಲಿ ಲಕ್ನೋದ ಸೈಯದ್ ಮೋದಿ ಇಂಟರ್ನ್ಯಾಷನಲ್ ಇಂಡಿಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್‌ನಲ್ಲಿ ಆಡುವ ಸಲುವಾಗಿ ತಮ್ಮ ಸಹೋದರಿಯ ಮದುವೆಯನ್ನು ತಪ್ಪಿಸಿಕೊಂಡಿದ್ದರು. ಆಕೆಗೆ ಆಗ 17 ವರ್ಷ ವಯಸ್ಸಾಗಿತ್ತು. 

4 /5

ಸಿಂಧು ಶ್ರಮಗಾರ್ತಿ ಎಂದರೆ ತಪ್ಪಾಗಲಾರು. ಏಕೆಂದರೆ ಮುಂಜಾನೆ 3 ಗಂಟೆಗೆ ಎದ್ದು, ಮನೆಯಿಂದ 60 ಕಿಮೀ ದೂರದಲ್ಲಿರುವ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಹೋಗಿ ತರಬೇತಿ ಪಡೆಯುತ್ತಿದ್ದರು. ಕೇವಲ ತರಬೇತಿಗಾಗಿಯೇ ಪ್ರತಿದಿನ 120 ಕಿ.ಮೀ ಪ್ರಯಾಣಿಸುತ್ತಿದ್ದರು ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ವಿಷಯ. 

5 /5

ಪಿ.ವಿ ಸಿಂಧು ಪಿ.ವಿ ರಮಣ ಮತ್ತು ಪಿ ವಿಜಯಾ ದಂಪತಿಯ ಪುತ್ರಿ. ಇವರು ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಟಿತ ಅರ್ಜುನ ಪ್ರಶಸ್ತಿಗೆ 2000ನೇ ಇಸವಿಯಲ್ಲಿ ಭಾಜನರಾಗಿದ್ದಾರೆ. ಸಿಂಧುಗೆ ಐಸ್‌ಕ್ರೀಂ ಎಂದರೆ ಬಲು ಇಷ್ಟವಂತೆ. ಆದರೆ ರಿಯೋ ಒಲಿಂಪಿಕ್ಸ್‌ಗಾಗಿ ತನ್ನ ನೆಚ್ಚಿನ ಆಹಾರವನ್ನು ತ್ಯಜಿಸಿದ್ದರು.